ಹಸಿವಿನಿಂದ ಬಳಲುತ್ತಿರುವವರ ಪ್ರಮಾಣ ಕಡಿಮೆ ಮಾಡಲು ಯಾವ ಕ್ರಮ ಕೈಗೊಳ್ಳಬಹುದು ?
Team Udayavani, Oct 17, 2019, 4:13 PM IST
ಮಣಿಪಾಲ: ಭಾರತದಲ್ಲಿ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣ ಕಡಿಮೆ ಮಾಡಲು ಇನ್ನಷ್ಟು ಪರಿಣಾಮಕಾರಿಯಾಗಿ ಯಾವ ಕ್ರಮ ಕೈಗೊಳ್ಳಬಹುದು ? ಎಂಬ ಪ್ರಶ್ನೆಯನ್ನು ಉದಯವಾಣಿ ತನ್ನ ಓದುಗರಿಗೆ ಕೇಳಿದ್ದು ಉತ್ತಮ ಪತಿಕ್ರಿಯೆ ದೊರೆತಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿದೆ.
ಜೇಕಬ್ ಅರಕಲ್: ಮೊದಲು ಭತ್ತ ಬೆಳೆಯಲು ಸರ್ಕಾರದಿಂದ ಸವಲತ್ತುಗಳನ್ನು ಕೊಡಬೇಕು , ಇಲ್ಲಿ ಈಗ ಬೆಳೆ ಅಂದರೆ ಹೊಗೆಸೊಪ್ಪು ಹಾಗು ಶುಂಠಿ ಎಂದುಕೊಂಡಿದ್ದಾರೆ. ಇವರಿಗೆ ಯಾವುದೇ ಸಹಾಯ ಬ್ಯಾಂಕ್ ಹಾಗೂ ಸರ್ಕಾರದಿಂದ ನೀಡಬಾರದು. ಬೆಳೆದ ಭತ್ತ, ರಾಗಿ, ಜೋಳ ಮುಂತಾದ ಅಹಾರ ಪದಾರ್ಥಗಳನ್ನು ಸರ್ಕಾರವೇ ಖರೀದಿಸಿ ಮೊದಲು ನಮ್ಮ ರಾಜ್ಯಕ್ಕಾಗುವಷ್ಟು ನಮ್ಮಲ್ಲೇ ಉಪಯೋಗಿಸಿಕೊಳ್ಳಬೇಕು ಎಲ್ಲರಿಗೂ ಕಡಿಮೆ ದರದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕು ಹೀಗೆ ಹಂತ ಹಂತವಾಗಿ ಹಸಿವು ನಿವಾರಿಸಬಹುದು.
ಪುಕ್ಕಟೆ ಅನ್ನ ಕೊಡಬೇಡಿ ದುಡಿಯಲು ಕೈಗಳಿಗೆ ಕೆಲಸಕೊಡಿ. ರೈತರಿಗೆ ಫ್ರೀ ಕರೆಂಟ್ ಕೊಡುವುದು ಬೇಡ, ಬದಲಿಗೆ ಕಡಿಮೆ ದರದಲ್ಲಿ ನಿರಂತರ ಕರೆಂಟ್ ಕೊಡಿ ಏಕರೆಗೆ ಇಂತಿಷ್ಟು ಕೆಜಿ ಗೊಬ್ಬರ ಧಾನ್ಯ ಫ್ರೀ ಕೊಡಿ. ರೈತ ಬೆಳೆದ ಬೆಳೆಗೆ ಒಳ್ಳೆಯ ದರ ನಿಗದಿ ಪಡಿಸಿ ನಮ್ಮ ರಾಜ್ಯದ ಅವಶ್ಯ ಮುಗಿದರಷ್ಟೇ ಹೊರಕ್ಕೆ ರಫ್ತು ಮಾಡಿ. ಹೀಗೆ ಮಾಡುವುದಾದರೆ ನಾಡು ಸಮೃದ್ಧವಾಗುತ್ತದೆ ಮತ್ತು ಹಸಿವು ಮುಕ್ತವಾಗುತ್ತದೆ.
