ಮೂರು ವಾರ್ಡ್‌ಗಳಲ್ಲಿ ನೂರಾರು ಸಮಸ್ಯೆ
ಅಧಿಕಾರಿಗಳಿಗೆ ಕೋವಿಡ್-19 ಕೆಲಸ, ತುರ್ತು ಕೆಲಸಕ್ಕೆ ಕಾಮಗಾರಿಗೆ ಕೊರತೆ ಸಬೂಬು
Team Udayavani, Jun 2, 2020, 5:35 AM IST
ಈ ಬೇಸಗೆಯಲ್ಲಿ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಬಹುತೇಕ ದಿನಗಳನ್ನು ಕೋವಿಡ್-19 ಲಾಕ್‌ಡೌನ್ ನುಂಗಿ ಹಾಕಿದೆ. ನಿರ್ಬಂಧಗಳು ತೆರವಾಗಿ ಜನಜೀವನ ಸಹಜತೆಗೆ ಬರುತ್ತಿರುವ ಸಮಯವಿದು. ಇನ್ನುಳಿದ ಕೆಲವೇ ದಿನಗಳಲ್ಲಿ ಮಳೆಗಾಲದ ಸಿದ್ಧತೆಗಳು ಮುಗಿಯಬೇಕು ಎಂಬ ಆಗ್ರಹ ಈ ಸರಣಿಯ ಹಿಂದಿದೆ.
ಉಡುಪಿ: ಈಗಾಗಲೇ ಮುಂಗಾರಿಗೆ ಪೂರ್ವಭಾವಿಯಾಗಿ ಮಳೆ ಆರಂಭವಾಗಿದ್ದು, ಇದಕ್ಕೆ ಪೂರ್ವ ತಯಾರಿಯನ್ನು ಉಡುಪಿ ನಗರಸಭೆ ಮಾಡಿಕೊಳ್ಳದೆ ಇರುವುದರಿಂದ ಬೈಲೂರು, ಅಜ್ಜರಕಾಡು, ಶಿರಿಬೀಡು ವಾರ್ಡ್‌ನಲ್ಲಿ ಮಳೆಗಾಲದಲ್ಲಿ ಎದುರಾಗಬಹುದಾದ ಚರಂಡಿಯ ಹೂಳು, ಕೃತಕ ನೆರೆ, ಅಪಾಯಕಾರಿ ಮರಗಳು ಸೇರಿದಂತೆ ಹಲವು ಸಮಸ್ಯೆಗಳು ವಾರ್ಡ್‌ನ ಜನರನ್ನು ಕಾಡತೊಡಗಿವೆ.
ಶಿರಿಬೀಡು ವಾರ್ಡ್
ಅವಾಂತರ!
ಶಿರಿಬೀಡು ವಾರ್ಡ್ ಭೇಟಿ ನೀಡಿದರೆ ಕಣ್ಮುಂದೆ ನೂರಾರು ಸಮಸ್ಯೆ ಕಾಣ ಸಿಗುತ್ತದೆ. ಇಲ್ಲಿನ ವಿವಿಧ ರಸ್ತೆಯ ಬದಿಯಲ್ಲಿ 3 ಅಡಿಗಳಷ್ಟು ಎತ್ತರ ಗಿಡಗಳು ಬೆಳೆದು ನಿಂತಿವೆ. ಉಡುಪಿ-ಕುಂದಾಪುರ ಎಕ್ಸ್ ಪ್ರಸ್ ಬಸ್‌ಗಳು ಸಂಚರಿಸುವ ಮಾರ್ಗದಲ್ಲಿ ಚರಂಡಿ ದುರಸ್ತಿಗೆಂದು ರಸ್ತೆ ಅಗೆದು ಎರಡು ವಾರ ಕಳೆದರೂ ರಿಪೇರಿಯಾಗಿಲ್ಲ. ಇನ್ನೂ ಶಿರಿಬೀಡು ಟವರ್ ಸಮೀಪ ಕುಡಿಯುವ ನೀರಿನ ಪೈಪ್ ದುರಸ್ತಿಯ ಹೆಸರಿನಲ್ಲಿ ಅಗೆದು, ಕೆಲಸ ಪೂರ್ಣಗೊಳಿಸದೆ ಹಾಗೇ ಬಿಡಲಾಗಿದೆ. ಇದರಿಂದಾಗಿ ನಿತ್ಯ ಸಾವಿರಾರು ಲೀಟರ್ ಕುಡಿಯುವ ನೀರು ಪೋಲಾಗುತ್ತಿದೆ.
