ಹುಣಸೂರು ನಗರಸಭಾ ಸದಸ್ಯ ಸತೀಶ್‌ಕುಮಾರ್ ಸದಸ್ಯತ್ವ ವಜಾ
ಸರ್ಕಾರಿ ಕೆಲಸಕ್ಕೆ ಅಡ್ಡಿ, ಅಧಿಕಾರಿಮೇಲೆ ಹಲ್ಲೆ, ದಾಖಲಾತಿ ಅಕ್ರಮ ತಿದ್ದುಪಡಿ ಆರೋಪ
Team Udayavani, Mar 9, 2023, 10:41 PM IST
ಹುಣಸೂರು: ನಗರಸಭೆಯ ಪೌರಾಯುಕ್ತ ಮತ್ತು ಸಿಬಂದಿಗಳ ಕರ್ತವ್ಯಕ್ಕೆ ಅಡ್ಡಿ, ಪೌರಾಯುಕ್ತರನ್ನು ನಿಂದಿಸಿ, ಹಲ್ಲೆ ನಡೆಸಲು ಮುಂದಾಗಿದ್ದ ಘಟನೆ ಸಾಬೀತಾದ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯರೊಬ್ಬರ ಸದಸ್ಯತ್ವನ್ನು ಮೈಸೂರು ಪ್ರಾದೇಶಿಕ ಅಯುಕ್ತರು ವಜಾ ಮಾಡಿ ಅದೇಶ ಹೊರಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರಸಭೆ ವಾರ್ಡ್ ನಂ.8 (ಸದಾಶಿವನ ಕೊಪ್ಪಲು ಬಡಾವಣೆ)ರ ಸದಸ್ಯ ಎಚ್.ಪಿ.ಸತೀಶ್ ಕುಮಾರ್ ವಜಾಗೊಂಡಿರುವ ಸದಸ್ಯರು.
2021 ರ ನವಂಬರ್ 18 ರಂದು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಂದಿನ ಪೌರಾಯುಕ್ತ ರಮೇಶ್‌ರನ್ನು ಅಧ್ಯಕ್ಷರ ಕಛೇರಿಗೆ ಕರೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆಗೂ ಸಹ ಮುಂದಾಗಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತರು ಸಿ.ಸಿ.ಕ್ಯಾಮರಾ ಪೂಟೇಜ್‌ನೊಂದಿಗೆ ಸದಸ್ಯ ಸತೀಶ್‌ಕುಮಾರ್ ವಿರುದ್ದ ಪ್ರಕರಣ ದಾಖಲಿಸಿದ್ದರು.
ಅಲ್ಲದೆ 2021ರ ನವಂಬರ್ 24 ರಂದು ಅಧಿಕಾರಿಗಳು ಮತ್ತು ಸಿಬಂದಿಗಳು ಇಲ್ಲದ ವೇಳೆಯಲ್ಲಿ ಕಛೇರಿ ಪ್ರವೇಶಿಸಿ ಎಂ.ಎ.ಅರ್-19 ಹಾಗೂ ಕಚೇರಿ ಕಡತ ಮತ್ತು ಪೈಲ್‌ಗಳನ್ನು ಪರಿಸಿಲಿಸುತ್ತಿರುವುದು, ಖಾತಾಪುಸ್ತಕದಲ್ಲಿ ಮದ್ಯಂತರ ಖಾತೆಗಳು ನೊಂದಣಿಯಾಗಿರುವ ಬಗ್ಗೆ ನಗರಸಭೆಯ ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿತ್ತು. ನಗರಸಭೆಯ ಸಿಬ್ಬಂದಿಗಳನ್ನು ಬೆದರಿಸಿ ಪೈಲ್ ಮತ್ತು ಕಡತಗಳನ್ನು ಒತ್ತಡ ಹೇರಿ ಅಕ್ರಮವಾಗಿ ಕೆಲವು ತಿದ್ದುಪಡಿಗೂ ಮುಂದಾಗಿದ್ದು. ಈ ಸಂಬಂಧ ಸಿಬಂದಿಯ ಸುರಕ್ಷತೆ, ಅಕ್ರಮ ತಿದ್ದುಪಡಿ ವಿರುದ್ದ ಪೌರಾಯುಕ್ತರು ಮೇಲಾಧಿಕಾರಿಗಳಿಗೆ ದೂರು ಸಹ ನೀಡಿದ್ದರು.
ಇತ್ತ ಸದಸ್ಯ ಸತೀಶ್‌ಕುಮಾರ್ 2023ರ 8 ರಂದು ನಗರಸಭೆ ಪೌರಾಯುಕ್ತ ರಮೇಶ್ ಹಾಗೂ ಅಧಿಕಾರಿಗಳು ನಗರಸಭೆಯಲ್ಲಿ ಅಕ್ರಮ ನಡೆಸುತ್ತಿದ್ದಾರೆಂದು ಭಿತ್ತಿಪತ್ರಗಳನ್ನು ನಗರಸಭೆ ಬಾಗಿಲಿಗೆ ಅಂಟಿಸಿ ಒಂಟಿಯಾಗಿ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನಿಸಿದ್ದರು.
ಈ ಸಂಬಂಧ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾ.ಜೆ.ಸಿ.ಪ್ರಕಾಶ್‌ರವರು ಸುಧೀರ್ಘ ವಿಚಾರಣೆ ನಡೆಸಿ ವಿಚಾರಣೆ ವೇಳೆ ಸಾಕ್ಷಿ ಪುರಾವೆಗಳಾಗಿ ಸಿ.ಸಿ.ಕ್ಯಾಮರಾದ ಫುಟೇಜ್, ಪೋಟೋ ಇನ್ನಿತರ ಸಾಕ್ಷಿಗಳನ್ನು ಪರಿಗಣಿಸಿ ಸದಸ್ಯರ ದುರ್ನಡೆತೆ ಮತ್ತು ಕಾನೂನು ಬಾಹಿರವಾಗಿ ನಡೆದುಕೊಂಡಿರುವುದು ರುಜುವಾತಾಗಿದ್ದರಿಂದ ಸದಸ್ಯತ್ವ ಸ್ಥಾನಕ್ಕೆ ಅಗೌರವಾಗಿ ನಡೆದುಕೊಂಡ ಕಾರಣ ಕರ್ನಾಟಕ ಪುರಸಭೆಗಳ ಅಧಿನಿಯಮ ಕಾಯ್ದೆ 1964 ಕಲಂ41(1)ರಅಡಿಯಲ್ಲಿ2023ರ ಜನವರಿ 6 ರಂದು ಎಚ್.ಪಿ.ಸತೀಶ್‌ಕುಮಾರ್‌ರವರ ಸದಸ್ಯತ್ವವನ್ನು ವಜಾಗೊಳಿಸಿ ಆದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.