ಉಡುಪಿಯಲ್ಲಿ ಮನೆ ಮನೆ ನೈರ್ಮಲ್ಯ ಗಣತಿ; ರಾಜ್ಯದಲ್ಲಿ ಮೊದಲ ಬಾರಿಗೆ ಯೋಜನೆ ಜಾರಿ
Team Udayavani, Oct 6, 2021, 6:50 AM IST
ಸಾಂದರ್ಭಿಕ ಚಿತ್ರ.
ಉಡುಪಿ ರಾಜ್ಯದಲ್ಲಿ ಮೊದಲ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ನೈರ್ಮಲ್ಯ ಸ್ಥಿತಿಗತಿಯ ಅಧ್ಯಯನ ನಡೆಸಲು “ಮನೆ ಮನೆ ನೈರ್ಮಲ್ಯ ಗಣತಿ’ ಪ್ರಾರಂಭವಾಗಿದೆ. ಈ ಗಣತಿಯ ಆಧಾರದಲ್ಲಿ ಜಿಲ್ಲೆಯ ನೈರ್ಮಲ್ಯ ಸ್ಥಿತಿ ಸುಧಾರಣೆಗೆ ವಿವಿಧ ಯೋಜನೆ ರೂಪಿಸಲು ಉದ್ದೇಶಿಸಲಾಗಿದೆ.
ಜಿಲ್ಲೆಯ 155 ಗ್ರಾಮಗಳ 2.41 ಲಕ್ಷ ಮನೆಗಳನ್ನು ಸಂಪರ್ಕಿಸಿ, ನೈರ್ಮಲ್ಯ ಸ್ಥಿತಿಯ ಬಗ್ಗೆ ಸಮಗ್ರ ವರದಿ ಪಡೆಯ ಲಾಗುತ್ತಿದೆ. ಅದಕ್ಕಾಗಿ ಪ್ರತೀ 1 ಸಾವಿರ ಜನಸಂಖ್ಯೆಗೆ ನಾಲ್ವರು ಗಣತಿದಾರರಂತೆ ಒಟ್ಟು 800 ಮಂದಿಯನ್ನು ನಿಯೋಜಿಸಲಾಗಿದೆ. ಅ. 2ರಂದು ಗಣತಿ ಪ್ರಾರಂಭವಾಗಿದ್ದು, ಅ. 12ಕ್ಕೆ ಮುಕ್ತಾಯಗೊಳಿಸುವ ಗುರಿ ಇದೆ.
ಮಾಹಿತಿ ಸಂಗ್ರಹ
ಗಣತಿಯಲ್ಲಿ ಕುಟುಂಬಗಳ ಶೌಚಾಲಯ ಬಳಕೆ, ವಿಲೇವಾರಿ ವಿಧಾನ, ತ್ಯಾಜ್ಯ ವಿಂಗಡಣೆ- ವಿಲೇವಾರಿ ವಿಧಾನ, ದ್ರವತ್ಯಾಜ್ಯ ನಿರ್ವಹಣೆ ವಿಧಾನ ಸಹಿತ ಪ್ರಮುಖ ಮಾಹಿತಿ ಸಂಗ್ರಹಿಸಲಾಗುತ್ತದೆ.
ಅರಿವು ಕಾರ್ಯಕ್ರಮ
ನೈರ್ಮಲ್ಯ ಗಣತಿಯೊಂದಿಗೆ ಕುಟುಂಬಗಳಿಗೆ ನೈರ್ಮಲ್ಯದ ಬಗ್ಗೆ ಮಾಹಿತಿ, ಅವಳಿ ಗುಂಡಿ ಶೌಚಾ ಲಯದ ಮಹತ್ವ, ಮ್ಯಾನುವಲ್
ಸ್ಕ್ಯಾವೆಂಜರ್ ನಿಷೇಧ ಕಾಯಿದೆ, ಹಸಿ ತ್ಯಾಜ್ಯ ನಿರ್ವಹಣೆ ವಿಧಾನ, ಒಣತ್ಯಾಜ್ಯ ನಿರ್ವಹಣೆ, ಋತುಚಕ್ರ ತ್ಯಾಜ್ಯ ನಿರ್ವಹಣೆ, ಬೂದು ನೀರು ನಿರ್ವಹಣೆ ಅಗತ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಸಂಪರ್ಕ ಒದಗಿಸಲು ನೆರವು
ನರೇಗಾದಡಿ ಮನೆಯಲ್ಲಿ ಉತ್ಪತ್ತಿ ಯಾಗುವ ಅಶುದ್ಧ ನೀರಿನ ನಿರ್ವಹಣೆಗೆ ಬಚ್ಚಲು ಗುಂಡಿ ನಿರ್ಮಾಣ, ಹಸಿತ್ಯಾಜ್ಯ ನಿರ್ವಹಣೆಗೆ ಪೌಷ್ಟಿಕ ತೋಟ ನಿರ್ಮಾಣ, ಎರೆಹುಳು ಘಟಕ, ಗೊಬ್ಬರ ಗುಂಡಿ ನಿರ್ಮಾಣ, “ಮನೆ ಮನೆಗೆ ಗಂಗೆ’ ಯೋಜನೆ ಯಡಿ ಶುದ್ಧ ಕುಡಿಯುವ ನೀರು ಒದಗಿಸುವ ಕುರಿತು ಮಾಹಿತಿ ನೀಡಲಾಗುತ್ತದೆ. ನೀರಿನ ಸಂಪರ್ಕವಿಲ್ಲದ ಮನೆಗಳ ಮಾಹಿತಿ ಸಂಗ್ರಹಿಸಿ ಸಂಪರ್ಕ ಒದಗಿಸಲು ನೆರವು ನೀಡಲಾಗುತ್ತದೆ.
ಇದನ್ನೂ ಓದಿ:ವಾಹನ ನೋಂದಣಿ ನವೀಕರಣಕ್ಕೆ 8 ಪಟ್ಟು ಹೆಚ್ಚು ಶುಲ್ಕ
ಗಣತಿ ಸಮಯದಲ್ಲಿ ಜನರಿಗೆ ನೀಡುವ ಕೈಪಿಡಿಯಲ್ಲಿ ಕ್ಯುಆರ್ ಕೋಡ್ ಅಳವಡಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿ ನೈರ್ಮಲ್ಯ ಸಂಬಂಧಿ 5 ವೀಡಿಯೋಗಳನ್ನು ವೀಕ್ಷಿಸಬಹುದು.
ನೈರ್ಮಲ್ಯ ಗಣತಿಯ ಮೂಲಕ ಜಿಲ್ಲೆಯ ಪ್ರತೀ ಮನೆಯಲ್ಲಿ ನೈರ್ಮಲ್ಯ ಮತ್ತು ಕುಡಿಯುವ ನೀರಿನ ಅಗತ್ಯ ಹಾಗೂ ಸಮಸ್ಯೆಗಳ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ. ಈ ಮಾಹಿತಿಯ ಆಧಾರದಲ್ಲಿ ಇಡೀ ಜಿಲ್ಲೆಗೆ ಸ್ವತ್ಛ ಕುಡಿಯುವ ನೀರು ಒದಗಿಸಲು ಮತ್ತು ಶುಚಿತ್ವದ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುತ್ತದೆ. ಇದರಿಂದ ಉಡುಪಿಯನ್ನು ಸಂಪೂರ್ಣ ನೈರ್ಮಲ್ಯ ಮತ್ತು ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಸಾಧ್ಯ.
– ಡಾ| ನವೀನ್ ಭಟ್, ಉಡುಪಿ ಜಿ.ಪಂ. ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.