ಹೊಸಪೇಟೆ: ವಿಜಯನಗರದ ಕಾಲದ ಅಪರೂಪದ ಮಾಸ್ತಿಕಲ್ಲು ಪತ್ತೆ
ಈಗಿನ ನಾಗೇನಹಳ್ಳಿಯನ್ನು ನಾಗಲಾಪುರ ಎಂತಲೂ ಕರೆಯಲಾಗುತ್ತಿದೆ..
Team Udayavani, Oct 15, 2024, 6:06 PM IST
ಉದಯವಾಣಿ ಸಮಾಚಾರ
ಹೊಸಪೇಟೆ: ನಗರದ ಮುದ್ದಾಪುರದ ಆಂಜನೇಯ ದೇವಾಲಯದ ಬಳಿ ಅಪರೂಪದ ಮಾಸ್ತಿಗಲ್ಲು ಮತ್ತು ಅಪೂರ್ಣ ಶಾಸನದ ಕಲ್ಲನ್ನು ವಿಜಯನಗರ ತಿರುಗಾಟ ಸಂಶೋಧನಾ ತಂಡ ಇತ್ತೀಚಿಗೆ ಪತ್ತೆ ಮಾಡಿದೆ. ಮಾಸ್ತಿಕಲ್ಲುಗಳು ಬಹುತೇಕವಾಗಿ ಮಹಿಳೆಯೊಬ್ಬರು ಕೈಯಲ್ಲಿ ನಿಂಬೆಹಣ್ಣು ಹಿಡಿದಿರುವ, ಇಲ್ಲವೇ ಕೈಯನ್ನು ಮೇಲೆ ಎತ್ತಿರುವ ಚಿತ್ರಣ ಕಂಡುಬರುವುದು
ಸಹಜ. ಆದರೆ ಚಿತ್ರದಲ್ಲಿ ಕೆತ್ತಿರುವ ಮಹಿಳೆಯು ನಿಂತಿರುವ ಭಂಗಿಯಲ್ಲಿರುವುದು ತುಂಬಾ ವಿಶೇಷವಾಗಿದೆ.
ತಲೆಗೆ ಕಿರೀಟ, ನಡುವಿಗೆ ನಡುಪಟ್ಟಿ ಧರಿಸಿದ್ದಾಳೆ. ಕಿವಿಯ ಓಲೆಯೂ ಕಾಣಿಸುತ್ತಿದ್ದು, ಪಟ್ಟಿಯಾಕರದ ಸೀರೆ ಧರಿಸಿದ್ದಾಳೆ. ಶೈವಧರ್ಮದ ಪ್ರತೀಕವಾದ ಈ ಮಾಸ್ತಿಕಲ್ಲು ಎರಡು ಹಂತದಲ್ಲಿ ಕೆತ್ತಲಾಗಿದೆ. ರಾಜ ಅಥವಾ ಪಾಳೆಯಗಾರನ ಪತ್ನಿ ಮರಣ ಹೊಂದಿದ ಹಿನ್ನೆಲೆ ಆಕೆಯ ಸ್ಮರಣಾರ್ಥ ಈ ಮಾಸ್ತಿಕಲ್ಲುನ್ನು ಕೆತ್ತಿರಬಹುದು ಎಂದು ಕನ್ನಡ ವಿಶ್ವವಿದ್ಯಾಲಯದ ಸಹಾಯಕ
ಪ್ರಾಧ್ಯಾಪಕ ಡಾ| ಗೋವಿಂದ ತಿಳಿಸಿದ್ದಾರೆ.
ಪುರಗಳ ನಾಮಕರಣ: ವಿಜಯನಗರ ಸಾಮ್ರಾಜ್ಯದಲ್ಲಿ ನಗರದ ಸಣ್ಣಕ್ಕಿ ವೀರಭದ್ರೇಶ್ವರ ಪ್ರದೇಶವನ್ನು ವರದ ರಾಜಮ್ಮನ ಪಟ್ಟಣ ಎಂದು ಕರೆಯುತ್ತಿದ್ದರು. ಚಿನ್ನಾಂಭಿಕೆಯ ನೆನಪಿಗಾಗಿ ಇಂದಿನ ಚಿತ್ತವಾಡ್ಗಿ ಪ್ರದೇಶವನ್ನು ಚಿನ್ನಾಪುರ ಎಂತಲೂ, ಕೃಷ್ಣದೇವರಾಯನ ತಾಯಿ ನಾಗಲಾದೇವಿ ಸ್ಮರಣಾರ್ಥ ಈಗಿನ ನಾಗೇನಹಳ್ಳಿಯನ್ನು ನಾಗಲಾಪುರ ಎಂತಲೂ ಈಗ ದೊರಕಿರುವ ಶಾಸನಗಳಿಂದ ತಿಳಿದು ಬರುತ್ತದೆ.
