ಸ್ಲಮ್‌ಗಳೇ ವೈರಸ್‌ನ ಉಗಮ ಸ್ಥಾನಗಳು


Team Udayavani, May 19, 2020, 1:15 PM IST

ಸ್ಲಮ್‌ಗಳೇ ವೈರಸ್‌ನ ಉಗಮ ಸ್ಥಾನಗಳು

ನ್ಯೂಯಾರ್ಕ್‌: ಶ್ರೀಮಂತ ದೇಶಗಳ ಅತ್ಯಾಧುನಿಕ ನಗರಗಳನ್ನು ತತ್ತರಗೊಳಿಸಿದ ಕೋವಿಡ್‌ ವೈರಸ್‌ ಈಗ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳ ನಗರಗಳಲ್ಲಿ ರುದ್ರತಾಂಡವ ಪ್ರಾರಂಭಿಸಿದೆ. ಅದರಲ್ಲೂ ಬಡದೇಶಗಳ ನಗರಗಳಲ್ಲಿರುವ ಕೊಳೆಗೇರಿಗಳ ಸ್ಥಿತಿ ಚಿಂತಾಜನಕವಾಗುತ್ತಿದೆ. ಮುಂಬಯಿಯ ಧಾರಾವಿಯಾಗಿರಲಿ, ಬಾಂಗ್ಲಾದೇಶ, ನೈಜೀರಿಯ, ಬ್ರಜಿಲ್‌ನಂಥ ದೇಶವಾಗಿರಲಿ ಕೊಳೆಗೇರಿಗಳಲ್ಲಿ ವಾಸವಾಗಿರುವವರು ಕೋವಿಡ್‌ ಎದುರು ಅಸಹಾಯಕರಾಗಿ ನೆರವಿಗಾಗಿ ಅಂಗಲಾಚುತ್ತಿದ್ದಾರೆ.

ನೀತಿ ರೂಪಣೆಗಾಗಿ ದತ್ತಾಂಶಗಳನ್ನು ಕಲೆ ಹಾಕುವ ಸಲುವಾಗಿ ಕೊಳೆಗೇರಿಗಳ ಸ್ಥಿತಿಗತಿಯ ಅಧ್ಯಯನ ಮಾಡಿದಾಗ ದಯನೀಯವಾದ ಚಿತ್ರಣ ಬಿಚ್ಚಿಕೊಂಡಿದೆ. ಜಗತ್ತಿನಾದ್ಯಂತ ಸುಮಾರು 100 ಕೋಟಿ ಜನರು ಕೊಳೆಗೇರಿಗಳಲ್ಲಿ ವಾಸವಾಗಿದ್ದಾರೆ.

ಕಡಿಮೆ ಖರ್ಚಿನ ಕಚ್ಚಾ ಮನೆಗಳು, ನೈರ್ಮಲ್ಯದ ಕೊರತೆ, ಆರೋಗ್ಯದ ಬಗೆಗೆ ಕಾಳಜಿಯಿಲ್ಲದಿರುವುದು, ಪೋಷಕಾಂಶದ ಕೊರತೆ ಇವೆಲ್ಲ ಎಲ್ಲ ಕೊಳೆಗೇರಿಗಳ ಸಾಮಾನ್ಯ ಲಕ್ಷಣಗಳು. ಕಡು ಬಡವರು ವಾಸವಾಗಿರುವ ಕೊಳೆಗೇರಿಗಳು ಎಂದಿಗೂ ರೋಗುರುಜಿನಗಳಿಗೆ ಮೊದಲು ತುತ್ತಾಗುತ್ತವೆ.

ಕೊಳೆಗೇರಿಗಳ ಅಧ್ಯಯನ ನಡೆಸಿದಾಗ ಅನೇಕ ಕೊಳೆಗೇರಿಗಳಿಗೆ ಇನ್ನೂ ಕೋವಿಡ್‌ ವಿರುದ್ಧ ಹೋರಾಡಲು ಅಗತ್ಯವಿರುವ ಪ್ರಾಥಮಿಕ ಸೌಲಭ್ಯಗಳೂ ತಲುಪಿಲ್ಲ ಎನ್ನುವ ಕಟುಸತ್ಯ ಅನಾವರಣಗೊಂಡಿದೆ. ಆಫ್ರಿಕದ ದೇಶಗಳ ಕೊಳೆಗೇರಿಗಳಲ್ಲಿ ಸೌಲಭ್ಯಗಳ ಕೊರತೆ ಢಾಳಾಗಿಯೇ ರಾಚುತ್ತದೆ.

