ದೌರ್ಜನ್ಯಕ್ಕೊಳಗಾದ ಯುವತಿಗೆ ಮೋಸ ಮಾಡಿದ ಆರೋಪಿ ಪೊಲೀಸ್ ಬಲೆಗೆ
Team Udayavani, Feb 7, 2022, 8:21 PM IST
ಹುಣಸೂರು : ಮದ್ಯವ್ಯಸನಿ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಯುವತಿಗೆ ಸರಕಾರದ 5 ಲಕ್ಷ ಪರಿಹಾರದ ಹಣವನ್ನು ಪರಿಚಯಸ್ಥನೇ ಲಪಾಟಾಯಿಸಿದ್ದು, ಇದೀಗ
ಪೊಲೀಸರ ಅತಿಥಿಯಾಗಿರುವ ಘಟನೆ ಹುಣಸೂರು ತಾಲೂಕಿನ ಬಲ್ಲೇನಹಳ್ಳಿ ಹಾಡಿಯಲ್ಲಿ ನಡೆದಿದೆ.
ಬಲ್ಲೇನಹಳ್ಳಿ ಗ್ರಾಮದ ಮಾಜಿ ಗ್ರಾ.ಪಂ ಸದಸ್ಯ ದಿ.ನಸರುಲ್ಲಾ ಷರೀಪ್‌ರ ಪುತ್ರ ಚಾಂದ್‌ಷರೀಪ್ ಬಂಧಿತ ಆರೋಪಿ. ಬಲ್ಲೇನಹಳ್ಳಿ ಹಾಡಿಯ ಆದಿವಾಸಿ ಯುವತಿ ಪರಿಹಾರದ ಹಣ
ಕಳೆದುಕೊಂಡಾಕೆ.
ಘಟನೆ ವಿವರ: 2019ರಲ್ಲಿ ಅತ್ಯಾಚಾರ ಘಟನೆ ನಡೆದಿದ್ದು, ಆರೋಪಿ ತಂದೆ ಇನ್ನೂ ನ್ಯಾಯಾಂಗ ಬಂಧನದಲ್ಲೇ ಇದ್ದು, ಸರಕಾರದಿಂದ ನೊಂದ ಯುವತಿಗೆ 5 ಲಕ್ಷ ರೂ. ಪರಿಹಾರದ
ಹಣ ಬಂದಿತ್ತು. ಅವಿದ್ಯಾವಂತೆಯಾದ ಯುವತಿ ಹಾಗೂ ಆಕೆಯ ತಾಯಿ ಗ್ರಾಮಸ್ಥ ಚಾಂದ್‌ಷರೀಫನ ಬಳಿ ತೆರಳಿ ಪರಿಹಾರದ ಚೆಕ್ ಬಗ್ಗೆ ಮಾಹಿತಿ ನೀಡಿದ್ದಾರೆ. ಆತ ಬ್ಯಾಂಕಿನಲ್ಲಿ ಖಾತೆ
ತೆರೆಯಬೇಕೆಂದು ತಿಳಿಸಿ, 2020ರ ಏಪ್ರಿಲ್ 15 ರಂದು ಆಸ್ಪತ್ರೆ ಕಾವಲ್‌ನ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ತೆರೆದು ಚೆಕ್ ಜಮೆ ಮಾಡಿದ್ದಾನೆ. ನಂತರ ಇವರಿಗೆ ತಿಳಿಯದಂತೆ 2021ರ ಏಪ್ರಿಲ್ 3ರಂದು 2.5 ಲಕ್ಷರೂಗಳನ್ನು ತನ್ನ ಖಾತೆಗೆ ಆರ್.ಟಿ.ಜಿ.ಎಸ್.ಮಾಡಿಸಿಕೊಂಡಿದ್ದಾನೆ. ಅಲ್ಲದೆ ಆರೋಪಿ ಚಾಂದ್ ಷರೀಪ್ ತನ್ನ ಬಳಿಯಲ್ಲೇ ಇಟ್ಟುಕೊಂಡಿದ್ದ ಸಂತ್ರಸ್ಥೆಯ ಎ.ಟಿ.ಎಮ್ ಕಾರ್ಡ್ ಬಳಸಿ 2021 ಏಪ್ರಿಲ್.16 ರಿಂದ ಏಪ್ರಿಲ್. 29ರವರೆಗೆ 15 ದಿನಗಳಲ್ಲಿ ಒಟ್ಟು 1.28 ಲಕ್ಷರೂ ಡ್ರಾ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ : ಹಿಜಾಬ್ ವಿವಾದ ಸೃಷ್ಟಿಯಿಂದ ದೇಶಕ್ಕೆ ಅವಮಾನವಾಗಿದೆ : ಡಿ.ಕೆ. ಶಿವಕುಮಾರ್
ಈ ಬಗ್ಗೆ ಏನೂ ಅರಿಯದ ಆಕೆ ಜನವರಿ 17 ರಂದು ತಾಯಿಯೊಂದಿಗೆ ಬ್ಯಾಂಕಿಗೆ ಹೋಗಿ ತಮ್ಮ ಹಣ ಬಂದಿದೆಯೇ ಎಂದು ವಿಚಾರಿಸಿದ ವೇಳೆ ನಿನ್ನ ಖಾತೆಗೆ ರೂ. 5 ಲಕ್ಷ ಹಣ ಬಂದಿತ್ತು. ನೀವು ಈಗಾಗಲೆ ಎಲ್ಲ ಡ್ರಾ ಮಾಡಿದ್ದೀರಿ ಎಂದು ಹೇಳುತ್ತಿದ್ದಂತೆ ಗಾಬರಿಗೊಂಡ ಅವರು ಬ್ಯಾಂಕ್ ಖಾತೆ ಮಾಡಿಸಿದ್ದ ಚಾಂದ್ ಪಾಷಾನನ್ನು ವಿಚಾರಿಸಿದಾಗ ಗೊತ್ತಿಲ್ಲದಂತೆ ನಟಿಸಿದ್ದಾನೆ. ಈಕೆಗೆ ಅನ್ಯಾಯವಾಗಿರುವ ಬಗ್ಗೆ ತಿಳಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಯುವತಿ ಚಾಂದ್ ಷರೀಪ್ ತನಗೆ ಮೋಸ ಮಾಡಿದ್ದಾನೆಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.