ಸದ್ದೆಂದರೆ ಎಷ್ಟು ದೊಡ್ಡದು! ಸದ್ದು ಗದ್ದಲದ ನಡುವೆಕೇಳುವ ಸಾಮರ್ಥ್ಯ ರಕ್ಷಣೆ


Team Udayavani, May 31, 2020, 5:00 AM IST

ಸದ್ದೆಂದರೆ ಎಷ್ಟು ದೊಡ್ಡದು! ಸದ್ದು ಗದ್ದಲದ ನಡುವೆಕೇಳುವ ಸಾಮರ್ಥ್ಯ ರಕ್ಷಣೆ

ಸದ್ದುಗಳು ಕಿವಿಗೆ ಹಿತಕರವೂ ಆಗಿರಬಹುದು; ಹಾನಿಕಾರಕವೂ ಆಗಬಹುದು. ಕಿವಿಗೆ ಹಿತಕರವಲ್ಲದ ಸದ್ದುಗಳನ್ನು ಗದ್ದಲ ಎಂಬುದಾಗಿ ಕರೆಯಬಹುದು. ಕಿವಿಯು ಗದ್ದಲವನ್ನು ಕೇಳಿಸಿಕೊಳ್ಳುವುದರ ಪರಿಣಾಮವು ಕೇವಲ ಕಿರಿಕಿರಿಗೆ ಮಾತ್ರ ಸೀಮಿತವಾಗದೆ ಆಲಿಸುವ ಸಾಮರ್ಥ್ಯಕ್ಕೆ ಹಾನಿಯನ್ನೂ ಉಂಟು ಮಾಡಬಹುದು. ಗದ್ದಲದ ಪರಿಣಾಮವಾಗಿ ವ್ಯಕ್ತಿಯ ಕಿವಿಯ ಸಂರಚನೆಗೆ ಮಾತ್ರ ಹಾನಿಯಾಗುವುದಲ್ಲ; ಇತರ ಜೀವಾಧಾರಕ ಅಂಗಾಂಗಗಳಿಗೂ ತೊಂದರೆ ಉಂಟಾಗಬಹುದು. ಸತತವಾಗಿ ಗದ್ದಲವನ್ನು ಕೇಳಿಸಿಕೊಳ್ಳುವುದರಿಂದ ತಲೆನೋವು, ಖಿನ್ನತೆ, ಅಪಘಾತಗಳು ಉಂಟಾಗುವ ಸಾಧ್ಯತೆ ಹೆಚ್ಚಳ, ನಾಡಿಮಿಡಿತ, ಹೃದಯ ಬಡಿತದ ಗತಿ ಹೆಚ್ಚಳ ಮುಂತಾದ ಹೃದಯ ಸಂಬಂಧಿ ತೊಂದರೆಗಳು, ರಕ್ತನಾಳಗಳಿಗೆ ಸಂಬಂಧಿಸಿದ ಹೃದ್ರೋಗಗಳು ಹಾಗೂ ಅಧಿಕ ರಕ್ತದೊತ್ತಡಗಳೂ ತಲೆದೋರಬಹುದು.

ಗದ್ದಲದ ವಿವಿಧ ಮೂಲಗಳಾವುವು?
– ಮನೆ, ಆಸ್ಪತ್ರೆ, ಕಚೇರಿ ಮುಂತಾದ ಕಡೆ ವಸ್ತು, ಉಪಕರಣಗಳಿಂದ ಉಂಟಾಗುವ ಒಳಾಂಗಣ ಗದ್ದಲ.
– ಔದ್ಯಮಿಕ ಗದ್ದಲ, ಟ್ರಾಫಿಕ್‌ ಗದ್ದಲ, ಸಾಮುದಾಯಿಕ ಗದ್ದಲಗಳಂತಹ ಹೊರಾಂಗಣ ಗದ್ದಲಗಳು.

ಗದ್ದಲದ ಮಟ್ಟ ಅಧಿಕ ಎಂಬುದರ
ವಿವಿಧ ಸೂಚಕಗಳು ಯಾವುವು?
– ವಾಹನಗಳ ಅಧಿಕ ದಟ್ಟಣೆಗಿಂತ ಮಿಗಿಲಾದ ಗದ್ದಲ.
– ಕನಿಷ್ಠ 3 ಅಡಿಗಳಷ್ಟು ದೂರ ನಿಂತಿರುವವರು ಪರಸ್ಪರ ಸಂಭಾಷಿಸುವಾಗ ಧ್ವನಿಯೇರಿಸಿ ಮಾತನಾಡಬೇಕಾದ ಅನಿವಾರ್ಯತೆ.
– ಕೆಲಸದ ಪಾಳಿಯ ಬಳಿಕ ಟಿವಿ ಸದ್ದನ್ನು ಹೆಚ್ಚಿಸಬೇಕಾಗಿ ಬರುವುದು.
– ವರ್ಷಗಳ ಕಾಲ ಗದ್ದಲದಿಂದ ಕೂಡಿದ ಉದ್ಯೋಗ ಸ್ಥಳದಲ್ಲಿ ಕೆಲಸ ನಿರ್ವಹಿಸಿದ ಬಳಿಕ ಜನಸಂದಣಿಯಿರುವಲ್ಲಿ ಮಾತುಕತೆ ನಡೆಸಲು ಕಷ್ಟವಾಗುವುದು.

