ಹುಬ್ಬಳ್ಳಿ: ರಾಜ್ಯದಲ್ಲೂ ದೇಸಿ ಹಸುವಿಗೆ “ರಾಜ್ಯಮಾತಾ’ ಸ್ಥಾನಕ್ಕೆ ಕೂಗು
Team Udayavani, Oct 10, 2024, 3:44 PM IST
ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಮಹಾರಾಷ್ಟ್ರ ಸರ್ಕಾರ ದೇಸಿ ಗೋವಿಗೆ “ರಾಜ್ಯಮಾತಾ’ ಸ್ಥಾನ ನೀಡಿ ರೈತರಿಗೆ ಪ್ರೋತ್ಸಾಹ ಧನ ಘೋಷಣೆ ಮಾಡಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಇಂತಹ ಘೋಷಣೆ ಆಗಲಿ ಎಂಬ ಕೂಗು ಕೇಳಿಬಂದಿದೆ. ದೇಶದಲ್ಲಿ ಈ ಹಿಂದೆ ನೂರಾರು ದೇಸಿ ತಳಿಗಳ ಹಸುಗಳಿದ್ದವು. ಈಗ ಸುಮಾರು 31 ದೇಸಿ ಹಸುಗಳ ತಳಿಗಳಷ್ಟೇ ಉಳಿದಿವೆ. ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಪೂರಕವಾಗಲಿದೆ ಎನ್ನಲಾಗಿದೆ.
ದೇಸಿ ಗೋವಿಗೆ “ರಾಷ್ಟ್ರಮಾತಾ’ ಸ್ಥಾನ ನೀಡಬೇಕೆಂಬ ಬೇಡಿಕೆ ದಶಕಗಳಷ್ಟು ಹಳೆಯದ್ದು. ಇದುವರೆಗೂ ಅದು ಸಾಧ್ಯವಾಗಿಲ್ಲ. ಆದರೆ, ಮಹಾರಾಷ್ಟ್ರ ಸರ್ಕಾರ “ರಾಜ್ಯಮಾತಾ’ ಸ್ಥಾನ ನೀಡಿರುವುದು ದೇಸಿ ಗೋವುಗಳ ಸಾಕಣೆದಾರರಿಗೆ ಖುಷಿ ತರಿಸಿದೆ. ಅಲ್ಲದೇ ಜರ್ಸಿ ಹಾಗೂ ಎಚ್‌ಎಫ್ ಹಸುಗಳ ಅಬ್ಬರದಲ್ಲಿ ತೆರೆ-ಮರೆಗೆ ಸರಿದಂತಿದ್ದ ದೇಸಿ ಹಸುಗಳಿಗೆ ಮತ್ತೆ ಮಹತ್ವ ಸಿಗಲಿದೆ.
ರೈತರಿಗೆ ಬಲ: ಇನ್ನು ದೇಸಿ ಗೋಸಾಕಾಣಿಕೆ ಪ್ರೋತ್ಸಾಹಿಸಲು ಪ್ರತಿ ಹಸುವಿಗೆ ದಿನಕ್ಕೆ 50 ರೂ.ಗಳಂತೆ ಮಾಸಿಕ 1,500 ರೂ.ಗಳ ಪ್ರೋತ್ಸಾಹ ಧನ ನೀಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿರುವುದು ರೈತರಿಗೆ ಬಲ ನೀಡಲಿದೆ. ಸದ್ಯ ದೇಸಿ ಹಸುವಿನ ಹಾಲು 100-110 ರೂ.ಗೆ ಒಂದು ಲೀಟರ್‌ನಂತೆ ಹಾಗೂ ತುಪ್ಪ ಕೆಜಿಗೆ 2200-3,500 ರೂ.ವರೆಗೆ ಮಾರಾಟವಾಗುತ್ತಿದೆ.
ಸಾವಯವ ಕೃಷಿಯಲ್ಲೂ ದೇಸಿ ಹಸುಗಳ ಕೊಡುಗೆ ಮಹತ್ವದ್ದಾಗಿದೆ. ಇನ್ನೊಂದೆಡೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜೆರ್ಸಿಗಳ ಸಂಖ್ಯೆ ನಿರೀಕ್ಷೆಗೆ ಮೀರಿ ಹೆಚ್ಚಿದೆ. ಕೆಎಂಎಫ್ ಸೇರಿದಂತೆ ಯಾವುದೇ ಡೈರಿಗಾಗಲಿ ನಿತ್ಯ ಬರುವ ಹಾಲಿನಲ್ಲಿ ಬಹುತೇಕ ಪಾಲು ಜೆರ್ಸಿ ಹಸುಗಳದ್ದೇ ಆಗಿರುತ್ತದೆ.
