ಚೆಕ್ ಮೇಟ್
ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
Team Udayavani, Jul 6, 2020, 4:50 AM IST
ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್), ತೆರಿಗೆ ಮುಕ್ತ ರಿಟರ್ನ್ಸ್ ನೀಡುವ ಒಂದು ಉಳಿತಾಯ ಯೋಜನೆ. ಸರ್ಕಾರ ಇಪಿಎಫ್ ಯೋಜನೆಯನ್ನು 1952ರಲ್ಲಿ ಕಡ್ಡಾಯ ಯೋಜನೆಯಾಗಿ ಪರಿಚಯಿಸಿತ್ತು. ಉದ್ಯೋಗಿಗಳು ಮತ್ತು ಉದ್ಯೋಗದಾತ ಸಂಸ್ಥೆ- ಇಬ್ಬರೂ ಸಮನಾದ ಮೊತ್ತವನ್ನು ಸೇವಿಂಗ್ಸ್ ಖಾತೆಯಲ್ಲಿ ಹೂಡುವುದು.
ಉದ್ಯೋಗಿ ಬೇರೊಂದು ಸಂಸ್ಥೆ ಸೇರಿದಾಗಲೋ, ಇಲ್ಲವೇ ನಿವೃತ್ತಿ ಹೊಂದಿದಾಗಲೋ ಅದರ ಒಟ್ಟು ಮೊತ್ತ, ಆತನ ಕೈಗೆ ಸೇರುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ತನ್ನ ಇಪಿಎಫ್ ಖಾತೆಯಲ್ಲಿ ಎಷ್ಟು ಮೊತ್ತವಿದೆ ಎನ್ನುವುದನ್ನು ಇಪಿಎಫ್ ಖಾತೆ ಹೊಂದಿರುವ ಉದ್ಯೋಗಿಗಳು ಕುಳಿತಲ್ಲಿಂದಲೇ ಚೆಕ್ ಮಾಡಬಹುದು. ಎಸ್ಸೆಮ್ಮೆಸ್ ಮೂಲಕ, ಮಿಸ್ಡ್ ಕಾಲ್ ನೀಡುವ ಮೂಲಕ ಹಾಗೂ ಇಪಿಎಫ್ಒ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು.
ಎಸ್ಸೆಮ್ಮೆಸ್ ಮೂಲಕ ಹೇಗೆ?: ಇಪಿಎಫ್ ಖಾತೆದಾರರು ಒಂದು ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್)ಅನ್ನು ಹೊಂದಿರುತ್ತಾರೆ. ಇಪಿಎಫ್ ಒ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿರುವವರು ಎಸ್ಸೆಮ್ಮೆಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ಸವಲತ್ತನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ಅವರು ಮಾಡಬೇಕಿರುವುದಿಷ್ಟೆ: “EPFOHO UAN ENG’ ಎಂಬ ಸಂದೇಶವನ್ನು ತಮ್ಮ ಮೊಬೈಲಿನಲ್ಲಿ ಟೈಪಿಸಿ 7738299899 ಸಂಖ್ಯೆಗೆ ರವಾನಿಸಬೇಕು.
ಮಿಸ್ಡ್ ಕಾಲ್ ಮೂಲಕ…: ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿರುವ ಇಪಿಎಫ್ ಖಾತೆದಾರರು 011-22901406 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕವೂ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳ ಬಹುದು. ಮಿಸ್ಡ್ ಕಾಲ್ ನೀಡಿದ ನಂತರ ಖಾತೆದಾರರ ಮೊಬೈಲಿಗೆ ಒಂದು ಎಸ್ಸೆಮ್ಮೆಸ್ ಸಂದೇಶ ಬರುತ್ತದೆ. ಅದರಲ್ಲಿ, ಇಪಿಎಫ್ ಖಾತೆಯಲ್ಲಿನ ಬ್ಯಾಲೆನ್ಸ್ ಕುರಿತ ವಿವರಗಳು ಇರುತ್ತವೆ.
