ಸಂಕಷ್ಟದ ವೇಳೆ ಕ್ಷೇತ್ರದ ಜನತೆಗೆ ಆತ್ಮಬಂಧು..ಬಡವರ ಸಂಕಷ್ಟಕ್ಕೆ ಹಗಲಿರುಳೆನ್ನದೇ ಸ್ಪಂದನೆ

ಜನರ ಬೇಕು-ಬೇಡಿಕೆಗಳಿಗೆ ಧ್ವನಿಯಾದ ಹು-ಧಾ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ

Team Udayavani, Apr 28, 2020, 5:10 AM IST

ಸಂಕಷ್ಟದ ವೇಳೆ ಕ್ಷೇತ್ರದ ಜನತೆಗೆ ಆತ್ಮಬಂಧು..ಬಡವರ ಸಂಕಷ್ಟಕ್ಕೆ ಹಗಲಿರುಳೆನ್ನದೇ ಸ್ಪಂದನೆ

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಜನರ ಸಮಸ್ಯೆ ಆಲಿಸಲು ಶಾಸಕ ಪ್ರಸಾದ ಅಬ್ಬಯ್ಯ ಸಂಚಾರ.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ನಿವಾರಣೆ ಹಾಗೂ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕ ಪ್ರಸಾದ ಅಬ್ಬಯ್ಯ, ಕೋವಿಡ್ ವೈರಸ್ ಮಹಾಮಾರಿಯ ಸಂಕಷ್ಟ ಸಂದರ್ಭದಲ್ಲಿ ಕ್ಷೇತ್ರದ ಜನರ ಸುರಕ್ಷತೆ-ಸೌಲಭ್ಯಗಳಿಗಾಗಿ ಆತ್ಮಬಂಧುವಾಗಿ ಸ್ಪಂದಿಸುತ್ತಿದ್ದಾರೆ.

ಅತಿ ಹೆಚ್ಚು ಕೊಳಗೇರಿ ಪ್ರದೇಶ ಹೊಂದಿದ್ದ ಕ್ಷೇತ್ರಕ್ಕೆ ಅಭಿವೃದ್ಧಿಯ ಸ್ಪರ್ಶ ನೀಡಿ ಮಾದರಿ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಸಾಧಕ ಹಾಗೂ ಸಾರ್ಥಕ ಹೆಜ್ಜೆಗಳನ್ನಿರಿಸಿರುವ ಪ್ರಸಾದ ಅಬ್ಬಯ್ಯ ಅವರು, ಕೋವಿಡ್ ನಿಂದ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಕ್ಷೇತ್ರದ ಜನರ ಬೇಕು-ಬೇಡಿಕೆಗಳಿಗೆ ಧ್ವನಿಯಾಗಿದ್ದಾರೆ. ಸರಕಾರ, ಸ್ನೇಹಿತ ಬಳಗದಿಂದಲೂ ಏನೆಲ್ಲಾ ಸಾಧ್ಯವೋ ಆ ಎಲ್ಲ ಸೌಲಭ್ಯ-ನೆರವನ್ನು ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದ್ದಾರೆ.

ಕೆಪಿಸಿಸಿ ಕೋವಿಡ್‌-19 ಕಾರ್ಯಪಡೆ ಧಾರವಾಡ ಜಿಲ್ಲಾಧ್ಯಕ್ಷರೂ ಆಗಿರುವ ಪ್ರಸಾದ ಅಬ್ಬಯ್ಯ ಅವರು, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಹಳೇ ಹುಬ್ಬಳ್ಳಿ, ನೇಕಾರ ನಗರ, ಧಾರವಾಡ ಪ್ಲಾಟ್‌, ಬಿಡ್ನಾಳ, ಮಂಟೂರು ರಸ್ತೆ, ಗಣೇಶಪೇಟೆ, ಅಜ್ಮೀರಿಯಾ ನಗರ, ದಿವಾನ್‌ ಶಾ ನಗರ ಸುತ್ತಲಿನ ಪ್ರದೇಶದಲ್ಲಿನ ಬಡವರು, ದುಡಿಯುವ ವರ್ಗ, ಕೂಲಿ-ಕಾರ್ಮಿಕರಿಗೆ ಲಕ್ಷಾಂತರ ರೂಪಾಯಿ ವೆಚ್ಚದ ಆಹಾರ ಸಾಮಗ್ರಿ, ದಿನಬಳಕೆ ವಸ್ತುಗಳು, ತರಕಾರಿಗಳ ಹಂಚಿಕೆಯಲ್ಲಿ ತೊಡಗಿದ್ದು, ದಾನಿಗಳು, ವಿವಿಧ ಸಂಘ – ಸಂಸ್ಥೆ ನೀಡುವ ವಸ್ತುಗಳನ್ನು ಪಕ್ಷದ ಕಾರ್ಯಕರ್ತರು, ಎನ್‌ಜಿಒಗಳ ಮೂಲಕ ತಲುಪಿಸುವುದಕ್ಕೆ ಮಾರ್ಗದರ್ಶಕರಾಗಿದ್ದಾರೆ.