ಕನೇರಿಮಠದ ಕೊಡುಗೆ: ಈ ನಡುವೆ ದೇಸಿ ಹಸುಗಳ ರಕ್ಷಣೆ ನಿಟ್ಟಿನಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಮಠದ ಕಾರ್ಯ ಮಹತ್ವದ್ದಾಗಿದೆ. ಮಹಾರಾಷ್ಟ್ರ ಸರ್ಕಾರದ “ರಾಜ್ಯಮಾತಾ’ ಘೋಷಣೆಯಲ್ಲೂ ಶ್ರೀಮಠದ ಪ್ರಭಾವವಿದೆ. ಶ್ರೀಮಠದಲ್ಲಿ ಸುಮಾರು 22-23 ತಳಿಯ ಅಂದಾಜು 1,500ಕ್ಕೂ ಹೆಚ್ಚು ದೇಸಿ ಹಸುಗಳಿವೆ. ಶ್ರೀಮಠ ಪ್ರತಿ ವರ್ಷವೂ “ಗೋ ಪರಿಕ್ರಮ ಯಾತ್ರೆ’ ಕೈಗೊಳ್ಳುತ್ತಿದ್ದು, ಇದು ಕೊಲ್ಲಾಪುರ ಜಿಲ್ಲೆ, ಕರ್ನಾಟಕದ ಹಲವು ಗ್ರಾಮಗಳಲ್ಲಿಯೂ ಪರಿಣಾಮ ಬೀರಿದೆ. ಕೊಲ್ಲಾಪುರ ಜಿಲ್ಲೆಯಲ್ಲಿ ಸುಮಾರು 3-4 ಲಕ್ಷದಷ್ಟು ದೇಸಿ ಹಸುಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬುದು ಅಲ್ಲಿನ ಪಶುಸಂಗೋಪನಾ
ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ರಾಜ್ಯದಲ್ಲೂ ಜಾರಿಯಾಗಲಿ: ಕರ್ನಾಟಕದಲ್ಲಿ ಸಂಘ ಪರಿವಾರ, ಅನೇಕ ಮಠಗಳು, ಸಂಘ-ಸಂಸ್ಥೆಗಳು ಗೋಶಾಲೆಗಳ ಮೂಲಕ ದೇಸಿ ಹಸುಗಳ ಸಾಕಣೆ ಮಾಡುತ್ತಿದ್ದು, ಹಳ್ಳಿಗಳಲ್ಲಿಯೂ ರೈತರು ನಿಧಾನಕ್ಕೆ ದೇಸಿ ಹಸುಗಳ ಸಾಕಣೆಗೆ ಮುಂದಾಗುತ್ತಿದ್ದಾರೆ. ದೇಸಿ ಹಸುಗಳ ಸಂರಕ್ಷಣೆ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ರಾಜ್ಯ ಸರ್ಕಾರ ಮಹಾರಾಷ್ಟ್ರ ಮಾದರಿಯಲ್ಲಿ ದೇಸಿಯ ಗೋವಿಗೆ “ರಾಜ್ಯಮಾತಾ’ ಪಟ್ಟ ನೀಡಿ ಅವುಗಳನ್ನು ಪೋಷಿಸುವ ರೈತರಿಗೆ ಸಹಾಯಧನ ನೀಡುವಂತಾಗಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ದೇಸಿ ಗೋವುಗಳ ಸಂರಕ್ಷಣೆ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಕ್ರಮ ಪ್ರೇರಣಾದಾಯಕವಾಗಿದೆ. ರಾಷ್ಟ್ರಮಟ್ಟದಲ್ಲಿಯೂ ದೇಸಿ ಗೋವಿಗೆ “ರಾಷ್ಟ್ರಮಾತಾ’ ಘೋಷಣೆ ಬೇಡಿಕೆ-ಒತ್ತಾಯವಿದೆ. ಕೇಂದ್ರ ಸರ್ಕಾರ ಅದನ್ನು
ಕೈಗೊಂಡರೆ ಇನ್ನಷ್ಟು ಖುಷಿ ತರಲಿದೆ. ಆರೋಗ್ಯ, ಪರಿಸರ, ಸಾವಯವ ಕೃಷಿ ದೃಷ್ಟಿಯಿಂದ ದೇಸಿಗಳು ಮತಹ್ವದ ಪಾತ್ರ ಬೀರುತ್ತವೆ.
*ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿಮಠ.
ಮಹಾರಾಷ್ಟ್ರ ಸರ್ಕಾರ ದೇಸಿ ಹಸುಗಳಿಗೆ “ರಾಜ್ಯಮಾತಾ’ ಪಟ್ಟ ನೀಡಿರುವುದು ಒಳ್ಳೆಯ ಬೆಳವಣಿಗೆ. ಕರ್ನಾಟಕದಲ್ಲಿಯೂ ಇಂತಹ ಘೋಷಣೆ ಆಗಲಿ ಎಂದು ವಿಶ್ವಹಿಂದೂ ಪರಿಷತ್‌ನ ಗೋರಕ್ಷಾ ವಿಭಾಗದಿಂದ ಸರ್ಕಾರವನ್ನು ಒತ್ತಾಯಿಸಲಾಗುವುದು.
ಉತ್ತರ ಕರ್ನಾಟಕದಲ್ಲಿ ನಾಲ್ಕೈದು ಕಡೆ ಗೋಶಾಲೆಗಳನ್ನು ನಿರ್ವಹಿಸಲಾಗುತ್ತಿದ್ದು, ದೇಸಿ ಹಸುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
*ಗೋವರ್ಧನರಾವ್,
ವಿಎಚ್‌ಪಿ ಉತ್ತರ ಪ್ರಾಂತ ಮುಖ್ಯಸ್ಥ.
■ ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.