ವಿದ್ಯಾರ್ಥಿಗಳಿದ್ದಾಗ ವಿರಾಟ್, ಧೋನಿ ಗಳಿಸಿದ ಸ್ಕೋರ್ ಎಷ್ಟು?
Team Udayavani, Jun 28, 2020, 6:35 AM IST
ಹೊಸದಿಲ್ಲಿ: ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಜಾಗತಿಕ ಕ್ರಿಕೆಟಿನ ಸರ್ವಶ್ರೇಷ್ಠ ಆಟಗಾರರೆಂಬುದರಲ್ಲಿ ಎರಡು ಮಾತಿಲ್ಲ. ಇಬ್ಬರೂ ರನ್ ರಾಶಿಯನ್ನು ಪೇರಿಸಿದವರು, ಯಶಸ್ವಿ ನಾಯಕರು. ಧೋನಿ ಪಾಲಿಗೆ ಮಿಂಚಿನ ಸ್ಟಂಪರ್ ಎಂಬ ಖ್ಯಾತಿಯೂ ಸೇರಿಕೊಂಡಿದೆ. ಆದರೆ ಇವರಿಬ್ಬರೂ ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ “ಸ್ಕೋರ್’ ಎಷ್ಟು? ಇದು ಬಹಳ ತಮಾಷೆಯಾಗಿದೆ.
ಕ್ರಿಕೆಟ್‌ನಲ್ಲಿ ಇಬ್ಬರೂ ಜಾಗತಿಕ ಮಟ್ಟದಲ್ಲಿ ಮಿಂಚಿದರೂ ಕಲಿಕೆಯಲ್ಲಿ ಬಹಳ ಹಿಂದೆ ಎಂಬ ಸಂಗತಿ ಬಯಲಾಗಿದೆ. ಧೋನಿ 10ನೇ ತರಗತಿಯಲ್ಲಿ ಗಳಿಸಿದ ಅಂಕ ಶೇ. 66. 12ನೇ ತರಗತಿಯಲ್ಲಿ ಇದಕ್ಕಿಂತ ಕಡಿಮೆ, ಶೇ. 56 ಮಾತ್ರ.
ವಿರಾಟ್ ಕೊಹ್ಲಿ ಅವರಂತೂ ಗಣಿತದಲ್ಲಿ ಶತದಡ್ಡ! ಲೆಕ್ಕ ಎಂಬುದು ಅವರನ್ನು ಪೆಡಂಭೂತದಂತೆ ಕಾಡುತ್ತಲೇ ಇರುತ್ತಿತ್ತು. ಗರಿಷ್ಠ ನೂರು ಅಂಕಗಳಲ್ಲಿ ಅವರೆಂದೂ “ಡಬಲ್ ಫಿಗರ್’ ತಲುಪಿದ್ದಿಲ್ಲ ಅಂದರೆ ನಂಬಲೇಬೇಕು!
ನೂರರಲ್ಲಿ ಮೂರಂಕ!
“ಗಣಿತ ಅಂದರೆ ನನಗೆ ಭಯ ಮತ್ತು ಅಲರ್ಜಿ. ಇದು ತಲೆಗೇ ಹತ್ತುತ್ತಿರಲಿಲ್ಲ. ಗರಿಷ್ಠ ಅಂಕ ನೂರಾದರೆ ನಾನು ಗಳಿಸುತ್ತಿದ್ದುದು ಕೇವಲ ಮೂರು! ಇಷ್ಟಕ್ಕೂ ಗಣಿತವನ್ನು ಏಕೆ ಕಲಿಯಬೇಕೆಂಬುದು ನನ್ನ ಪ್ರಶ್ನೆ. ಇದರ ಯಾವ ಸೂತ್ರಗಳೂ ನಮಗೆ ಬದುಕಿಗೆ ಅನ್ವಯಿಸುವುದಿಲ್ಲ…’ ಎಂಬುದಾಗಿ ಚಾಟ್ ಶೋ ಒಂದರಲ್ಲಿ ವಿರಾಟ್ ಕೊಹ್ಲಿ ಬಹಳ ತಮಾಷೆಯಾಗಿ ಹೇಳಿದ್ದಾರೆ.
ಸಚಿನ್ ತೆಂಡುಲ್ಕರ್ 10ನೇ ತರಗತಿಯಲ್ಲಿ ಫೇಲ್ ಆಗಿದ್ದರೆಂಬ ಸಂಗತಿಯನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು. ಇದರಿಂದ ಇವರ್ಯಾರ ಕ್ರಿಕೆಟ್ ಸಾಧನೆಗೂ ಅಡ್ಡಿಯಾಗಲಿಲ್ಲ. ಆದರೆ ಕುಂಬ್ಳೆ, ಲಕ್ಷ್ಮಣ್, ಶ್ರೀನಾಥ್ ವಿದ್ಯಾರ್ಥಿ ಜೀವನದಲ್ಲಿ ಉತ್ತಮ “ಸ್ಕೋರರ್’ಗಳಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.