ಅತಿಯಾದ ಜನದಟ್ಟಣೆ ಕೊಳೆಗೇರಿಗಳ ಮುಖ್ಯ ಸಮಸ್ಯೆ ಹಾಗೂ ಇದುವೇ ಎಲ್ಲ ಸಮಸ್ಯೆಗಳ ಮೂಲ. ಉಳಿದ ಕಡೆಗಳಿಗೆ ಹೋಲಿಸಿದರೆ ಕೊಳೆಗೇರಿಗಳ ಜನಸಾಂದ್ರತೆ ಹತ್ತುಪಟ್ಟು ಹೆಚ್ಚಿರುತ್ತದೆ. ಧಾರಾವಿ ಕೊಳೆಗೇರಿಯಲ್ಲಿ ಪ್ರತಿ ಚದರ ಕಿಲೋಮೀಟರ್‌ಗೆ 97,000 ಮಂದಿ ವಾಸವಾಗಿದ್ದಾರೆ. ಇದೇ ನಗರದ ಉಳಿದ ಭಾಗಗಳಲ್ಲಿರುವುದು ಚದರ ಕಿಲೋಮೀಟರ್‌ಗೆ 11,500 ಮಂದಿ. ಇಂಥ ಕೊಳೆಗೇರಿಗಳಲ್ಲಿ ಸಾಮಾಜಿಕ ಅಂತರ ಪಾಲನೆ ಅಸಾಧ್ಯ. ಕಿಷ್ಕಿಂಧೆಯಂಥ ಬೀದಿಗಳು ಮತ್ತು ಮನೆಗಳಲ್ಲಿ ಜನರು ಒತ್ತೂತ್ತಾಗಿಯೇ ಇರಬೇಕಾಗುತ್ತದೆ. ಕೋವಿಡ್‌ ವೈರಸ್‌ ಹರಡಲು ಇದಕ್ಕಿಂತ ಪ್ರಶಸ್ತವಾದ ಸ್ಥಳ ಇನ್ನೊಂದಿಲ್ಲ.

ಕೊಳೆಗೇರಿಗಳಿಗೆ ಶುದ್ಧವಾದ ಕುಡಿಯುವ ನೀರಿನ ಪೂರೈಕೆ ಒಂದು ಶಾಶ್ವತ ಸಮಸ್ಯೆ. ಜನರಿಗೆ ಖಾಸಗಿ ಶೌಚಾಲಯಗಳು ಇರುವುದಿಲ್ಲ. ಹೆಚ್ಚಿನವರು ಸಾರ್ವಜನಿಕ ಶೌಚಾಲಯಗಳನ್ನೇ ಅವಲಂಬಿಸಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪದೇಪದೆ ಕೈತೊಳೆಯುವುದು ಸಾಧ್ಯವಾಗದ ಸಂಗತಿ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಖನ್ನತೆ ಕೊಳೆಗೇರಿಗಳ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಕಾಯಿಲೆಗಳು. ಇಲ್ಲಿನ ಜನರ ರೋಗನಿರೋಧಕ ಶಕ್ತಿಯೂ ಕಡಿಮೆಯಾಗಿರುತ್ತದೆ.

ಬ್ರಜಿಲ್‌ನ ರಿಯೊ ಡಿ ಜನೆರೊ ನಗರದ ಹೊರಭಾಗದಲ್ಲಿರುವ ಜೋಪಡಿಗಳಲ್ಲಿ 67 ಲಕ್ಷ ಮಂದಿ ವಾಸವಾಗಿದ್ದಾರೆ. ಈ ಪೈಕಿ ನೂರಾರು ಮಂದಿಯಲ್ಲಿ ಈಗಾಗಲೇ ಕೋವಿಡ್‌ ಸೋಂಕು ದೃಢಪಟ್ಟಿದೆ. ಆಸ್ಪತ್ರೆಗಳೆಲ್ಲ ಭರ್ತಿಯಾಗಿರುವುದರಿಂದ ಹೊಸದಾಗಿ ಸೋಂಕಿಗೊಳಗಾದವರಿಗೆ ಚಿಕಿತ್ಸೆಯೂ ಸಿಗುತ್ತಿಲ್ಲ.

