ಅವರೆಕಾಯಿ; ಮನೆಯಂಗಳದ ಕೃಷಿ
ಉತ್ತಮ ಇಳುವರಿ ಕೊಡುವ ಬೀಜಗಳನ್ನು ತಾವೇ ಆರಿಸಿ ತಂದು ಬೆಳೆಯಬಹುದು.
Team Udayavani, Aug 20, 2021, 2:25 PM IST
ಅವರೆಕಾಯಿ ದ್ವಿದಳ ಧಾನ್ಯ ಬೆಳೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು. ಒಮ್ಮೆ ಇದರ ರುಚಿ ನೋಡಿದವರು ಮತ್ತೆ ಮತ್ತೆ ಇದನ್ನು ತಿನ್ನಲು ಬಯ ಸುತ್ತಾರೆ. ಇದರ ಸೊಪ್ಪನ್ನು ಒಳ್ಳೆಯ ಗೊಬ್ಬರ ಹಾಗೂ ಧಾನ್ಯಗಳಿಗೆ ಮೇವಾಗಿಯೂ ಉಪಯೋಗಿಸಲಾಗುತ್ತದೆ. ಸ್ವಲ್ಪ ಜಾಗವಿದ್ದರೂ ಸಾಕು ನಗರ ಪ್ರದೇಶಗಳಲ್ಲೂ ಇದನ್ನು ಬೆಳೆಯಬಹುದು.
ನೀರು ಬಸಿದುಹೋಗುವ ಎಲ್ಲ ತರಹದ ಮಣ್ಣಿನಲ್ಲೂ ಇದನ್ನು ಬೆಳೆಯಬಹುದು. ಸಮತಟ್ಟಾದ ನೀರು ನಿಲ್ಲದ ಭೂಮಿಯಲ್ಲಿ ಉತ್ತಮ ಇಳುವರಿ ನೀಡುತ್ತದೆ. ಹೀಗಾಗಿ ಅಗಲವಾದ ಪಾಟ್ ಗ ಳಲ್ಲೂ ಮಣ್ಣು ಗೊಬ್ಬರ ಮಿಶ್ರಣ ಮಾಡಿ ಮನೆಯಂಗಳ, ತಾರಸಿ ಮೇಲೂ ಬೆಳೆಯಬಹುದು.
ತಳಿಗಳು
ಹೆಬ್ಟಾಳೆ ಅವರೆ- ಇದು ಬಿತ್ತಿದ 70ರಿಂದ 75 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಇದನ್ನು ವರ್ಷದ ಯಾವುದೇ ಕಾಲದಲ್ಲೂ ಬೆಳೆಯಬಹುದು. ಅರ್ಕಾ ಜಯ್- ಇದರ ಗಿಡಗಳು ಗಿಡ್ಡವಾಗಿದ್ದು ಪೊದೆಯಾಕಾರದಲ್ಲಿ ಬೆಳೆಯುತ್ತವೆ. ಹೂವು ನೇರಳೆ ಬಣ್ಣ ಹೊಂದಿರುತ್ತದೆ. ಕಾಯಿ ಉದ್ದವಾಗಿದ್ದು ತಿಳಿ ಹಸುರು ಬಣ್ಣ ಹೊಂದಿದೆ. ಈ ತಳಿಗೆ ಕಡಿಮೆ ತೇವಾಂಶ ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 75 ದಿನ.
