Daily Horoscope:ಪರರಿಗೆ ಸಹಾಯ ಮಾಡಿದ ತೃಪ್ತಿ,ಉದ್ಯೋಗ ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ
Team Udayavani, Jun 9, 2023, 7:24 AM IST
ಮೇಷ: ವಿದ್ಯಾರ್ಥಿಗಳಿಗೆ ಅದೃಷ್ಟದ ದಿನ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ದೇವತಾ ಸನ್ನಿಧಾನಕ್ಕೆ ಭೇಟಿ. ಗುರುಹಿರಿಯರ ಆಶೀರ್ವಾದದಿಂದ ಸಕಲ ಕಾರ್ಯ ಜಯ, ಸುಖ ಸಂತೋಷ ವೃದ್ಧಿ. ಅನಿರೀಕ್ಷಿತ ಧನ ಲಾಭ. ಆರೋಗ್ಯ ಸುದೃಢ.
ವೃಷಭ: ದೂರ ಸಂಚಾರ. ದೂರದ ವಿದೇಶ ವ್ಯವಹಾರಗಳಲ್ಲಿ ಪ್ರಗತಿ. ಹೆಚ್ಚಿದ ವರಮಾನ. ಸತ್ಕಾರ್ಯಕ್ಕೆ ಧನ ವ್ಯಯ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಅನಗತ್ಯ ಸಹಾಯ ಮಾಡಲು ಹೋಗಿ ತೊಂದರೆಗೊಳಗಾಗದಿರಿ.
ಮಿಥುನ: ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿ. ಸಣ್ಣ ಪ್ರಯಾಣ. ಪರರಿಗೆ ಸಹಾಯ ಮಾಡಿದ ತೃಪ್ತಿ. ಉದ್ಯೋಗ ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ.
ಕರ್ಕ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಸಂಪಾದನೆ. ಮೆಚ್ಚುಗೆ. ಅನಿರೀಕ್ಷಿತ ಪ್ರಗತಿ. ಗೃಹದಲ್ಲಿ ದಾರ್ಮಿಕ ಚಟುವಟಿಕೆಗಳು ನಡೆದು ಸಂಭ್ರಮದ ವಾತಾವರಣ. ಬಂಧುಮಿತ್ರರ ಆಗಮನ. ಅವಿವಾಹಿತರಿಗೆ ಶುಭ ಫಲ.
ಸಿಂಹ: ನಿರೀಕ್ಷಿಸಿದಂತೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಫಲತೆ. ಸ್ಥಾನ ಗೌರವಾದಿ ಸುಖ. ಮಕ್ಕಳಿಂದ ಸಂತೋಷ. ಜನಪದರಿಂದ ಮೆಚ್ಚುಗೆ. ಅಧಿಕಾರ ಪ್ರಾಪ್ತಿ. ಸಂದಭೋìಚಿತ ಮಾರ್ಗದರ್ಶನದಿಂದ ಜನಮನ್ನಣೆ. ಆರೋಗ್ಯದಲ್ಲಿ ಸುದಾರಣೆ.
ಕನ್ಯಾ: ಉಳಿತಾಯದ ಬಗ್ಗೆ ಚಿಂತನೆ. ಹೂಡಿಕೆಗಳಲ್ಲಿ ಆಸಕ್ತಿ. ಎಲ್ಲಾ ತಾಳ್ಮೆ ಸಹನೆ ಅಗತ್ಯ. ಅನಗತ್ಯ ವಿಚಾರಗಳಿಗೆ ತಲೆ ಕೊಡದಿರಿ. ಸಾಧ್ಯವಾದಷ್ಟು ಮೌನ ವಹಿಸುವುದು ಉತ್ತಮ. ದೇವತಾ ಸ್ಥಳ ಸಂದರ್ಶನದಿಂದ ನೆಮ್ಮದಿ.
ತುಲಾ: ಗುರು ಹಿರಿಯರ ಆಶೀರ್ವಾದದಿಂದ ಹೆಚ್ಚಿದ ಸ್ಥಾನ ವೃದ್ಧಿ. ಸಹೋದ್ಯೋಗಿಗಳ ಸಹಕಾರದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಹಾಗೂ ಹೆಚ್ಚಿನ ಸಂಪಾದನೆ ಪ್ರಾಪ್ತಿ. ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಚರ್ಚೆ ಸಂಭವ. ದಾಂಪತ್ಯ ಸುಖ ವೃದ್ಧಿ.
ವೃಶ್ಚಿಕ: ಉದ್ಯೋಗ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ. ನಿರೀಕ್ಷೆಗೆ ಸರಿಯಾಗಿ ಧನಾಗಮ. ಭೂಮ್ಯಾದಿ ವ್ಯವಹಾರಗಳಲ್ಲಿ ಅಡಚಣೆ ವಿಳಂಬ. ಮಾನಸಿಕ ಒತ್ತಡ. ದಂಪತಿಗಳಲ್ಲಿ ಪರಸ್ಪರ ಸಹಕಾರ. ಮಕ್ಕಳಿಂದ ಸಂತೋಷ ವೃದ್ಧಿ.
ಧನು: ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಅವಿವಾಹಿತರಿಗೆ ವಿವಾಹ ಭಾಗ್ಯ. ನೂತನ ಮಿತ್ರರ ಸಮಾಗಮ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಗೃಹದಲ್ಲಿ ಸಂತಸದ ವಾತಾವರಣ. ಅತಿಯಾದ ಪರಿಶ್ರಮದಿಂದ ಧನವೃದ್ಧಿ.
ಮಕರ: ದಾಂಪತ್ಯದಲ್ಲಿ ಪರಸ್ಪರ ಅನುರಾಗ ವೃದ್ಧಿ. ದೀರ್ಘ ಪ್ರಯಾಣ ಸಂಭವ. ಭೂಮ್ಯಾದಿ ವಿಚಾರಗಳಲ್ಲಿ, ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಎಚ್ಚರಿಕೆಯ ನಡೆ ಅಗತ್ಯ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಶ್ರಮ ಜವಾಬ್ದಾರಿ.
ಕುಂಭ: ಆರೋಗ್ಯ ಗಮನಿಸಿ. ನಡೆನುಡಿಗಳಲ್ಲಿ ಸ್ಪಷ್ಟತೆ ಇರಲಿ. ಅನ್ಯಥಾ ತೊಂದರೆಗಳನ್ನು ನಿಯಂತ್ರಿಸದಿರಿ. ಭೂಮ್ಯಾದಿ ವ್ಯವಹಾರಗಳಲ್ಲಿ ಏರುಪೇರು ಸಂಭವ. ಮಕ್ಕಳಿಗೆ ದೂರ ಪ್ರಯಾಣ. ಅಧ್ಯಯನ ನಿಮಿತ್ತ ದಂಪತಿಗಳು ಸಾಮರಸ್ಯ ಕಾಪಾಡಿಕೊಳ್ಳಿ.
ಮೀನ: ವೃದ್ಧಿದಾಯಕ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಧನಾಗಮನ ಸ್ಥಾನ, ಕೀರ್ತಿ ಪ್ರಶಂಸೆ ಪ್ರಾಪ್ತಿ. ಉತ್ತಮ ವಾಕ್ ಚಾತುರ್ಯ, ಮನೋರಂಜನೆ, ಸಾಂಸಾರಿಕ ಸುಖ ವೃದ್ಧಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.