ನೈಜೀರಿಯದ ಲಾಗೋಸ್‌ ನಗರ ಕೋವಿಡ್‌ ವಿರುದ್ಧ ಹೋರಾಡಲಾಗದೆ ಕೈಚೆಲ್ಲಿದೆ. 2.6 ಕೋಟಿ ಜನರು ಈ ನಗರದಲ್ಲಿದ್ದಾರೆ. ಈ ಪೈಕಿ ಮೂರನೇ ಒಂದು ಭಾಗ ಜನರು ವಾಸವಾಗಿರುವುದು 100ಕ್ಕೂ ಅಧಿಕವಿರುವ ಸ್ಲಮ್‌ಗಳಲ್ಲಿ.

ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ ಕೋವಿಡ್‌ ವೈರಸ್‌ ಕಾಡ್ಗಿಚ್ಚಿನಂತೆ ಹರಲಾರಂಭಿಸಿದೆ. ಇಲ್ಲಿರುವ ರೋಹಿಂಗ್ಯ ನಿರಾಶ್ರಿತರ ಶಿಬಿರಗಳಲ್ಲಿ ವೈರಸ್‌ನ ಭೀತಿ ದಟ್ಟವಾಗಿದೆ.ಢಾಕಾದ 90 ಲಕ್ಷ ಜನಸಂಖ್ಯೆಯಲ್ಲಿ ಶೇ.40 ಮಂದಿ ವಾಸವಾಗಿರುವುದು ಸ್ಲಮ್‌ಗಳಲ್ಲಿ.

ವಿಯೆಟ್ನಾಂ, ಸಿಯೆರಾ ಲಿಯೋನ್‌, ಉಗಾಂಡದಂಥ ಕೆಲವು ಬಡ ರಾಷ್ಟ್ರಗಳು ಹಿಂದಿನ ಅನುಭವಗಳಿಂದ ಪಾಠ ಕಲಿತುಕೊಂಡು ವೈರಸ್‌ ಹಾವಳಿ ಶುರುವಾದಾಗಲೇ ಲಾಕ್‌ಡೌನ್‌ ಮತ್ತಿತರ ಕ್ರಮಗಳನ್ನು ಅನುಸರಿಸಿದ ಕಾರಣ ಬಚಾವಾಗಿವೆ. ಆದರೆ ಎಲ್ಲ ಬಡ ದೇಶಗಳಿಗೆ ಇದು ಸಾಧ್ಯವಾಗಿಲ್ಲ. ಅಂದಿನ ದುಡಿತ ಅಂದಿನ ತುತ್ತಿಗೆ ಸಾಕಾಗುವಂತಿರುವ ಬಡ ದೇಶಗಳಲ್ಲಿ ಲಾಕ್‌ಡೌನ್‌ ಹೇರಿದರೆ ಜನಜೀವನ ಇನ್ನೂ ದುಸ್ತರವಾಗುತ್ತಿತ್ತು.

ಹೆಚ್ಚಿನೆಡೆ ಸರಕಾರಗಳು ಸ್ಲಮ್‌ಗಳಲ್ಲಿ ಕೋವಿಡ್‌ ನಿಗ್ರಹಿಸಲು ಒಂದೋ ಕಠೊರ ಕ್ರಮಗಳನ್ನು ಅನುಸರಿಸುತ್ತಿವೆ ಇಲ್ಲವೇ ಪೂರ್ಣವಾಗಿ ನಿರ್ಲಕ್ಷಿಸಿ ಬಿಟ್ಟಿವೆ.

ಟಾಪ್ ನ್ಯೂಸ್

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

MB-Patil-Minister

Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್‌

Nagamangala-Police

Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

Raghvendra-Hitnal

Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್‌ ಶಾಸಕ

Kolara-RSS

Kolara: ಹೈಕೋರ್ಟ್‌ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್‌ ಪಥಸಂಚಲನ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Bribery case: Trump case verdict before he takes office

Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್‌ ಕೇಸಿನ ತೀರ್ಪು

America-Congress

House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

MB-Patil-Minister

Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್‌

Nagamangala-Police

Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

Raghvendra-Hitnal

Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್‌ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.