ಆಟಗಾರರೇ ಭಾಗಿಯಾಗದೆ ಫಿಕ್ಸಿಂಗ್ ಹೇಗೆ ಸಾಧ್ಯ: ಜಯವರ್ಧನ ಪ್ರಶ್ನೆ
Team Udayavani, Jun 21, 2020, 5:15 AM IST
ಕೊಲಂಬೊ: ಆಡುವ ಬಳಗದ ಎರಡೂ ತಂಡಗಳ ಆಟಗಾರರ್ಯಾರೂ ಭಾಗಿ ಯಾಗದೇ ಇರುವಾಗ ಕ್ರಿಕೆಟ್ ಪಂದ್ಯವೊಂದನ್ನು ಫಿಕ್ಸ್ ಮಾಡಲು ಹೇಗೆ ಸಾಧ್ಯ ಎಂಬುದಾಗಿ ಶ್ರೀಲಂಕಾದ ಮಾಜಿ ನಾಯಕ ಮಾಹೇಲ ಜಯವರ್ಧನ ಪ್ರಶ್ನಿಸಿದ್ದಾರೆ. ಭಾರತದೆದುರಿನ 2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ಶ್ರೀಲಂಕಾ “ಮಾರಾಟ ಮಾಡಿತ್ತು’ ಎಂಬ ತನ್ನ ದೇಶದ ಮಾಜಿ ಕ್ರೀಡಾ ಸಚಿವರ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.
“ಇದೊಂದು ದೊಡ್ಡ ವ್ಯವ ಹಾರವೆಂದೇ ಭಾವಿಸೋಣ. ಆದರೆ ಹನ್ನೊಂದರ ಯಾವ ಆಟಗಾರರೂ ಒಳಗೊಂಡಿಲ್ಲ ಅಂದಮೇಲೆ ಪಂದ್ಯವೊಂದನ್ನು ಫಿಕ್ಸ್ ಮಾಡಲು ಹೇಗೆ ಸಾಧ್ಯ? 9 ವರ್ಷಗಳ ಬಳಿಕ ಅವರಿಗೆ ಜ್ಞಾನೋದಯ ಆಯಿತೇ?’ ಎಂಬುದಾಗಿ ಮಾಹೇಲ ಜಯವರ್ಧನ ವ್ಯಂಗ್ಯ ವಾಗಿ ಪ್ರಶ್ನಿಸಿದ್ದಾರೆ.
ಅಂದೇ ಅರ್ಜುನ ರಣತುಂಗ ಆರೋಪ
ಈ ಪಂದ್ಯ ಫಿಕ್ಸ್ ಆಗಿತ್ತು ಎಂಬುದಾಗಿ ನೇರ ಆರೋಪ ಮಾಡಿದವರಲ್ಲಿ ಅಲುತಗಾಮಗೆ ಮೊದಲಿಗರೇನಲ್ಲ. ಲಂಕೆಗೆ ಏಕೈಕ ವಿಶ್ವಕಪ್ ತಂದಿತ್ತ ಕಪ್ತಾನ ಅರ್ಜುನ ರಣತುಂಗ 2017ರಲ್ಲಿ ಮೊದಲ ಸಲ ಇಂಥದೇ ಅನುಮಾನ ವ್ಯಕ್ತಪಡಿಸಿದ್ದರು. “ಆಗ ನಾನು ಭಾರತದಲ್ಲೇ ಇದ್ದು, ವೀಕ್ಷಕ ವಿವರಣೆ ನೀಡುತ್ತಿದ್ದೆ. ಲಂಕಾ ಸೋತಾಗ ನನಗೆ ಆಘಾತವಾಗಿತ್ತು, ಅನುಮಾನವೂ ಬಂದಿತ್ತು. ಅಂದಿನ ಫೈನಲ್ ಪಂದ್ಯವನ್ನು ತನಿಖೆಗೆ ಒಳಪಡಿಸಬೇಕು ಎಂದಿದ್ದೆ…’ ಎಂಬುದಾಗಿ ರಣತುಂಗ ಆಗ್ರಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.