ಈಗ ದೊರಕಿರುವ ಅಪ್ರಕಟಿತ ಶಾಸನ ಸಹ ಮದ್ದಲಾಪುರ ಪ್ರದೇಶದಲ್ಲಿ ದೊರೆತಿರುವ ಶಾಸನವಾಗಿದೆ. ಇದು ವಿಜಯನರ ಸಾಮ್ರಾಜ್ಯದ ಶೈಲಿಯನ್ನು ಹೋಲುತ್ತದೆ. ಸತಿ ಸಹಗಮನ ವಾದ ಆಗಿರುವುದನ್ನು ಸೂಚಿಸುತ್ತದೆ. ಮಹಿಳೆಯ ಪಕ್ಕದಲ್ಲಿ ಪದ್ಮಾಸನದ ಭಂಗಿಯಲ್ಲಿ ಕುಳಿತಿರುವ ಮಹಿಳೆಯ ಎಡ ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಂಡಿರುವಂತಿದೆ. ಮೇಲ್ಭಾಗದಲ್ಲಿ ಶಿವನಲಿಂಗಾಕಾರದ ಚಿತ್ರವಿದೆ. ಇದರಿಂದ ಈ ಮಾಸ್ತಿಕಲ್ಲು ಶೈವ ಧರ್ಮವನ್ನು ಪ್ರತಿನಿಧಿಸುತ್ತದೆ ಎಂದು ತಂಡದ ಮತ್ತೋರ್ವ ಸದಸ್ಯ ಪ್ರೊ|ಎಚ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಅಪೂರ್ಣ ಶಾಸನ ಕಲ್ಲು ಪತ್ತೆ: ಇದೇ ಜಾಗದಲ್ಲಿ ಬೃಹದಾಕಾರದ ಅಪೂರ್ಣ ಶಿವಲಿಂಗ ಚಿತ್ರವುಳ್ಳ ಶಾಸನ ಕಲ್ಲು ಪತ್ತೆಯಾಯಿತು. 6 ಅಡಿ ಎತ್ತರ ಮತ್ತು 2 ಅಡಿ ಅಗಲವುಳ್ಳ ಶಾಸನಕಲ್ಲಿಗೆ ಯಾವುದೇ ಕೆತ್ತನೆ ಕಾಣಸಿಕ್ಕಿಲ್ಲ. ಆದರೂ ಈ ಕಲ್ಲಿನ ಮೇಲ್ಭಾಗದ ಎಡಕ್ಕೆ ಸೂರ್ಯನ, ಬಲಕ್ಕೆ ಚಂದ್ರನ ಚಿತ್ರವಿದೆ. ಇದರ ಕೆಳ ಭಾಗದಲ್ಲಿ ಸುಂದರವಾದ ಶಿವಲಿಂಗ ಚಿತ್ರ ಕೆತ್ತಲಾಗಿದೆ.
ಸಂಶೋಧನಾರ್ಥಿ ಚಿದಾನಂದ ಅವರ ಸಹಕಾರದಿಂದ ಕನ್ನಡ ವಿವಿ ಸಹಾಯಕ ಪ್ರಾಧ್ಯಾಪಕ ಡಾ| ಗೋವಿಂದ, ದೃಶ್ಯಕಲಾ ವಿಭಾಗದ ಡಾ|ಕೃಷ್ಣೇಗೌಡ, ಅಭಿವೃದ್ಧಿ ಅಧ್ಯಯನ ವಿಭಾಗದ ಡಾ| ಗೋವರ್ಧನ, ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ|ಎಚ್. ತಿಪ್ಪೇಸ್ವಾಮಿ, ಸಂಶೋಧಕರಾದ ಡಾ| ವೀರಾಂಜನೇಯ, ಎಚ್. ರವಿ ಶೋಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Weightlifting: ಏಷ್ಯನ್ ವೇಟ್ ಲಿಫ್ಟಿಂಗ್; ಭಾರತಕ್ಕೆ ಎರಡು ಬೆಳ್ಳಿ
Junior World Cup shooting: ಭಾರತದ ಆತಿಥ್ಯದಲ್ಲಿ ಜೂ. ವಿಶ್ವಕಪ್ ಶೂಟಿಂಗ್
Udupi: ಕುದ್ರು ನೆಸ್ಟ್ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.