ಬೈಲೂರಿನ
ರಸ್ತೆಯಲ್ಲಿ ನೀರು !
ಬೈಲೂರು ವಾರ್ಡ್‌ನ ಹನುಮಾನ ಗ್ಯಾರೇಜ್, ಕೊಳಂಬೆ, ಪಾರ್ಕಿಂಗ್ ಏರಿಯಾ, ಭಾಗ್ಯಮಂದಿರದ ಮೂಲಕ ಹಾದು ಹೋಗುವ ತೋಡಿನಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ರಸ್ತೆಯಲ್ಲಿ ಅಕ್ಕ ಪಕ್ಕದಲ್ಲಿ ಹುಲ್ಲುಗಳು ಬೆಳೆದು ನಿಂತಿವೆ. ಈ ವಾರ್ಡ್ ನ ಕೆಲ ಪ್ರದೇಶದಲ್ಲಿ ಬೀದಿ ದೀಪಗಳು ಕೆಲಸ ಮಾಡದ ಹಿನ್ನೆಲೆಯಲ್ಲಿ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ವಾರ್ಡ್‌ನ ಕೆಲ ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿದ್ದು, ಅದನ್ನು ದುರಸ್ತಿ ಮಾಡದೆ ಇರುವುದರಿಂದ ಸಾಧಾರಣ ಮಳೆಗೆ ರಸ್ತೆಯಲ್ಲಿ ಕೆಸರು ನೀರು ಶೇಖರಣೆಯಾಗುತ್ತಿದೆ.
ಅಜ್ಜರಕಾಡು ಚರಂಡಿ ಮಾಯ!
ಅಜ್ಜರಕಾಡು ವಾರ್ಡ್‌ನ ಮಳೆ ನೀರಿನ ಚರಂಡಿ ಶೇ. 70ರಷ್ಟು ಭಾಗ ಕಸ, ಪ್ಲಾಸ್ಟಿಕ್, ಹೂಳಿನಿಂದ ತುಂಬಿಕೊಂಡಿದೆ. ವಾರ್ಡ್ ನ ಕೆಲವೊಂದು ಪ್ರದೇಶದಲ್ಲಿ ಚರಂಡಿ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ ಇದೆ. ಬ್ರಹ್ಮಗಿರಿ- ಡಯಾನ ಸರ್ಕಲ್ ವರೆಗಿನ ರಸ್ತೆಯ ಡಿವೈಡರ್ ಮೇಲಿನ ದೀಪಗಳು ಹಾಳಾಗಿ 8 ತಿಂಗಳು ಕಳೆದಿವೆ. ಮಳೆಗಾಲದಲ್ಲಿ ದ್ವಿಚಕ್ರ ವಾಹನ ಸವಾರರು ಕತ್ತಲೆಯಲ್ಲಿ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇದರಿಂದಾಗಿ ಅಜ್ಜರಕಾಡು ಮಾರ್ಗವಾಗಿ ರಾತ್ರಿ ಸಂದರ್ಭದಲ್ಲಿ ಸಾರ್ವಜನಿಕರು ಸಂಚರಿಸಲು ಭಯಪಡುತ್ತಿದ್ದಾರೆ.
ಸಬೂಬು ಸರಿಯಲ್ಲ!