ಅರ್ಕಾ ವಿಜಯ್- ಇದನ್ನು ಕೂಡ ಎಲ್ಲ ಕಾಲದಲ್ಲೂ ಬೆಳೆಯಬಹುದು. ಇದರ ಹೂವುಗಳು ಬಿಳಿ ಬಣ್ಣದಿಂದ ಕೂಡಿದ್ದು ಕಾಯಿ ಹಸುರು ಬಣ್ಣ ಹೊಂದಿದೆ. ಇದಲ್ಲದೆ ಅರ್ಕಾ ಸಂಭ್ರಮ್, ಶಿಲ್ಪ ಮತ್ತು ಖಾಸಗಿ ಕಂಪೆನಿಯ ಅಧಿಕ ಇಳುವರಿ ಕೊಡುವ ಬೀಜಗಳು ದೊರೆಯುತ್ತವೆ. ರೈತರು ತಜ್ಞರಿಂದ ಮಾಹಿತಿ ಪಡೆದು ತಮಗೆ ಬೇಕಾದ ಉತ್ತಮ ಇಳುವರಿ ಕೊಡುವ ಬೀಜಗಳನ್ನು ತಾವೇ ಆರಿಸಿ ತಂದು ಬೆಳೆಯಬಹುದು.
ಇದಕ್ಕೆ ರೋಗಗಳು ಬರುವುದು ಕಡಿಮೆ. ಕೆಲವೊಮ್ಮೆ ಕಾಯಿ ಕೊರೆಯುವ ಹುಳು ಮತ್ತು ಸಸ್ಯ ಹೇನು ಇದನ್ನು ಕಾಡುವುದುಂಟು. ಇದಕ್ಕೆ ಮಾರುಕಟ್ಟೆಯಲ್ಲಿ ಹೊಸದಾಗಿ ದೊರೆಯುವ ಕೀಟನಾಶಕವನ್ನು ತಜ್ಞರ ಮಾರ್ಗದರ್ಶನದಲ್ಲಿ ಪಡೆದು ಸ್ಪ್ರೆ ಮಾಡಬೇಕು.
ಬಿತ್ತನೆ ವಿಧಾನ- ಕೊಯ್ಲು
ತರಕಾರಿಗೆ ಉಪಯೋಗಿಸಲು ಇದರ ಎಳೆಯ ಕಾಯಿಗಳನ್ನು ಕೀಳಬೇಕು. ಬಿತ್ತನೆ ಮಾಡಿದ 70ರಿಂದ 75 ದಿನಗಳಲ್ಲಿ ಹಸುರು ಕಾಯಿಗಳನ್ನು, 100ರಿಂದ 105 ದಿನಗಳಲ್ಲಿ ಒಣಕಾಯಿ ಗಳನ್ನು ಕೊಯ್ಲು ಮಾಡಬಹುದು. ಸರಿಯಾಗಿ ಮಣ್ಣನ್ನು ಹದ ಮಾಡಿದ ಬಳಿಕ ಸುಮಾರು ಒಂದೂವರೆ ಅಡಿಯಲ್ಲಿ ಬೀಜದಿಂದ ಬೀಜಕ್ಕೆ 15 ಸೆ.ಮೀ. ಅಂತರದಲ್ಲಿ ಬಿತ್ತನೆ ಮಾಡ ಬೇಕು. ಬಿತ್ತನೆಗೆ ಮೊದಲು ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರಗಳನ್ನು ಸಾಲುಗಳಲ್ಲಿ ಹಾಕಿ ಚೆನ್ನಾಗಿ ಮಣ್ಣಿನಲ್ಲಿ ಬೆರೆಸಬೇಕು.ಬಿತ್ತನೆಗೆ ಹವಾಮಾನಕ್ಕೆ ಅನುಗುಣ ವಾಗಿ 3ರಿಂದ 4 ದಿನಕ್ಕೊಮ್ಮೆ ನೀರು ಹಾಯಿಸಬಹುದು. ಭೂಮಿ ಯಲ್ಲಿ ನೀರು ನಿಲ್ಲದಂತೆ ನೋಡಿ ಕೊಳ್ಳುವುದು ಮುಖ್ಯ.
ಬಿತ್ತನೆ ಕಾಲ
ಅವರೆಯನ್ನು ವರ್ಷದಲ್ಲಿ ಎರಡು ಬಾರಿ ಅದರಲ್ಲೂ ಡಿಸೆಂಬರ್, ಜನವರಿಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.