ಲಾಕ್ ‌ಡೌನ್‌ ಹಿನ್ನೆಲೆಯಲ್ಲಿ ಕೆಪಿಸಿಸಿ ಮುಖಂಡರ ವಿಡಿಯೋ ಸಂವಾದದಲ್ಲಿ ಭಾಗಿ.

ಅಧಿಕಾರಿ-ವೈದ್ಯರೊಂದಿಗೆ ಸಭೆ: ಕೋವಿಡ್ ವೈರಸ್‌ ತಡೆಗಾಗಿ ಪಾಲಿಕೆ ಆಯುಕ್ತರು ಹಾಗೂ ಸಿಬ್ಬಂದಿಯೊಂದಿಗೆ ಜಾಗೃತಿ ಸಭೆ ನಡೆಸಿದ್ದ ಶಾಸಕರು, ಕಿಮ್ಸ್‌ ವೈದ್ಯರು, ಆಹಾರ-ನಾಗರಿಕ ಪೂರೈಕೆ ಇಲಾಖೆ, ಪೊಲೀಸ್‌ ಇನ್ನಿತರ ಇಲಾಖೆ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿ ಮಾಹಿತಿ ಪಡೆದಿದ್ದು, ಅಗತ್ಯ ಸಲಹೆ ನೀಡುತ್ತಿದ್ದಾರೆ.

ಪೌರ ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆಗೆ ಒತ್ತು ನೀಡುವಂತೆ, ಸುರಕ್ಷತಾ ಸಲಕರಣೆಗಳನ್ನು ವಿತರಿಸುವಂತೆ ಸೂಚಿಸುವ ಮೂಲಕ ಪೌರಕಾರ್ಮಿಕರ ಬಗೆಗಿನ ಕಾಳಜಿ ತೋರಿದ್ದರು. ಅದೇ ರೀತಿ ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿಯಾಗದಂತೆ ಅಗತ್ಯ ರಕ್ಷಣೆ ಹಾಗೂ ಸುರಕ್ಷತಾ ಸಲಕರಣೆ ನೀಡುವಂತೆ ಒತ್ತಾಯಿಸಿದ್ದಾರೆ.

ಕೋವಿಡ್ ತಡೆಗೆ ಒಳರಸ್ತೆಗಳಲ್ಲೂ ಔಷಧಿ ಸಿಂಪರಣೆ ಮಾಡುವಂತೆ ಸೂಚಿಸುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ನೈಜ ಕಾಳಜಿ ತೋರಿದ್ದಾರೆ. ನಾಲಾಗಳ ಸ್ವಚ್ಛತೆಗೂ ಸೂಚಿಸಿದ್ದಾರೆ. ವೈದ್ಯರು-ಸಿಬ್ಬಂದಿಗೆ ಗುಣಮಟ್ಟದ ಪಿಪಿಇ ಕಿಟ್‌ ವಿತರಿಸುವಂತೆ ಒತ್ತಾಯಿಸಿದ್ದರು. ಅದರ ಪರಿಣಾಮ ಸುಮಾರು 7 ಸಾವಿರ ಪಿಪಿಇ ಕಿಟ್‌ಗಳು ಅವಳಿ ನಗರಕ್ಕೆ ಆಗಮಿಸಿವೆ.


ಹುಬ್ಬಳ್ಳಿ: ಹು-ಧಾ ಪೂರ್ವ ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರಿಗೆ ದಿನಸಿ ವಿತರಣೆ.


