ಹಾಳುಕೊಂಪೆಯಾದ ಬಸ್ ನಿಲ್ದಾಣ : ಕಸದ ರಾಶಿ, ಮುಳ್ಳುಕಂಟಿ, ಮೂತ್ರದ ಘಾಟು
Team Udayavani, Jan 23, 2022, 12:25 PM IST
ಹುಬ್ಬಳ್ಳಿ: ಎಲ್ಲೆಂದರಲ್ಲಿ ಕಸದ ರಾಶಿ, ಬೆಳೆದು ನಿಂತ ಮುಳ್ಳುಕಂಟಿ, ಆವರಣದಕ್ಕೆ ಕಾಲಿಟ್ಟರೆ ಸಾಕು ಮೂಗಿಗೆ ರಾಚುವ ಮೂತ್ರ ವಿಸರ್ಜನೆ ಘಾಟು, ಸ್ವತ್ಛತೆಗೆ ಅದೆಷ್ಟೋ ಮೈಲು ದೂರದಲ್ಲಿದೆ ಎಂಬ ಭಾವನೆ..
ಇದು ಗೋಕುಲ ರಸ್ತೆಯಲ್ಲಿನ ಕೇಂದ್ರ ಬಸ್ ನಿಲ್ದಾಣದ ಚಿತ್ರಣ. ನಿಲ್ದಾಣ ವ್ಯಾಪ್ತಿಯಲ್ಲಿ ವಿಶಾಲ ಜಾಗವಿದೆ. ಆದರೆ ಅರ್ಧದಷ್ಟು ಜಾಗ ಗಿಡಗಂಟಿಗಳಿಂದ ತುಂಬಿದೆ. ಮೂತ್ರ ವಿಸರ್ಜನೆ, ಬಯಲು ಬಹಿರ್ದೆಸೆಗೆ ಬಳಕೆಯಾಗುತ್ತಿದೆ. ಕೇವಲ ಸಾರ್ವಜನಿಕರಷ್ಟೇ ಅಲ್ಲದೆ ಸಾರಿಗೆ ಸಿಬ್ಬಂದಿ ಸಹ ಬಯಲಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದು ಕಂಡುಬರುತ್ತದೆ. ಆವರಣದಲ್ಲಿ ಅಲ್ಲಲ್ಲಿ ಕಸದ ರಾಶಿ, ಕಂಡ ಕಂಡ ಕಡೆ ಗುಟಕಾ, ಎಲೆ-ಅಡಿಕೆ ತಿಂದು ಉಗಿದ ಕಲೆ ರಾಚುತ್ತವೆ.
ಗೋಕುಲ ರಸ್ತೆಯಲ್ಲಿ ನಿರ್ಮಾಣಗೊಂಡ ಹೊಸ ಬಸ್ ನಿಲ್ದಾಣ ಕೆಲ ವರ್ಷಗಳವರೆಗೆ ಇದ್ದೂ ಇಲ್ಲದ ಸ್ಥಿತಿಗೆ ತಲುಪಿತ್ತು. ಬಸ್‌ಗಳ ಹೆಚ್ಚಿನ ಸಂಚಾರ-ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ರಾತ್ರಿಯಾದರೆ ಅನೈತಿಕ ಕಾರ್ಯಗಳಿಗೆ ಬಳಕೆಯಾಗುತ್ತಿತ್ತು. ನಂತರದಲ್ಲಿ ಕೆಲವೊಂದು ರೂಟ್‌ಗಳ ಬಸ್‌ಗಳನ್ನು ಹೊಸ ಬಸ್ ನಿಲ್ದಾಣದಿಂದಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗಿತ್ತು.
ಹಳೇ ಬಸ್ ನಿಲ್ದಾಣ ಪುನರ್ ನಿರ್ಮಾಣ ಹಿನ್ನೆಲೆಯಲ್ಲಿ ಬಹುತೇಕ ಬಸ್‌ಗಳನ್ನು ಗೋಕುಲ ರಸ್ತೆಯ ಬಸ್ ನಿಲ್ದಾಣಕ್ಕೆ, ಇನ್ನು ಕೆಲವು ಬಸ್‌ಗಳನ್ನು ಹೊಸೂರಿನಲ್ಲಿ ನಿರ್ಮಾಣಗೊಂಡ
ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಬಸ್‌ಗಳ ಓಡಾಟ ಸಂಖ್ಯೆ ಹೆಚ್ಚಳವಾಗಿದೆಯಾದರೂ, ಸ್ವತ್ಛತೆ-ಸೌಲಭ್ಯಗಳ ಕೊರತೆ
ಎದ್ದು ಕಾಣುತ್ತಿದೆ.
ಹೆಸರಿಗಷ್ಟೇ ಉಚಿತ
ಬಸ್ ನಿಲ್ದಾಣಗಳಲ್ಲಿ ಮೂತ್ರ ವಿಸರ್ಜನೆ ಉಚಿತವಾಗಿದ್ದರೂ ಗುತ್ತಿಗೆ ಪಡೆದವರು ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಮೂತ್ರ ವಿಸರ್ಜನೆಗೆ 2 ರಿಂದ 3 ರೂ.
