Gaza: ಒತ್ತೆಯಾಳು,ಕೈದಿಗಳ ಬಿಡುಗಡೆ ಪ್ರಕ್ರಿಯೆ ಶುರು- ಗಾಜಾದಲ್ಲಿ 4 ದಿನಗಳ ಕದನ ವಿರಾಮ ಜಾರಿ
Team Udayavani, Nov 24, 2023, 9:30 PM IST
ದೇರ್ ಅಲ್-ಬಾಲಾ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಬಹು ನಿರೀಕ್ಷಿತ ನಾಲ್ಕು ದಿನಗಳ ಕದನ ವಿರಾಮ ಶುಕ್ರವಾರದಿಂದ ಜಾರಿಯಾಗಿದೆ. ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಪ್ಯಾಲೆಸ್ತೀನಿ ಕೈದಿಗಳನ್ನು ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೂ ಮುನ್ನ ಇಸ್ರೇಲ್ ದಾಳಿಯನ್ನು ಸ್ಥಗಿತಗೊಳಿಸಿದೆ. ಅದಕ್ಕೆ ಪೂರಕವಾಗಿ 13 ಮಂದಿ ಒತ್ತೆಯಾಳುಗಳನ್ನು ಹಮಾಸ್ ಉಗ್ರರು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕುಡಿವ ನೀರು, ಔಷಧ, ಶಸ್ತ್ರಚಿಕಿತ್ಸಾ ಉಪಕರಣಗಳು, ಆಹಾರ ಸೇರಿದಂತೆ ಹಲವು ಗಾಜಾ ಪಟ್ಟಿಯ ಜನರಿಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಹೊತ್ತಿರುವ ಕನಿಷ್ಠ 200 ಟ್ರಕ್ಗಳು ಯುದ್ಧದಿಂದ ಜರ್ಝರಿತವಾಗಿರುವ ಪ್ರದೇಶವನ್ನು ಪ್ರವೇಶ ಮಾಡಿವೆ. ಇದರಿಂದಾಗಿ ಗಾಜಾ ಪಟ್ಟಿಯಲ್ಲಿರುವ 23 ಲಕ್ಷ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ಇದೇ ವೇಳೆ, ಹಮಾಸ್ ಉಗ್ರ ಸಂಘಟನೆ ಕೂಡ ಕದನ ವಿರಾಮ ನಿಯಮಗಳಿಗೆ ಬದ್ಧವಾಗಿರುವುದಾಗಿಯೂ ಹೇಳಿದೆ. ಇನ್ನೊಂದೆಡೆ, ನಾಲ್ಕು ದಿನಗಳಿಗೆ ಮಾತ್ರ ಕದನ ವಿರಾಮ ಎಂದು ಹೇಳಿಕೊಂಡಿರುವ ಇಸ್ರೇಲ್ ಸೇನಾ ಪಡೆ, ಯುದ್ಧ ಇನ್ನೂ ಮುಕ್ತಾಯವಾಗಿಲ್ಲ ಎಂದು ಸುಳಿವು ನೀಡಿದೆ. ಹಮಾಸ್ ಜತೆಗೆ ಮಾಡಿಕೊಂಡ ಕದನ ವಿರಾಮ ಮಾತ್ರ ಇದಾಗಿದ್ದು, ಲೆಬನಾನ್ನ ಉಗ್ರ ಸಂಘಟನೆ ಹೆಜ್ಬುಲ್ಲಾ ಜತೆಗೆ ಇಂಥ ಒಪ್ಪಂದ ಆಗಿಲ್ಲದಿರುವುದರಿಂದ ಅಲ್ಲಿ ಯುದ್ಧ ಮುಂದುವರಿಯುವ ಸಾಧ್ಯತೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.