ಮ್ಯಾನ್ಮಾರ್: ಸಮುದ್ರದಲ್ಲೇ ಎರಡು ತಿಂಗಳು ವಾಸ
Team Udayavani, Apr 20, 2020, 4:49 PM IST
ಮಣಿಪಾಲ: ಕೋವಿಡ್ ವೈರಸ್ ತಡೆಯಲು ಲಾಕ್‌ಡೌನ್ ಹೇರಲಾಗಿದೆ. ಈ ನಡುವೆ ಹಲವರು ಸಮುದ್ರದಲ್ಲಿ ಬಾಕಿಯಾಗಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಬಾಂಗ್ಲಾದೇಶದಿಂದ ದೋಣಿ ಮೂಲಕ ತೆರಳಿದ ಸುಮಾರು 400 ರೋಹಿಂಗ್ಯಾ ನಿರಾಶ್ರಿತರನ್ನು ಸಮುದ್ರದಲ್ಲಿ ರಕ್ಷಿಸಲಾಗಿದೆ ಎಂದು ಬಾಂಗ್ಲಾದೇಶ ಕೋಸ್ಟ್ ಗಾರ್ಡ್ ಹೇಳಿದೆ. ಆದರೆ ಈ ಪ್ರಯಾಣದಲ್ಲಿ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ.
ಈ ತಂಡದಲ್ಲಿ ಫೆಬ್ರವರಿ ಮಧ್ಯದಲ್ಲಿ ದೊಡ್ಡ ಮೀನುಗಾರಿಕಾ ಟ್ರಾಲರ್‌ನಲ್ಲಿ ಬಂಗಾಲಕೊಲ್ಲಿಯಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಗುಂಪು ಇದು. ಇವರು ಮಲೇಷ್ಯಾವನ್ನು ತಲುಪಲು ಪ್ರಯತ್ನಿಸಿದ್ದರು. ರಕ್ಷಿಸಲಾದ ನಿರಾಶ್ರಿತರು ನೀಡುವ ಮಾಹಿತಿಯಂತೆ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟ ದೇಹಗಳನ್ನು ಸಮುದ್ರಕ್ಕೆ ಎಸೆಯಲಾಗಿದೆ. ಕೆಲವರು ಆಹಾರದ ಕೊರತೆಯಿಂದ ಸಾವನ್ನಪ್ಪಿದರೆ ಮತ್ತೂ ಕೆಲವರು ವಿವಿಧ ಕಾಯಿಲೆಗಳಿಂದಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ದೋಣಿ ಮಲೇಷಿಯಾದ ಕರಾವಳಿಯನ್ನು ತಲುಪುತ್ತಿದ್ದಂತೆ ಅದನ್ನು ಅಧಿಕಾರಿಗಳು ಹಿಂದಕ್ಕೆ ತಿರುಗಿಸಿದ್ದರು. ಅನಂತರ ಮ್ಯಾನ್ಮಾರ್‌ಗೆ ಪ್ರಯಾಣಿಸಲು 2 ಬಾರಿ ಪ್ರಯತ್ನಿಸಿದ್ದು, ಮ್ಯಾನ್ಮಾರ್ ನೌಕಾಪಡೆ ಪ್ರವೇಶವನ್ನು ನಿರಾಕರಿಸಿತ್ತು.
ಬಳಿಕ ಅವರನ್ನು ಬಾಂಗ್ಲಾ ಸರಕಾರ ರಕ್ಷಿಸಿದೆ. ರಕ್ಷಿಸಲ್ಪಟ್ಟ ನಿರಾಶ್ರಿತರು ಹಸಿವಿನಿಂದ ಮತ್ತು ನಿರ್ಜಲೀಕರಣಗೊಂಡಿದ್ದನ್ನು ಗಮನಿಸಿ ಸೂಕ್ತ ಆಹಾರ ನೀಡಲಾಗಿದೆ. 14 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಬಾಂಗ್ಲಾದೇಶದಲ್ಲಿ ಕೋವಿಡ್-19ರ 84 ಸಾವುಗಳಾಗಿವೆ ಎಂದು ಜಾನ್ಸ್ ಹಾಪಿRನ್ಸ್ ವಿಶ್ವವಿದ್ಯಾನಿಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.