ಚಕ್ಕಡಿಗಳಿಗೆ ಅಡ್ಡಿ ನಿವಾರಣೆ- ಹಾಲು ವಿತರಣೆ

ಲಾಕ್ ‌ಡೌನ್‌ನಿಂದ ರೈತರು ಬೆಳೆದ ತರಕಾರಿ, ಹಣ್ಣು, ಕೃಷಿ ಉತ್ಪನ್ನ ಮಾರಾಟಕ್ಕೆ ಹಾಗೂ ಬೀಜ – ರಸಗೊಬ್ಬರ ತರುವುದಕ್ಕೆ ಯಾವುದೇ ತೊಂದರೆ ಆಗಬಾರದು ಎಂಬುದು ಶಾಸಕ ಪ್ರಸಾದ ಅಬ್ಬಯ್ಯ ಅವರ ಸ್ಪಷ್ಟ ನಿಲುವಾಗಿದೆ. ಇತ್ತೀಚೆಗೆ ಧಾರವಾಡದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದರು.

ಕ್ಷೇತ್ರ ವ್ಯಾಪ್ತಿಯ ಯಲ್ಲಾಪುರ ಓಣಿ, ವೀರಾಪುರ ಓಣಿ, ಬಿಡ್ನಾಳ, ಗಬ್ಬೂರಿನಲ್ಲಿ ರೈತರು ತಮ್ಮ ಹೊಲಗಳಿಗೆ ತೆರಳಲು ಕೊಂಡೊಯ್ಯುವ ಚಕ್ಕಡಿಯನ್ನು ಪೊಲೀಸರು ತಡೆಯುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತಂದು ಆ ಸಮಸ್ಯೆ ನಿವಾರಿಸಿರುವುದು ಅವರಲ್ಲಿನ ರೈತ ಪರ ಕಾಳಜಿಗೆ ಸಾಕ್ಷಿಯಾಗಿದೆ.

ಕೆಎಂಎಫ್ ನಿಂದ ಕೊಳಗೇರಿ ಜನರಿಗೆ ಹಾಲು ವಿತರಣೆಗೆ ರಾಜ್ಯ ಸರಕಾರ ಮುಂದಾದಾಗ, ಕೊಳಗೇರಿ ಅಲ್ಲದೆ ಇತರೆ ಪ್ರದೇಶಗಳ ಪಡಿತರದಾರರಿಗೂ ಉಚಿತ ಹಾಲು ವಿತರಿಸುವಂತೆ ಒತ್ತಾಯಿಸಿದವರಲ್ಲಿ ಮೊದಲಿಗರಾದ ಪ್ರಸಾದ ಅಬ್ಬಯ್ಯ, ತಮ್ಮ ಕ್ಷೇತ್ರದಲ್ಲಿ ಅರ್ಹರಿಗೆ ಹಾಲು ವಿತರಣೆ ಆಗುತ್ತಿದೆಯೋ ಇಲ್ಲವೋ ಎಂಬುದರ ಬಗ್ಗೆ ಅಧಿಕಾರಿಗಳು ಹಾಗೂ ಜನರಿಂದ ನಿತ್ಯವೂ ಮಾಹಿತಿ ಪಡೆಯುತ್ತಿದ್ದಾರೆ.


ಹುಬ್ಬಳ್ಳಿ: ಜನಪ್ರತಿನಿಧಿಗಳು ಹಾಗೂ ಪಕ್ಷದ ಪ್ರಮುಖರೊಂದಿಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಸಭೆ ನಡೆಸುತ್ತಿರುವುದು.

ಸೌಹಾರ್ದತೆಗೆ ಪ್ರಮುಖ ಪಾತ್ರ
ಕೋವಿಡ್ ವೈರಸ್‌ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆ ಆಗದಿರಲಿ ಎಂಬ ಉದೇಶದೊಂದಿಗೆ ಹುಬ್ಬಳ್ಳಿಯ ಸರ್ಕ್ಯೂಟ್‌ ಹೌಸ್‌ನಲ್ಲಿ ನಡೆದ ಜನಪ್ರತಿನಿಧಿಗಳು, ಅಂಜುಮನ್‌-ಎ-ಇಸ್ಲಾಂ ಸಂಸ್ಥೆ ಪ್ರಮುಖರೊಂದಿಗಿನ ಸಭೆಯಲ್ಲಿ ಪಾಲ್ಗೊಂಡು ಹಲವು ಸಲಹೆ ನೀಡಿದ್ದರು. ಶಾಂತಿ -ನೆಮ್ಮದಿಗೆ ಭಂಗ ತರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.

ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ‘ರಂಜಾನ್‌ ತಿಂಗಳು’ ಆರಂಭವಾಗಿದ್ದು, ಮಾಂಸ ಮಾರಾಟ ಘಟಕಗಳನ್ನು ವಿಕೇಂದ್ರೀಕರಣ ಮಾಡಿ, ಸಾಮಾಜಿಕ ಅಂತರ ಪಾಲನೆಯೊಂದಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಸೂಚಿಸಿದ್ದರು. ಕ್ಷೇತ್ರದ ಮುಲ್ಲಾ ಓಣಿಯ ಒಂದೇ ಕುಟುಂಬದ ಐವರು ವ್ಯಕ್ತಿಗಳಿಗೆ ಕೋವಿಡ್ ಸೋಂಕು ದೃಢಪಟ್ಟ ಕೂಡಲೇ ಕ್ಷೇತ್ರದ ಜನರಿಗೆ ಮನೆಯಲ್ಲೇ ಇರುವಂತೆ ಮನವಿ ಮಾಡಿದ್ದರಲ್ಲದೆ, ವೈಯಕ್ತಿಯ ಶುಚಿತ್ವದೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೋರಿದ್ದರು. ಕ್ಷೇತ್ರದ ನೇಕಾರ ನಗರದ ವಾಣಿ ಪ್ಲಾಟ್‌ ಸೇರಿದಂತೆ ವಿವಿಧ ಕಡೆ ಸ್ವತಃ ತೆರಳಿ ಜನರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಸೌಲಭ್ಯಗಳ ಪಡೆಯಲು ಸರದಿಯಲ್ಲಿ ನಿಲ್ಲುವಂತೆ ಮನವಿ ಮಾಡಿದ್ದರು.


ಹುಬ್ಬಳ್ಳಿ: ಕೂಲಿ ಕಾರ್ಮಿಕರಿಗೆ ದಿನಸಿ ಪೂರೈಕೆಯಲ್ಲಿ ನಿರತರಾಗಿರುವ ಪ್ರಸಾದ ಅಬ್ಬಯ್ಯ.

ಹೊರ ರಾಜ್ಯಗಳಲ್ಲಿನ ಕಾರ್ಮಿಕರ ಪರ ಧ್ವನಿ
ಉದ್ಯೋಗಕ್ಕೆಂದು ಹೊರ ರಾಜ್ಯಗಳಿಗೆ ಹೋಗಿರುವ ಹು.ಧಾ. ಪೂರ್ವ ಕ್ಷೇತ್ರದ ಅನೇಕ ನಿವಾಸಿಗಳು ಅಲ್ಲಿಯೇ ಸಿಲುಕಿದ್ದು, ಅವರ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂಬುದು ಶಾಸಕ ಪ್ರಸಾದ ಅಬ್ಬಯ್ಯ ಅವರ ಒತ್ತಾಯವಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪೊಲೀಸ್‌ ಆಯುಕ್ತರೊಂದಿಗೆ ನಡೆದ ಸಭೆ-ಸಂವಾದದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದ ಅವರು, ಹೊರ ರಾಜ್ಯಗಳಲ್ಲಿರುವ ಕಾರ್ಮಿಕರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ಸೌಲಭ್ಯ ದೊರೆಯುವಂತೆ ಮಾಡಬೇಕೆಂದು ಆಗ್ರಹಿಸಿದ್ದರು. ಅದೇ ರೀತಿ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಪೊಲೀಸರು ಪಾಲಿಕೆ ಅಧಿಕಾರಿಗಳು, ನೌಕರರು ಹಾಗೂ ರಾತ್ರಿ ವೇಳೆ ಕೆಲಸ ನಿರ್ವಹಿಸುವ ಪತ್ರಿಕಾ ಸಿಬ್ಬಂದಿಯನ್ನು ಥಳಿಸಿದ ಪ್ರಕರಣಗಳ ಬಗ್ಗೆಯೂ ಪ್ರಸ್ತಾಪಿಸಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದರು.

