ಲಾಕ್‌ಡೌನ್ ಇದ್ದರೂ ಕೋವಿಡ್ ಏಕೆ ಹರಡುತ್ತಿದೆ?
Team Udayavani, May 2, 2020, 3:11 PM IST
ವರ್ಜೀನಿಯಾ: ಇದು ಬಹುತೇಕ ಅಮೆರಿಕನ್ನರನ್ನು ಕಾಡುತ್ತಿರುವ ಪ್ರಶ್ನೆ. ಲಾಕ್‌ಡೌನ್, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಜೇಶನ್ ಹಾಗೂ ಇತರ ಹಲವು ಉಪಕ್ರಮಗಳನ್ನು ಕೈಗೊಂಡಿದ್ದರೂ ಕೋವಿಡ್ ಹಬ್ಬುವುದು ನಿಂತಿಲ್ಲ. ಆರ್ಥಿಕತೆ ಕುಸಿಯುತ್ತಿರುವುದನ್ನು ತಡೆಯುವ ಪ್ರಯತ್ನವೂ ಯಶಸ್ವಿಯಾಗುತ್ತಿಲ್ಲ. ಮೇರಿಲ್ಯಾಂಡ್ ಹಾಗೂ ವರ್ಜೀನಿಯಾದಲ್ಲಿ ಗುರುವಾರ ಒಂದೇ ದಿನ ಸುಮಾರು 2,000 ಜನರು ಸೋಂಕುಪೀಡಿತರಾಗಿದ್ದಾರೆ. 111 ಜನರು ಪ್ರಾಣ ತೆತ್ತಿದ್ದಾರೆ.
ನರ್ಸಿಂಗ್ ಹೋಮ್, ಜೈಲು ಹಾಗೂ ಕಿರಾಣಿ ಅಂಗಡಿ, ಕಟ್ಟಡ ನಿರ್ಮಾಣ, ಔಷಧಾಲಯ ಹಾಗೂ ಸರಕು ಸಾಗಾಟದಂತಹ ಆವಶ್ಯಕ ಸೇವೆಗಳ ವಲಯಕ್ಕೆ ಸೇರಿದ ಇತರ ಸಾಂಸ್ಥಿಕ ಚಟುವಟಿಕೆಯಿಂದಲೇ ವೈರಸ್ ಹೆಚ್ಚು ಪ್ರಮಾಣದಲ್ಲಿ ಹಬ್ಬುತ್ತಿದೆ.
ಮಾರ್ಚ್ ಮಧ್ಯವಾರದಲ್ಲೇ ಹಲವು ಉಪಕ್ರಮಗಳನ್ನು ಕೈಗೊಂಡಿದ್ದರಿಂದ ವೈರಸ್ ಹರಡುವ ಪ್ರಮಾಣ ಕ್ಷೀಣಿಸಿದೆಯಾದರೂ ಜನ ರೋಗಪೀಡಿತರಾಗುವುದು ತಪ್ಪುತ್ತಿಲ್ಲ ಎಂಬುದೇ ಜನರನ್ನು ಕಾಡುತ್ತಿರುವ ಪ್ರಶ್ನೆ.
ಹೊಸ ಪ್ರಕರಣಗಳ ಸಂಖ್ಯೆ ಕ್ಷೀಣಿಸುವ ತನಕ ಲಾಕ್‌ಡೌನ್ ತೆರವು ಮಾಡುವುದಿಲ್ಲ ಹಾಗೂ ವಿನಾಯಿತಿಗಳನ್ನೂ ನೀಡುವುದಿಲ್ಲ ಎಂದು ವರ್ಜೀನಿಯಾದ ಆಡಳಿತ ಹೇಳಿದೆ. ಶಾಲೆಗಳು, ಉದ್ಯಮಗಳು ತೆರೆದುಕೊಂಡರೆ ವೈರಸ್ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ, ಇನ್ನೂ ಹಲವು ತಿಂಗಳ ಕಾಲ ಜನರು ಸಾಮಾಜಿಕ ಅಂತರ ಕಾಪಾಡುವ ಜತೆಗೆ ಮಾಸ್ಕ್ ಗಳನ್ನು ಧರಿಸಿಕೊಂಡೇ ಓಡಾಡಬೇಕು ಎಂದೂ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.