ಸದ್ದಿನ ಮಟ್ಟಕ್ಕೆ ಯಾವುದಾದರೂ ಮಾನದಂಡ ಇದೆಯೇ?
ವ್ಯಕ್ತಿಯು ಸದ್ದಿಗೆ ಎಷ್ಟು ಕಾಲ ಒಡ್ಡಿಕೊಳ್ಳಬಹುದು ಮತ್ತು ಸದ್ದಿನ ನಿರ್ದಿಷ್ಟ ಸ್ವೀಕಾರಾರ್ಹ ಮಟ್ಟವನ್ನು ಗುರುತಿಸಲು ಸದ್ದು ಹಾನಿಕಾರಕವಾಗುವ ಅಪಾಯದ ಮಾನದಂಡವಿದೆ. ಹಗಲು ಮತ್ತು ರಾತ್ರಿಯ ವೇಳೆಗಳಲ್ಲಿ ಸದ್ದಿನ ಪ್ರಮಾಣ ಎಷ್ಟು ಇರಬೇಕು ಎಂಬುದರ ಸೂಚಕವಾಗಿಯೂ ಮಾನದಂಡಗಳಿವೆ.

ಗದ್ದಲದ ಮಟ್ಟವನ್ನು ತಿಳಿದುಕೊಳ್ಳುವುದು ಹೇಗೆ?
ಸೌಂಡ್‌ ಲೆವೆಲ್‌ ಮೀಟರ್‌ ಅಥವಾ ಸದ್ದಿನ ಪ್ರಮಾಣ ಮಾಪಕ ಎಂದು ಕರೆಯುವ ಉಪಕರಣದ ಸಹಾಯದಿಂದ ಸದ್ದಿನ ಮಟ್ಟವನ್ನು ಅಳೆಯಬಹುದು. ಇದು ನಿರ್ದಿಷ್ಟ ಸ್ಥಳವೊಂದರಲ್ಲಿ ನಿರ್ದಿಷ್ಟ ಕಾಲದಲ್ಲಿ ಸದ್ದಿನ ಮಟ್ಟವನ್ನು ಅಳೆಯುತ್ತದೆ. ವ್ಯಕ್ತಿಯು ನಿರ್ದಿಷ್ಟ ಕಾಲದಲ್ಲಿ ಎಷ್ಟು ಪ್ರಮಾಣದ ಸದ್ದಿಗೆ ತೆರೆದುಕೊಂಡಿದ್ದಾನೆ ಎಂಬುದನ್ನು ಅಳೆಯಲು ನಾಯ್ಸ ಡೊಸಿಮೀಟರ್‌ ಉಪಯೋಗಿಸಬಹುದಾಗಿದೆ.

100% ಡೋಸ್‌ ರೇಟ್‌ ಮುಟ್ಟಲು ಅಗತ್ಯವಾದ ಸಮಯ ಒಎಸ್‌ಎಚ್‌ಎ ಪಿಇಎಲ್‌ ಎನ್‌ಐಒಎಸ್‌ಎಚ್‌ ಆರ್‌ಇಎಲ್‌ (3 ಡೆಸಿಬಲ್‌ ವಿನಿಮಯ ದರ)
8 ತಾಸುಗಳು 90 ಡೆಸಿಬಲ್‌ಗ‌ಳು 85 ಡೆಸಿಬಲ್‌ಗ‌ಳು
4 ತಾಸುಗಳು 95 ಡೆಸಿಬಲ್‌ಗ‌ಳು 88 ಡೆಸಿಬಲ್‌ಗ‌ಳು
2 ತಾಸುಗಳು 100 ಡೆಸಿಬಲ್‌ಗ‌ಳು 91 ಡೆಸಿಬಲ್‌ಗ‌ಳು
1 ತಾಸು 105 ಡೆಸಿಬಲ್‌ಗ‌ಳು 94 ಡೆಸಿಬಲ್‌ಗ‌ಳು
30 ನಿಮಿಷಗಳು 110 ಡೆಸಿಬಲ್‌ಗ‌ಳು 97 ಡೆಸಿಬಲ್‌ಗ‌ಳು
15 ನಿಮಿಷಗಳು 115 ಡೆಸಿಬಲ್‌ಗ‌ಳು 100 ಡೆಸಿಬಲ್‌ಗ‌ಳು

