ಹೇಗೆ ನಡೆಯುತ್ತಿದೆ ಜ್ಞಾನವಾಪಿ ಸರ್ವೇ?
Team Udayavani, Aug 5, 2023, 7:27 AM IST
ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಮಂದಿರದ ರಚನೆಗಳ ಮೇಲೆ ನಿರ್ಮಿಸಲಾಗಿದೆಯೇ ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಮಸೀದಿ ಒಳಗೆ ಸಮೀಕ್ಷೆ ನಡೆಸುವಂತೆ ಹಿಂದೂಗಳು ಸಲ್ಲಿಸಿದ್ದ ಅರ್ಜಿಗೆ ಅಲಹಾಬಾದ್ ಹೈಕೋರ್ಟ್ ಸಮ್ಮತಿಸಿದೆ. ಅದರ ಭಾಗವಾಗಿ ಶುಕ್ರವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಅಧಿಕಾರಿಗಳು ಸಮೀಕ್ಷೆ ಆರಂಭಿಸಿದ್ದಾರೆ.. ಏನೀ ಸಮೀಕ್ಷೆ ? ಎಎಸ್‌ಐ ಕಾರ್ಯಾಚರಣೆ ಹೇಗಿರಲಿದೆ ಎಂಬುದರ ವಿವರ ಇಲ್ಲಿದೆ.
ರಚನೆಗೆ ಹಾನಿಯಾಗದಂತೆ ಸಮೀಕ್ಷೆ
ಸಮೀಕ್ಷೆ ನಡೆಸುವುದರಿಂದ ಮಸೀದಿಯ ಮೂಲ ರಚನೆಗೆ ಹಾನಿಯಾಗಬಹುದೆಂದು ಮಸೀದಿ ಸಮೀತಿ ಆತಂಕ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಯಾವುದೇ ಉತ್ಖನನ ನಡೆಸದಂತೆ ಆದೇಶಿಸಿದೆ. ಹೀಗಾಗಿ ಎಎಸ್‌ಐ ಅಧಿಕಾರಿಗಳು ಕಟ್ಟಡದ ಒಳಗಿರುವ ಪ್ರಾಚೀನ ವಸ್ತುಗಳನ್ನು ಪಟ್ಟಿ ಮಾಡಿ, ಅವುಗಳ ಫೋಟೋ ತೆಗೆದು, ಅದರ ಕಾಲಮಾನವನ್ನು ಗೊತ್ತುಪಡಿಸುವ ದಾಖಲೆಗಳನ್ನು ಸಂಗ್ರಹಿಸಲಿದೆ. ಸರ್ವೇಕ್ಷಣೆ ಸಂದರ್ಭದಲ್ಲಿ ಪ್ರಕರಣಕ್ಕೆ ಪುರಾವೆ ದೊರಕಿಸಿಕೊಡುವ ದಾಖಲೆಗಳು ಪತ್ತೆಯಾದಲ್ಲಿ, ಅವುಗಳ ಕಾರ್ಬನ್ ಡೇಟಿಂಗ್ ನಡೆಸುವ ಸಾಧ್ಯತೆಗಳಿದೆ.
ಯಾವೆಲ್ಲ ತಂತ್ರಜ್ಞಾನಗಳ ಬಳಕೆ?
* ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್:
ರೇಡಿಯೋ ತರಂಗಗಳನ್ನು ಬಳಸಿಕೊಂಡು ಭೂ ಮೇಲ್ಮೆ„ಗಿಂತ ಕೆಳಗಿರುವ ಚಿತ್ರಗಳನ್ನು ಸೆರೆ ಹಿಡಿಯಲು ಈ ತಂತ್ರಜ್ಞಾನ ಸಹಾಯ ಮಾಡಲಿದೆ. ರಚನೆಯ ಅಡಿಪಾಯಕ್ಕೆ ಯಾವುದೇ ಹಾನಿಯಾಗದಂತೆ ಭೂಗರ್ಭದಲ್ಲಿ ಶೋಧಿಸಿ, ಅಲ್ಲಿರಬಹುದಾದ ಯಾವುದೇ ರಚನೆಗಳ ಸ್ಥಳವನ್ನು ಪತ್ತೆಹಚ್ಚಲಿದೆ.
*ಜಿಪಿಎಸ್:
ರೇಡಿಯೋ ತರಂಗಗಳು ಮತ್ತು ಬಾಹ್ಯಾಕಾಶ ಉಪಗ್ರಹ ವ್ಯವಸ್ಥೆಗಳನ್ನು ಜಿಪಿಎಸ್ ಆಧರಿಸಿದ್ದು, ಸರ್ವೇಕ್ಷಣಾ ಭೂಮಿಯ ಸ್ಥಳಾಕೃತಿ ಹಾಗೂ ದತ್ತಾಂಶಗಳ ಸಂಗ್ರಹಣೆಗೆ ತೆರಳಿರುವ ರೇಡಾರ್‌ನ ಮೇಲ್ವಿಚಾರಣೆ ಮತ್ತು ಅದರ ನಿಖರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
*ಡ್ರೋನ್:
ಸಮೀಕ್ಷೆಯ ದಾಖಲೆ, ಕಾರ್ಯಾಚರಣೆ ಸಮನ್ವಯ, ಪರಿಶೋಧನೆ, ಸಂವಹನ, ತಪಾಸಣೆ ಸೇರಿದಂತೆ ಸರ್ವೆ ಭೂಮಿಯ ವಿವಿಧ ಕಾರ್ಯಾಚರಣೆ ಹಾಗೂ ವಿಡಿಯೋಗ್ರಫಿ, ಫೋಟೋಗ್ರಫಿಗಾಗಿ ಬಹು ಉದ್ದೇಶಿತ ಕ್ಯಾಮೆರಾಗಳನ್ನು ಅಳವಡಿಸಿರುವ ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.