ಉಮಂಗ್ ಆಪ್: ಪಿಎಫ್ ಪಾಸ್ ಬುಕ್ಕನ್ನು ಉಮಂಗ್ ಎನ್ನುವ ಆ್ಯಪ್ ಮುಖಾಂತರವೂ ನೋಡಬಹುದಾಗಿದೆ. ಆ್ಯಪ್ ಇನ್‌ಸ್ಟಾಲ್ ಮಾಡಿ ಕೊಂಡು ಯುಎಎನ್ ಸಂಖ್ಯೆ ಮತ್ತು ಒಟಿಪಿ ಸಂಖ್ಯೆಯನ್ನು ಎಂಟ್ರಿ ಮಾಡುವುದರ ಮೂಲಕ ಎಪಿ ಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದೆ.
ಪ್ರತ್ಯೇಕ ಮೆಂಬರ್ ಐಡಿ: ಒಂದು ವೇಳೆ ಉದ್ಯೋಗಿ 3 ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರೆ ಅವರಿಗೆ ಮೂರು ಪ್ರತ್ಯೇಕ ಮೆಂಬರ್ ಐಡಿಗಳನ್ನು ನೀಡಲಾಗಿರುತ್ತದೆ. ಅಂದರೆ, ಒಂದು ಸಂಸ್ಥೆಗೆ ಒಂದು ಮೆಂಬರ್ ಐಡಿ. ಆಯಾ ಮೆಂಬರ್ ಐಡಿ ಎಂಟ್ರಿ ಮಾಡುತ್ತಿದ್ದಂತೆಯೇ ಆಯಾ ಉದ್ಯೋಗ ಸಂಸ್ಥೆಯ ಇಪಿಎಫ್ ವಿವರಗಳು ತೆರೆದುಕೊಳ್ಳುತ್ತವೆ.
ಇಪಿಎಫ್ಒ ಜಾಲತಾಣ
* ಮೊದಲು ಇಪಿಎಫ್ ಒ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.
* “ಅವರ್ ಸರ್ವೀಸಸ್’ ಎಂಬ ಟ್ಯಾಬ್ ಅಡಿ “ಫಾರ್ ಎಂಪ್ಲಾಯೀಸ್’ ಎಂಬ ಆಯ್ಕೆ ಕ್ಲಿಕ್ ಮಾಡಬೇಕು.
* ತೆರೆದುಕೊಳ್ಳುವ ನ್ಯೂ ಪೇಜ್ ನಲ್ಲಿ “ಮೆಂಬರ್ ಪಾಸ್ ಬುಕ್’ ಆಯ್ಕೆ ಕ್ಲಿಕ್ ಮಾಡಬೇಕು.
* ಈಗ ಇಪಿಎಫ್ ಖಾತೆದಾರರು ತಮ್ಮ ಯುಎಎನ್ ಸಂಖ್ಯೆ ಮತ್ತು ಪಾಸ್ ವರ್ಡನ್ನು ಆಯಾ ಜಾಗದಲ್ಲಿ ಎಂಟ್ರಿ ಮಾಡಬೇಕು.
* ಸರಿಯಾದ ಯುಎಎನ್ ಸಂಖ್ಯೆ ಮತ್ತು ಪಾಸ್ ವರ್ಡನ್ನು ಎಂಟ್ರಿ ಮಾಡಿದ್ದರೆ, ಆಯಾ ಖಾತೆದಾರರ ಪಾಸ್‌ಬುಕ್ ಡಿಜಿಟಲ್ ಪರದೆ ಮೇಲೆ ತೆರೆದುಕೊಳ್ಳುವುದು. ಅದರಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತ ಸಂಸ್ಥೆ ಕಟ್ಟಿರುವ ಮೊತ್ತ ಕಾಣಿಸಿಕೊಳ್ಳುತ್ತದೆ. ಜೊತೆಗೆ, ಒಟ್ಟು ಮೊತ್ತಕ್ಕೆ ಜಮೆಯಾಗಿರುವ ಬಡ್ಡಿಯನ್ನೂ ನಮೂದಿಸಲಾಗಿರುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.