ಭಾರೀ ಸದ್ದಿಗೆ ತೆರೆದುಕೊಂಡಾಗ
ಆಲಿಸುವ ವ್ಯವಸ್ಥೆಗೆ ಏನಾಗುತ್ತದೆ?
ಯಾವನೇ ವ್ಯಕ್ತಿಯು ಅನುಮತಿಸಿದ ಮಟ್ಟಕ್ಕಿಂತ ಹೆಚ್ಚಿನದಾದ ಭಾರೀ ಸದ್ದನ್ನು ಆಲಿಸಿದಾಗ ಆತ ಅಥವಾ ಆಕೆ ಶ್ರವಣ ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಈಡಾಗಬಹುದು. ಈ ಸಮಸ್ಯೆಗಳು ತಾತ್ಕಾಲಿಕ ಶ್ರವಣ ಶಕ್ತಿ ನಷ್ಟದಿಂದ ತೊಡಗಿ ಖಾಯಂ ಶ್ರವಣ ಶಕ್ತಿ ನಷ್ಟದ ವರೆಗೆ ಆಗಿರಬಹುದು. ವ್ಯಕ್ತಿಯು ಭಾರೀ ಸದ್ದುಗದ್ದಲಕ್ಕೆ ಅನೇಕ ವರ್ಷಗಳ ಕಾಲ ತೆರೆದುಕೊಂಡಿದ್ದಾಗ ಶ್ರವಣ ಶಕ್ತಿ ನಷ್ಟವು ಖಾಯಂ ಆಗಿಬಿಡುವ ಸಾಧ್ಯತೆಗಳೇ ಅಧಿಕ.

ಸದ್ದಿನ ಪ್ರಮಾಣ ಹೆಚ್ಚಿದ್ದಾಗ
ಏನು ಮಾಡಬೇಕು?
ಸದ್ದುಗದ್ದಲವು ಅತಿಯಾಗಿದ್ದಾಗ ನೆನಪಿಡಬೇಕಾದ ಮೂರು ಪ್ರಾಮುಖ್ಯ ನಿಯಮಗಳು ಇಲ್ಲಿವೆ:
1. ವಾಲ್ಯೂಮ್‌ ಕಡಿಮೆ ಮಾಡಿ
2. ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ, ಅಥವಾ
3. ದೂರ ಹೋಗಿ
ಸನ್ನಿವೇಶವನ್ನು ಆಧರಿಸಿ ಈ ಮೂರು ನಿಯಮಗಳಲ್ಲಿ ಯಾವುದಾದರೊಂದರ ಪ್ರಕಾರ ನಾವು ನಡೆದುಕೊಳ್ಳುವ ಮೂಲಕ ನಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಬಹುದು. ಉದಾಹರಣೆಗೆ, ನೀವು ಯಂತ್ರೋಪಕರಣಗಳ ಭಾರೀ ಸದ್ದು ಇರುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತೀರಾದರೆ, ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಬಲ್ಲಂತಹ ಉಪಕರಣವನ್ನು ಧರಿಸಿಕೊಳ್ಳಬಹುದು. ಮನೆಯಲ್ಲಿ ಮಕ್ಕಳು ಮ್ಯೂಸಿಕ್‌ ಸಿಸ್ಟಂನ ವಾಲ್ಯೂಮ್‌ ಗರಿಷ್ಠ ಮಟ್ಟಕ್ಕೆ ಇರಿಸಿದ್ದು, ನೀವು ಮಾತನಾಡಿದ್ದು ಕೇಳುತ್ತಿಲ್ಲವಾದರೆ ವಾಲ್ಯೂಮ್‌ ಕಡಿಮೆ ಮಾಡಿ ಬಳಿಕ ಮಾತನಾಡುವುದು ಒಳ್ಳೆಯದು.