ಗಿರೀಶ್ ಪೂಜಾರಿ: ಯಾವಾಗ ರಾಜಕಾರಣಿಗಳ ದುರಾಸೆಯ ಹಸಿವು ಕಡಿಮೆ ಅಗ್ತದೆಯೋ ಅವತ್ತು ನನ್ನ ಭಾರತ ಹಸಿವು ಮುಕ್ತ ಆಗುವುದರಲ್ಲಿ ಅನುಮಾನ ವಿಲ್ಲ
ಸುನಿಲ್ ಎಸ್ ದೊಡ್ಮನಿ: ನಮ್ಮ ಭಾರತದಲ್ಲಿ ಯಾರು ಹಸಿವಿನಿಂದ ಕೊರಗುತ್ತಿಲ್ಲ. ಅದ್ಕೆ 125 ಕೋಟಿ ಜನಸಂಖ್ಯೆ ಇರೋದು ಹಸಿವಿನಿಂದ ಕೊರಗುತ್ತಿದ್ದರೆ 125 ಕೋಟಿ ಆಗುತ್ತಿರಲಿಲ್ಲ. ಮೊದಲು ಇರೋರಿಗೆ ಕೆಲಸ ಹುಟ್ಟಾಕೊ ವ್ಯವಸ್ಥೆ ಆಗಲಿ. ಇಲ್ಲಾ ಮುಂದೊಂದಿನ ಇವಾಗ ನೀವು ಹೇಳಿದಿರಲ್ಲ ಈ ಪರಿಸ್ಥಿತಿ ಬರ್ಬೋದು ಅನ್ಸುತ್ತೆ
ನರೇಂದ್ರ ಆರ್: “Ready to eat”, ಎಂಬ ಆಹಾರ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ, ಉಚಿತ ಅಥವಾ ಸಬ್ಸಿಡಿ ದರಗಳಲ್ಲಿ ಸಿಗುವಂತಿರಬೇಕು, ಪ್ರತಿ ಊರು ಪಟ್ಟಣಗಳಲ್ಲಿ ನಿರ್ದಿಷ್ಟ ಕೇಂದ್ರಗಳನ್ನು ಮಾಡಿ ಕನಿಷ್ಠ ದಿನಕ್ಕೆ 18 ಗಂಟೆಗಳು ಜನಸಾಮಾನ್ಯರಿಗೆ ಸಿಗುವಂತಿರಬೇಕು, ತತ್ತಕ್ಷಣಕ್ಕೆ ಹಸಿವು ನೀಗುವಂತಿರಬೇಕು,
ರಮೇಶ್ ಜತನ್ : ಸರಕಾರ ಎಲ್ಲಾ ಅಂಗನವಾಡಿ ಮಟ್ಟದಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಗುರುತಿಸಲು ಕಾರ್ಯಕ್ರಮ ಹಮ್ಮಿಕೊಂಡು ಆ ಕುಟುಂಬಕ್ಕೆ ಕನಿಷ್ಠ ಆದಾಯದ ಮೂಲ ಒದಗಿಸಿ ಅವರನ್ನು ಬಡತನದಿಂದ ಮೇಲೆ ಬರುವಂತೆ ಮಾಡಬೇಕು, ಪೌಷ್ಟಿಕ ಆಹಾರ ಒದಗಣೆ, ಕಡ್ಡಾಯವಾಗಿ ದುಶ್ಚಟಗಳಿಂದ ಮುಕ್ತಗೊಳಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಸಾಧ್ಯವಾಗುತ್ತದೆ, ಇಲ್ಲದೇ ಇದ್ದಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ನದಿಯಲ್ಲಿ ಹುಣಸೆ ತೊಳೆದಂತೆ.
ರಾಘು ರಾಠೋಡ ಕರುಣಾಮಯ: ಅನ್ನಭಾಗ್ಯ ಯೋಜನೆ ದೇಶಾದ್ಯಂತ ಜಾರಿ ಆಗಬೇಕು ಅಲ್ಲಿಯವರೆಗೆ ಹಸಿವಿನ ಸೂಚ್ಯಂಕ ನಿಲ್ಲಲ್ಲ.
ಪ್ರವೀಣ್ ಆರ್ ಮೂಲ್ಯ: ಸರಕಾರ ಅನ್ನ ಭಾಗ್ಯ , ಕ್ಷೀರ ಭಾಗ್ಯ ಇಂಥಹ ಜನರನ್ನು ಸೋಂಬೇರಿಗಳನ್ನಾಗಿ ಮಾಡುವ ಯೋಜನೆಗಳನ್ನು ಬಿಟ್ಟು, ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಯೋಜನೆಗಳನ್ನು ತರಬೇಕು. ಮುಖ್ಯವಾಗಿ ಏಕರೂಪ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು ಕಡ್ಡಾಯವಾಗಿ ಜಾರಿಗೆ ತರಬೇಕು.