ಉಚಿತ ಬೇಳೆ-ಅಡುಗೆ ಎಣ್ಣೆ ನೀಡಲು ಒತ್ತಾಯ
ಲಾಕ್ ‌ಡೌನ್‌ ಹಿನ್ನೆಲೆಯಲ್ಲಿ ಬಡವರಿಗೆ ಕೇವಲ ಅಕ್ಕಿ-ಗೋದಿ ನೀಡಿದರೆ ಸಾಲದು. ಜತೆಗೆ ಉಚಿತವಾಗಿ ಬೇಳೆ, ಅಡುಗೆ ಎಣ್ಣೆಯನ್ನೂ ನೀಡಬೇಕೆಂಬ ಒತ್ತಾಯ ಶಾಸಕರದ್ದಾಗಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ ಈವರೆಗೆ ಒಟ್ಟು 4 ಲಕ್ಷ ಪಡಿತರ ಕಾರ್ಡ್‌ದಾರರ ಪೈಕಿ 3.8 ಲಕ್ಷಕ್ಕೂ ಅಧಿಕ ಮಂದಿಗೆ ಪಡಿತರ ವಿತರಿಸಲಾಗಿದೆ.

ಮೇ 1ರಿಂದ ಪ್ರಧಾನ ಮಂತ್ರಿ ಗೃಹ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಜಾರಿಯಾಗಲಿದ್ದು, ಇದರಡಿ ಪ್ರತಿ ಕಾರ್ಡ್‌ದಾರರಿಗೆ ತಲಾ 10 ಕೆಜಿ ಅಕ್ಕಿ ಹಾಗೂ 1 ಪಡಿತರ ಚೀಟಿಗೆ 1 ಕೆಜಿ ತೊಗರಿಬೇಳೆ ದೊರೆಯಲಿದೆ. ಸಂಕಷ್ಟ ಸ್ಥಿತಿಯಲ್ಲಿ ಇದು ಸಹಕಾರಿ ಆಗಲಿದೆ. ಲಾಕ್ ‌ಡೌನ್‌ನಿಂದ ನಗರದ ಎಲ್ಲ ಹೋಟೆಲ್‌ಗ‌ಳು ಬಂದ್‌ ಆಗಿದ್ದು, ಸರಕಾರ ಪಾರ್ಸೆಲ್‌ಗೆ ಅವಕಾಶ ನೀಡಿದೆ. ಹೋಟೆಲ್‌ಗ‌ಳಿಂದ ಪಾರ್ಸೆಲ್‌ ಸೇವೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕೆಂಬ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಲಕ್ಷ ರೂ. ನೆರವು
ಶಾಸಕ ಪ್ರಸಾದ ಅಬ್ಬಯ್ಯ ಅವರ ನಿವಾಸಕ್ಕೆ ಆರೋಗ್ಯ ಇನ್ನಿತರ ರೀತಿಯ ನೆರವು ಕೋರಿ ಬರುವವರು ಕೇವಲ ಅವರ ಮತಕ್ಷೇತ್ರವರೇ ಇರಲಾರರು, ಕ್ಷೇತ್ರದಲ್ಲದವರು ಬಂದರೂ ಕೈಲಾದ ನೆರವು ನೀಡುವ ಮಾನವೀಯತೆ ಅವರದ್ದು. ವಿದ್ಯಾಭ್ಯಾಸ, ಆರೋಗ್ಯ, ಮದುವೆ ಕಾರಣದಿಂದ ಬರುವ ಬಡವರಿಗೆ ನೆರವಿನ ತಾಣ ಇವರು. ಕೋವಿಡ್ ಕಾರಣದಿಂದ ಮುಂದಿನ ದಿನಗಳಲ್ಲಿ 5 ಸಾವಿರ ಮಾಸ್ಕ್, 10 ಸಾವಿರ ಬಿಸ್ಕೆಟ್‌ ಪಾಕೇಟ್‌ ವಿತರಿಸುವ ಚಿಂತನೆ ಹೊಂದಿದ್ದು, ಕೆಪಿಸಿಸಿ ಕೋವಿಡ್ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಟಾಪ್ ನ್ಯೂಸ್

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.