ರಾಶಿ ಫಲ: ಅವಿವಾಹಿತರಿಗೆ ವಿವಾಹ ಭಾಗ್ಯ, ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ
Team Udayavani, Mar 28, 2023, 7:19 AM IST
ಮೇಷ: ವ್ಯಾಪಾರ ವ್ಯವಹಾರ ಉದ್ಯೋಗದಲ್ಲಿ ವಿಶ್ವಾಸ ಪಾತ್ರರಾಗಿ ಜವಾಬ್ದಾರಿ ನಿರ್ವಹಿಸಿ. ಪರರ ಹಣ ನಿರ್ವಹಿಸುವಾಗ ಪಾರದರ್ಶಕತೆಗೆ ಆದ್ಯತೆ ನೀಡಿ. ಹೆದರದೇ ಕೆಲಸ ಮಾಡಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಮನೋರಂಜನೆಯಿಂದ ಕೂಡಿದ ದಿನ.
ವೃಷಭ: ಗೃಹ, ವಾಹನಾದಿ ಸುಖ ವೃದ್ಧಿ. ನೂತನ ಬಂಧು ಮಿತ್ರರ ಸಂಗಮ. ಕೆಲಸ ಕಾರ್ಯಗಳಲ್ಲಿ ಗೌರವಾನ್ವಿತ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಜಾಣತನ ಜವಾಬ್ದಾರಿ ಪ್ರದರ್ಶಿಸಿ. ಜನಮನ್ನಣೆ ಲಭ್ಯ. ಪ್ರಗತಿದಾಯಕ ಧನಾರ್ಜನೆ, ಧನ ಸದ್ವಿನಿಯೋಗ.
ಮಿಥುನ: ಧಾರ್ಮಿಕ ಚಟುವಟಿಕೆಗಳಲ್ಲಿ ತಲ್ಲೀನತೆ. ದೇವತಾ ಸ್ಥಳಗಳ ಸಂದರ್ಶನ. ಅವಿವಾಹಿತರಿಗೆ ವಿವಾಹ ಭಾಗ್ಯ. ಯೋಗ್ಯ ವಧು- ವರ ಲಭಿಸಿದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉಳಿತಾಯದಲ್ಲಿ ಆಸಕ್ತಿ. ಗುರು ಹಿರಿಯರಿಗೆ ಸಂತೋಷ.
ಕರ್ಕ: ದೀರ್ಘ ಪ್ರಯಾಣ. ಗುರು ಹಿರಿಯರಿಗೆ ಸಂತೋಷಪ್ರದರಾಗಿರಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಸಾಮಾನ್ಯ ಧನ ವೃದ್ಧಿ.
ಸಿಂಹ: ಅನಗತ್ಯ ವಿಚಾರದಲ್ಲಿ ತೊಡಗಿಸಿಕೊಂಡು ತೊಂದರೆ ಎಳೆದುಕೊಳ್ಳದಿರಿ. ದಾಕ್ಷಿಣ್ಯಕ್ಕೆ ಒಳಗಾಗದೆ ಜವಾಬ್ದಾರಿಯುತ ಮಾತುಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ದೂರದ ಮಿತ್ರರಿಂದ ಸಹಕಾರ. ಅವಿವಾಹಿತರಿಗೆ ವಿವಾಹ ಯೋಗ.
ಕನ್ಯಾ: ಹಠ ಮಾಡದೇ ತಾಳ್ಮೆ ಸಹನೆಯಿಂದ ಕಾರ್ಯಪ್ರವೃತ್ತರಾಗುವುದರಿಂದ ಎಲ್ಲಾ ವ್ಯವಹಾರಗಳಲ್ಲಿ ಗಣನೀಯ ಪ್ರಗತಿ. ಕೀರ್ತಿ ಶ್ಲಾಘನೆ ಲಭ್ಯ. ಜವಾಬ್ದಾರಿಯುತ ಮಾತಿನಿಂದ ಜನ ಪ್ರಶಂಸೆ. ವಿದ್ಯಾರ್ಥಿಗಳಿಗೆ ಜ್ಞಾನ ವಿಚಾರಗಳಿಗೆ ಸದ್‌ವ್ಯಯ.