ಗದ್ದಲವನ್ನು ಅಳೆಯಲು
ಯಾರನ್ನು ಸಂಪರ್ಕಿಸಬೇಕು?
ಕೆಲಸದ ಸ್ಥಳಗಳಲ್ಲಿ ಸದ್ದಿನ ಪ್ರಮಾಣದ ಬಗ್ಗೆ ನಿಯಮಿತವಾಗಿ ನಿಗಾ ವಹಿಸುತ್ತಿರಬೇಕು. ಇದರಿಂದ ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ. ಸದ್ದಿನ ಮಟ್ಟವನ್ನು ಆಧರಿಸಿ ಪಾಳಿ ಬದಲಾವಣೆ/ ಪರ್ಯಾಯ ಪಾಳಿ/ ಕಿವಿ ರಕ್ಷಣ ಸಲಕರಣೆ ಧರಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಬಹುದು. ಸದ್ದಿನ ಮೂಲದ ಅಳತೆ ಮತ್ತು ಕೇಳುವ ಸಾಮರ್ಥ್ಯವನ್ನು ರಕ್ಷಿಸಿಕೊಳ್ಳುವ ಸಂಬಂಧ ಸಲಹೆ ಸೂಚನೆಗಳಿಗಾಗಿ ಪ್ರಮಾಣಿತ ಆಡಿಯಾಲಜಿಸ್ಟ್‌ರನ್ನು ಸಂಪರ್ಕಿಸಬೇಕು.

ಕೆಲಸದ ಸ್ಥಳ/ ಸಮುದಾಯದಲ್ಲಿ
ಸದ್ದಿನ ಪ್ರಮಾಣ ಅಳತೆ
ಮಾಡಿದರಷ್ಟೇ ಸಾಕೆ?
ಸಮುದಾಯ ಅಥವಾ ಕೆಲಸದ ಸ್ಥಳದಲ್ಲಿ ಭಾರೀ ಸದ್ದಿಗೆ ಒಡ್ಡಿಕೊಳ್ಳುವವರು ವಾರ್ಷಿಕವಾಗಿ ಆಡಿಯಾಲಜಿಸ್ಟ್‌ರನ್ನು ಸಂಪರ್ಕಿಸಿ ತಮ್ಮ ಕೇಳುವ ಸಾಮರ್ಥ್ಯವನ್ನು ತಪಾಸಿಸಿಕೊಳ್ಳಬೇಕು. ಭಾರೀ ಸದ್ದು ಇರುವ ಸಂದರ್ಭದಲ್ಲಿ ಕೇಳುವ ಸಾಮರ್ಥ್ಯವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ರಕ್ಷಕ ಸಲಕರಣೆಯನ್ನು ಧರಿಸಿಕೊಳ್ಳಬೇಕು. ಕೇಳುವುದಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಉಂಟಾದರೂ ಪ್ರಾಥಮಿಕ ಹಂತದಲ್ಲಿಯೇ ಅದನ್ನು ಪತ್ತೆ ಹಚ್ಚುವುದರಿಂದ ಅದು ತೀವ್ರ ಹಾನಿಗೆ ಕಾರಣವಾಗದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸಾಧ್ಯ.

ಮುಖ್ಯಾಂಶಗಳು
– ಭಾರೀ ಸದ್ದು ಗದ್ದಲವು ಕೇಳುವ ಸಾಮರ್ಥ್ಯಕ್ಕಷ್ಟೇ ಅಲ್ಲದೆ ಇತರ ಪ್ರಮುಖ ಅಂಗಾಂಗಗಳ ಹಾನಿಗೂ ಕಾರಣವಾಗಬಹುದು.
– ಸದ್ದು ಅನುಮತಿಯುಕ್ತ ಮಟ್ಟದ ಒಳಗಿರುವಂತೆ ನಾವು ಕಾಳಜಿ ವಹಿಸಿ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
– ಭಾರೀ ಸದ್ದಿನಿಂದ ಕೇಳುವ ಸಾಮರ್ಥ್ಯಕ್ಕೆ ಉಂಟಾಗಬಹುದಾದ ಹಾನಿಯನ್ನು ತಪ್ಪಿಸಲು ಪ್ರಮುಖ ಮೂರು ನಿಯಮಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಪಾಲಿಸಬೇಕು.
– ಉದ್ಯೋಗ ಸ್ಥಳದಲ್ಲಿ ಆಡಿಯಾಲಜಿಸ್ಟ್‌ ಮೂಲಕ ವಾರ್ಷಿಕವಾಗಿ ಉದ್ಯೋಗಿಗಳ ಕೇಳುವ ಸಾಮರ್ಥ್ಯದ ವಿಶ್ಲೇಷಣೆ ನಡೆಸುವುದು, ಸದ್ದಿನ ಮೂಲದ ಮಾಪನ ನಡೆಸುವುದು ಅಗತ್ಯ.

-ಭಾರ್ಗವಿ ಪಿ.ಜಿ.
ಅಸಿಸ್ಟೆಂಟ್‌ ಪ್ರೊಫೆಸರ್‌-ಸೀನಿಯರ್‌
ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ.

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.