ಉಡುಪಿ ನಗರಸಭೆ ಮಳೆಗಾಲದ ಮುನ್ನೆ ಚ್ಚರಿಕೆ ಕ್ರಮವನ್ನು ನಿಧಾನಗೊಳಿಸಿದೆ. ಕಾರ್ಮಿಕರ ಕೊರತೆ, ಯಂತ್ರಗಳ ಕೊರತೆ ಎನ್ನುವ ಸಬೂಬು ಹೇಳುತ್ತಿದ್ದಾರೆ. ಇದರಿಂದ ಒಂದು ವಾರ್ಡ್‌ಗೆ ಓರ್ವ ಕಾರ್ಮಿಕನಂತೆ ಕಳುಹಿಸಿಕೊಡುತ್ತಿದೆ. ತುರ್ತಿಗೆ ಇದು ಸಾಲದು. ಈ ಬಾರಿ ಕೊರೊನಾ ನಿಯಂತ್ರಣದಲ್ಲಿ ಸ್ಥಳೀಯಾ ಡಳಿತ ಸಿಬಂದಿ ಮಗ್ನರಾಗಿದ್ದಾರೆ. ಜತೆಗೆ ನಗರಸಭೆಗೆ ಜನಪ್ರತಿನಿಧಿಗಳ ಆಡಳಿತವೂ ಇಲ್ಲದಿರುವುದು ಮಳೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಹಿನ್ನೆಡೆಯಾಗಿದೆ.
ಕೆಲಸ ಶುರವಾಗಿಲ್ಲ
ನಗರಸಭೆ ಅಧಿಕಾರಿಗಳು ಮಳೆಗಾಲದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಲ್ಲಿ ಸೋತು ಹೋಗಿದ್ದಾರೆ. ಮಳೆ ಗಾಲ ಪ್ರಾರಂಭವಾದರೂ ಕೆಲಸ ಶುರು ವಾಗಿಲ್ಲ. ವಾರ್ಡ್ ಜನಪ್ರತಿನಿಧಿಗಳನ್ನು ಕರೆದು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆ ಕರೆದಿಲ್ಲ. ಸಾಂಪ್ರದಾಯಿಕವಾಗಿ ಮಾನವ ಶ್ರಮ ವಹಿಸಿ ಮಾಡುವ ಕೆಲಸಕ್ಕೆ ಟೆಂಡರ್ ಕರೆಯಲಾಗಿದೆ.
-ರಮೇಶ್ ಕಾಂಚನ್,
ಬೈಲೂರು ವಾರ್ಡ್ ಸದಸ್ಯ.
ಪ್ರಯೋಜನವಾಗಿಲ್ಲ
ನಗರಸಭೆಯ ಪೌರಾಯುಕ್ತರ ಜತೆ ಹಲವು ಬಾರಿ ಮಾತನಾಡಿದ್ದೇನೆ. ಬ್ರಹ್ಮಗಿರಿಯಿಂದ ಡಯಾನ ಸರ್ಕಲ್‌ವರೆಗಿನ ಡಿವೈಡರ್ ಮೇಲಿನ ಲೈಟ್ ಹಾಳಾಗಿ 8 ತಿಂಗಳು ಕಳೆದಿದೆ. ಈ ಬಗ್ಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಜನರ ಪ್ರಶ್ನೆಗಳಿಗೆ ಉತ್ತರ ನೀಡಿ ಸಾಕಾಗಿದೆ.
-ರಶ್ಮಿ ಚಿತ್ತರಂಜನ್ ಭಟ್,
ಅಜ್ಜರಕಾಡು ವಾರ್ಡ್ ಸದಸ್ಯೆ.
ಮನವಿ ಮಾಡುತ್ತಿದ್ದೇನೆ
ನಿತ್ಯ ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ ಮಳೆಗಾಲದ ಸಿದ್ಧತೆಗೆ ಕಾರ್ಮಿಕರನ್ನು ನೀಡುವಂತೆ ಮನವಿ ಮಾಡುತ್ತಿದ್ದೇನೆ. ಶಿರಿಬೀಡು ನಾಗಬನ ಸಮೀಪದ ಚರಂಡಿ ದುರಸ್ತಿಗೆಂದು ರಸ್ತೆ ಅಗೆದು 15 ದಿನ ಕಳೆದಿದೆ. ಗುತ್ತಿಗೆ ವಹಿಸಿಕೊಂಡವರು ಅದನ್ನು ಮುಚ್ಚಿಲ್ಲ.
-ಟಿ.ಜೆ. ಹೆಗ್ಡೆ,
ಶಿರಿಬೀಡು ವಾರ್ಡ್ ಸದಸ್ಯೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.