ತುಲಾ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಬಹು ವಿಧದ ಚಟುವಟಿಕೆಗಳಿಂದ ಕೂಡಿದ ದಿನಚರಿ. ಹೆಚ್ಚಿದ ಧನಸಂಪತ್ತು. ಮಿತ್ರರ ಸಹಕಾರ ಮಾನ್ಯತೆ ಲಭ್ಯ. ಅಧ್ಯಯನ ಆಕಾಂಕ್ಷಿಗಳಿಗೆ ಹೆಚ್ಚಿದ ಅವಕಾಶ ಸವಲತ್ತು. ಗೃಹೋಪಯೋಗಿ ವಸ್ತುಗಳ ಸಂಗ್ರಹ.
ವೃಶ್ಚಿಕ: ದೈರ್ಯ ಶೌರ್ಯ ಪರಾಕ್ರಮ ಅಧಿಕಾರಯುತ ನಡೆಯಿಂದ ಕೂಡಿದ ದಿನಚರಿ. ಮಾತಿನಲ್ಲಿ ತಾಳ್ಮೆ ಪ್ರೀತಿ ವಹಿಸಿದಲ್ಲಿ ಯಶಸ್ಸು ನಿಮ್ಮದಾಗಲಿದೆ. ಹೆಚ್ಚಿದ ವರಮಾನ ದಂಪತಿಗಳಲ್ಲಿ ಪರಸ್ಪರ ಸಹಕಾರ ಲಭ್ಯ. ಹೂಡಿಕೆ ಉಳಿತಾಯದಲ್ಲಿ ಪ್ರಗತಿ.
ಧನು: ಸಮಯ ಸಂದರ್ಭಕ್ಕೆ ಸರಿಯಾಗಿ ಪ್ರತಿಭೆ ಬುದ್ಧಿವಂತಿಕೆ ಪ್ರದರ್ಶನ, ಜನಮನ್ನಣೆ, ಪ್ರಶಂಸೆ ಲಭ್ಯ. ಆರ್ಥಿಕವಾಗಿ ಬಲಿಷ್ಠತೆ. ಉತ್ತಮ ವಾಕ್‌ಚತುರತೆ. ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಒದಗುವ ಸಮಯ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.
ಮಕರ: ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಪ್ರಗತಿ. ಬಹುಜನರ ಸಹಾಯ ಮಾನ್ಯತೆ. ಜನಮನ್ನಣೆ ಲಭ್ಯ. ಆಸ್ತಿ ವಿಚಾರದಲ್ಲಿ ಸಂತೋಷ. ಬಂಧು- ಮಿತ್ರರ ಆಗಮನ ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ. ದಾಂಪತ್ಯ ತೃಪ್ತಿಕರ.
ಕುಂಭ: ಸಾಂಸಾರಿಕ ಜವಾಬ್ದಾರಿ. ಅವಿವಾಹಿತರಿಗೆ ವಿವಾಹ ಯೋಗ. ದೇವತಾ ಸ್ಥಳ ಸಂದರ್ಶನ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ಹೆಚ್ಚಿದ ಲಾಭ. ಸಮಾಜಮುಖೀ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ.
ಮೀನ: ಆರೋಗ್ಯ ಸುದೃಢ. ಅಧಿಕ ಧನಲಾಭ. ಸರಳತೆಯಿಂದ ಕೂಡಿದ ದಿನಚರಿ. ಜನಮೆಚ್ಚುಗೆಯ ವ್ಯವಹಾರ. ದೂರದ ಬಂಧು- ಮಿತ್ರರ ಭೇಟಿ. ಸಂಭ್ರಮದ ವಾತಾವರಣ. ಹೂಡಿಕೆಗಳಲ್ಲಿ ಆಸಕ್ತಿ ಮುಂದುವರಿಕೆ. ನಾನಾ ರೀತಿಯಲ್ಲಿ ಧನ ಸದ್ವಿನಿಯೋಗ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.