Maharaja trophy 2024: ಅಗ್ರಸ್ಥಾನಕ್ಕೆ ನೆಗೆದ ಹುಬ್ಬಳ್ಳಿ ಟೈಗರ್
Team Udayavani, Aug 20, 2024, 10:33 PM IST
ಬೆಂಗಳೂರು: “ಮಹಾ ರಾಜ ಟ್ರೋಫಿ’ ಕ್ರಿಕೆಟ್ ಟೂರ್ನಿಗೆ ಮಳೆಯ ಕಾಟ ಮುಂದುವರಿದಿದೆ. ಹೀಗಾಗಿ ಹುಬ್ಬಳ್ಳಿ ಟೈಗರ್- ಶಿವಮೊಗ್ಗ ಲಯನ್ಸ್ ನಡುವಿನ ಮಂಗಳವಾರದ ಮೊದಲ ಪಂದ್ಯದ ಫಲಿತಾಂಶಕ್ಕೆ ವಿಜೆಡಿ ನಿಯಮವನ್ನು ಅಳವಡಿಸಲಾಯಿತು. ಇದನ್ನು 8 ವಿಕೆಟ್‌ಗಳಿಂದ ಗೆದ್ದ ಹುಬ್ಬಳ್ಳಿ ಸತತ 4 ಜಯದೊಂದಿಗೆ ಅಗ್ರಸ್ಥಾನ ಅಲಂಕರಿಸಿತು. ಶಿವಮೊಗ್ಗ ಎಲ್ಲ 4 ಪಂದ್ಯಗಳನ್ನು ಸೋತು ಅಂತಿಮ ಸ್ಥಾನವನ್ನು ಗಟ್ಟಿಗೊಳಿಸಿತು.
ಪಂದ್ಯವನ್ನು ಮೊದಲು 17 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಶಿವ ಮೊಗ್ಗ 9 ವಿಕೆಟಿಗೆ 137 ರನ್ ಗಳಿಸಿತು. ಚೇಸಿಂಗ್ ವೇಳೆ ಪುನಃ ಮಳೆ ಸುರಿದ ಕಾರಣ ಹುಬ್ಬಳ್ಳಿಗೆ 5 ಓವರ್‌ಗಳಲ್ಲಿ 51 ರನ್ ಗುರಿ ನೀಡದರುಲಾಯಿತು. ಅದು ಕೇವಲ 3.2 ಓವರ್‌ಗಳಲ್ಲಿ ಒಂದು ವಿಕೆಟಿಗೆ ಗುರಿ ಸಾಧಿಸಿತು.
ಚೇಸಿಂಗ್ ವೇಳೆ ಮೊಹಮ್ಮದ್ ತಾಹಾ ಕೇವಲ 12 ಎಸೆತಗಳಿಂದ 35 ರನ್ ಬಾರಿಸಿ ಅಜೇಯರಾಗಿ ಉಳಿದರು. ಸಿಡಿಸಿದ್ದು ಒಂದು ಫೋರ್ ಮತ್ತು 5 ಸಿಕ್ಸರ್.
ಶಿವಮೊಗ್ಗ ಸರದಿಯಲ್ಲಿ ಹಾರ್ದಿಕ್ ರಾಜ್ ಅತ್ಯಧಿಕ 35 ರನ್, ಎಸ್. ಶಿವರಾಜ್ 24 ರನ್ ಮಾಡಿದರು. ಹುಬ್ಬಳ್ಳಿಯ ಐವರೂ ಬೌಲರ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಕೆ.ಸಿ. ಕಾರ್ಯಪ್ಪ 30ಕ್ಕೆ 2 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.