ಪೂರ್ಣಪ್ರಜ್ಞ ಪಿ ಎಸ್: ಈ ವಿಷಯದಲ್ಲಿ ಯಾವುದೇ ಒಂದು ಪಕ್ಷ ಅಥವಾ ಒಬ್ಬ ವ್ಯಕ್ತಿಯ ಮೇಲೆ ಏನೋ ಒಂದೇ ದಿನದಲ್ಲಿ ಅದ್ಬುತ ಮಾಡುತ್ತಾನೆ ಎಂದು ಕಾಯುವುದು ತಪ್ಪು, ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದೂ ಜೀವಿಗೂ ಹೇಗೆ ಹಸಿವೆ ಎಂಬುದು ಇದೆಯೋ, ಅಂತೆಯೇ ಪ್ರತಿಯೊಬ್ಬರೂ ತನಗೆ ತಿಳಿದ ಯೋಜನೆಯ ಬಗ್ಗೆ ಅತಿ ಬಡವರಿಗೆ ಮಾಹಿತಿ ನೀಡಿ ಆ ಲಾಭವನ್ನು ಪಡೆಯಲು ಅವರಿಗೆ ಸಹಕರಿಸಬೇಕು. ತನ್ನಲ್ಲಿ ಇರುವ ಸಂಪತ್ತನ್ನು ಮರೆಮಾಚಿ, ಬಡವರು, ಬಡವರು ಎಂದು ಸುಳ್ಳು ಪ್ರಮಾಣ ಪತ್ರ ನೀಡಿ ಸರಕಾರದ ಯೋಜನೆ ಗಳ ಲಾಭ ಪಡೆದು ಬೀಗುವ ಮಂದಿಗಳು ತಮ್ಮ ತಪ್ಪನ್ನು ಅರಿತರೆ, ನಿಜವಾಗಿಯೂ ಬಡವರಾಗಿರುವ ಬಡವರಿಗೆ ಅನ್ಯಾಯ ಆಗುವುದು ಬಹುಮಟ್ಟಿಗೆ ತಪ್ಪಬಹುದೇನೋ , ಅವರು ಮೂರು ಹೊತ್ತು ಉಂಡು ನೆಮ್ಮದಿ ಪಡೆಯುತ್ತಾರೆ
ಮಹದೇವ್ ಗೌಡ: ಹೋಬಳಿವಾರು ಕೆರೆಗಳನ್ನು ದುಪ್ಪಟ್ಟು ಮಾಡಿ ಬಂಜರು ಮುಕ್ತ ಭೂಮಿ ಮಾಡಿ ಆಹಾರ ಪದಾರ್ಥ ಗಳನ್ನು ಬೆಳೆಯುವದನ್ನ ಕಡ್ಡಾಯ ಮಾಡಬೇಕು ಮಳೆ ಆಶ್ರಯಿತ ,ನೀರಾವರಿ ಎರಡರಲ್ಲೂ ಕಡ್ಡಾಯ ಮಾಡಬೇಕು . ರೈತರು ಬೆಳದ ಪದಾರ್ಥಗಳಿಗೆ 1 ಕೆ.ಜಿ ಆ ದಿನದ ಮಾರುಕಟ್ಟೆಯ ಬೆಲೆಗೆ ಶೇ 50 ಹಣ ಬೆಂಬಲ ಕೊಟ್ಟು ಶ್ರಿಸಾಮಾನ್ಯರಿಗೂ ಕಡಿಮೆ ಬೆಲೆಗೆ ದೊರಕುವಂತೆ ಮಾಡಬೇಕು ಪ್ರಮುಖ ಪದಾರ್ಥಗಳಾದ ಅಕ್ಕಿ ,ರಾಗಿ ,ಜೊಳ ,ಗೋಧಿ ಮತ್ತು ದ್ವಿದಳ ದಾನ್ಯಗಳು ,ತರಕಾರಿ ಜೊತೆಗೆ ಹಾಲು ಆ .ಪಾ: ಗಳಿಗೆ ಬೆಂಬಲ ಯಾಕೆ ಕೊಡಬಾರದು . ಗ್ರಾಮ ಪಂಚಾಯ್ತಿ ಮಟ್ಟದಲ್ಲೆ ಸರ್ಕಾರ ರೈತರಿಂದ ನೇರಾ ಖರಿದಿ ಮಾಡಿ ವಿತರಣೆಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಆಹಾರ ಸಮಾನತೆ ಬರುವದಿಲ್ಲವೇ . ವಾರ್ಡುವಾರು ಆಹಾರ ಪದಾರ್ಥ ಇಡುವ ಶೀತಲೀಕರಣ ವ್ಯವಸ್ಥೆ ಮಾಡಬೇಕೇನೋ . ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯ ಬೇಕೆನ್ನುವದನ್ನ ಸರ್ಕಾರ ತೀರ್ಮಾನ ಮಾಡಬೇಕು . ರೈತರಲ್ಲ . ಮೊದಲು ಆರ್ಥಿಕ ಸಮಾನತೆಗೆ ಗಮನ ಆಡಳಿತಗಾರಾರು ಕೊಟ್ಟರೆ ಹಸಿವು ಮುಕ್ತ ವಾಗಬಹುದೇನೋ ಅನಿಸಿಕೆ .
ದಾವೂದ್ ಕೂರ್ಗ್: ಸರ್ಕಾರ ತೀರ್ಮಾನಿಸುವ ಎಲ್ಲ ಯೋಜನೆಗಳು ಬಡವರಿಗೆ ಯಾವ ರೀತಿಯಲ್ಲಿ ಪ್ರಯೋಜನ ಅಥವಾ ತೊಂದರೆ ಆಗುತ್ತಿದೆ ಎಂಬುದನ್ನು ಮೊದಲು ಮನಗಾಣಬೇಕು. ಅಂಬಾನಿ ಅದಾನಿಗಳ ಪ್ರಯೋಜನ ಮಾತ್ರ ನೋಡಿದರೆ ಜನ ಹಸಿವಿನಿಂದ ಮುಕ್ತಿ ಹೊಂದಲು ಸಾಧ್ಯವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.