ಹಾಗೂ ಶೌಚಾಲಯಕ್ಕೆ ಹೊದರೆ 10 ರೂ. ನೀಡಬೇಕಾಗಿದೆ. ರಾತ್ರಿ ವೇಳೆ ಮಹಿಳೆಯರು ಶೌಚಾಲಯ ಕಡೆ ಹೋಗದಂತ ಸ್ಥಿತಿ ಇದೆ ಎಂಬ ಆರೋಪ ಅನೇಕರದ್ದಾಗಿದೆ.
ಬಾಟಲಿ ನೀರೇ ಅನಿವಾರ್ಯ
ಎರಡು ಬದಿಯಲ್ಲಿ ಕುಡಿಯುವ ನೀರು ಎಂದು ನಾಮಫಲಕಗಳು ರಾರಾಜಿಸುತ್ತವೆ, ಆದರೆ ಅದನ್ನು ನಂಬಿಕೊಂಡು ಹೋದವರಿಗೆ ದೇವರೆ ಗತಿ. ಎರಡೂ ಕುಡಿಯುವ ನೀರಿನ ಕಟ್ಟೆಗಳು ಹಾಳಾಗಿದ್ದು, ಇಲಾಖೆಯಿಂದಲೇ ಅವೆರಡಕ್ಕೆ ಯಾರೂ ಹೋಗದಂತೆ ತಡೆಗೋಡೆ ನಿರ್ಮಿಸಲಾಗಿದೆ. ಹೊರ ಭಾಗದಲ್ಲಿರುವ ನೀರಿನ ಅರವಟಿಗೆಗಳು ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಎರಡು ಬದಿಯಲ್ಲಿ ಒಂದೊಂದು ನೀರಿನ ಅರವಟಿಗೆ ಇದ್ದು, ಅವು ಕೂಡಾ ಸರಿಯಾದ ಸ್ವತ್ಛತೆ ಇಲ್ಲದೆ ಆಗಮಿಸುವ ಪ್ರಯಾಣಿಕರು ಅನಿರ್ವಾಯವಾಗಿ ಬಾಟಲಿ ನೀರಿಗೆ ಮೊರೆ ಹೋಗುವಂತಾಗಿದೆ.
ಸದ್ಬಳಕೆಯಾಗದ ಖಾಲಿ ಜಾಗ
ನಿಲ್ದಾಣದ ಒಳಭಾಗ ಸಾಕಷ್ಟು ಖಾಲಿ ಜಾಗ ಬಿಟ್ಟಿದ್ದು, ಯಾರು ಅವಿತುಕೊಂಡು ಕುಳಿತರೂ ಗೊತ್ತಾಗದ ರೀತಿಯಲ್ಲಿ ಗಿಡಗಂಟಿಗಳು ಬೆಳೆದಿವೆ. ರಾತ್ರಿ ವೇಳೆ ಪ್ರಯಾಣಿಕರು
ಹೆದರುವಂತಾಗಿದೆ. ಆರಂಭದಲ್ಲಿ ನಿಲ್ದಾಣದ ಮುಂಭಾಗದಲ್ಲಿ ಉದ್ಯಾನವನ ಸಹ ನಿರ್ಮಾಣ ಮಾಡಲಾಗಿತ್ತು. ದಿನಕಳೆದಂತೆ ಎಲ್ಲವೂ ಕೂಡಾ ಹಾಳಾಗುತ್ತಿದ್ದು, ತ್ಯಾಜ್ಯ ಎಸೆಯುವ ತಾಣವಾಗತೊಡಗಿದೆ.
ಕಳೆದ ಬಾರಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದಾಗ ಈ ವಿಷಯಗಳು ನಮ್ಮ ಗಮನಕ್ಕೆ ಬಂದಿಲ್ಲ. ಇದೀಗ ಡಿಸಿ ಬದಲಾವಣೆಯಾಗಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ
ಸಭೆ ನಡೆಸಿ ಪ್ರಯಾಣಿಕರ ಅನುಕೂಲಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆ ಜೊತೆಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು. ಹೊಸ ಬಸ್ ನಿಲ್ದಾಣದ ಸ್ವತ್ಛತೆಗೆ ಕೂಡಲೇ ಆದ್ಯತೆ
ನೀಡಲಾಗುವುದು.
– ಗುರುದತ್ತ ಹೆಗಡೆ, ಎಂ.ಡಿ. ವಾಕರಸಾ ಸಂಸ್ಥೆ ಹುಬ್ಬಳ್ಳಿ
ಪರ ಊರುಗಳಿಗೆ ರಾತ್ರಿ ತೆರಳುವ ಹಾಗೂ ಆಗಮಿಸುವ ಸಮಯದಲ್ಲಿ ನಿಲ್ದಾಣದ ಸ್ಥಿತಿ ನೋಡಿ ಭಯವಾಗುತ್ತದೆ. ಕುಟುಂಬದೊಂದಿಗೆ ಆಗಮಿಸಿದರೆ ಪರಿಸ್ಥಿತಿ ಹೇಳತೀರದು. ಮೂತ್ರ ವಿಸರ್ಜನೆಗೆ ಹೋದರೆ ಶುಲ್ಕ ವಸೂಲಿ ಮಾಡುತ್ತಾರೆ, ಉಚಿತ ಎಂದರೆ ಹೊರ ಹೋಗಿ ಎಂದು ದಬಾಯಿಸುತ್ತಾರೆ.
– ಸುರೇಶ ವಾಲಿ, ಖಾಸಗಿ ಕಂಪನಿ ಸೇಲ್ಸ್ ಮ್ಯಾನೇಜರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.