ಹೈಪರ್ ಲೂಪ್ ನಮ್ಮಲ್ಲೇ ಫಸ್ಟ್?
ಸೌದಿ ಅರೇಬಿಯಾ ಅಥವಾ ಭಾರತ ಮೊದಲ ಬಳಕೆದಾರರಾಗಲಿದ್ದಾರೆ.
Team Udayavani, Oct 4, 2021, 5:45 PM IST
ದುಬೈ: ಅತ್ಯಂತ ವೇಗದ ಪ್ರಯಾಣ ವ್ಯವಸ್ಥೆಯಾದ “ಹೈಪರ್ ಲೂಪ್’ ಯುಎಇಗಿಂತಲೂ ಮೊದಲು ಭಾರತ ಅಥವಾ ಸೌದಿ ಅರೇಬಿಯಾದಲ್ಲಿ ಬಳಕೆಗೆ ಬರುವ ಸಾಧ್ಯತೆ ಹೆಚ್ಚಿದೆ. ಹೀಗೆಂದು ಹೈಪರ್ ಲೂಪ್ ನಿರ್ಮಾಣದಲ್ಲಿ ತೊಡಗಿರುವ ಡಿಪಿ ವರ್ಲ್ಡ್ ಕಂಪನಿಯ ಮುಖ್ಯಸ್ಥರಾದ ಸುಲ್ತಾನ್ ಅಹ್ಮದ್ ಬಿನ್ ಸುಲಾಯೇಂ ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿಯ ಯಾರೊಬ್ಬರೂ ಕಾಂಗ್ರೆಸ್ ಸೇರುವುದಿಲ್ಲ: ಸಚಿವ ಎಸ್.ಟಿ.ಸೋಮಶೇಖರ್
ದುಬೈನಲ್ಲಿ ನಡೆಯುತ್ತಿರುವ “ದುಬೈ ಎಕ್ಸ್‌ಪೋ 2020’ರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೈಪರ್ ಲೂಪ್ ಬರಲು ದಶಕಗಳೇನೂ ಬೇಕಾಗಿಲ್ಲ. ಈ ದಶಕದ ಅಂತ್ಯದೊಳಗೆ ವಿಶ್ವದ ಹಲವು ಭಾಗಗಳಲ್ಲಿ ಇದು ಬಳಕೆಯಲ್ಲಿರಲಿದೆ.
ಸೌದಿ ಅರೇಬಿಯಾ ಅಥವಾ ಭಾರತ ಮೊದಲ ಬಳಕೆದಾರರಾಗಲಿದ್ದಾರೆ. ಟ್ರಕ್‌ನಲ್ಲಿ ಚಲಿಸಲು ಬೇಕಾಗುವ ಖರ್ಚಿನಲ್ಲಿ ವಿಮಾನದ ವೇಗದಲ್ಲಿ ನಾಗರಿಕರು ಪ್ರಯಾಣಿಸಬಹುದು ಎಂದು ಅವರು ಹೇಳಿದ್ದಾರೆ.
ಏನಿದು ಹೈಪರ್ ಲೂಪ್?: ಸೀಲ್ ಆಗಿರುವ ಟ್ಯೂಬ್ ನಿರ್ಮಿಸಿ ಅದರಲ್ಲಿ ಗಾಳಿಯ ಒತ್ತಡವಿಲ್ಲದಂತೆ ಮಾಡಲಾಗುತ್ತದೆ. ಮನುಷ್ಯರನ್ನು ಹೊತ್ತ ಪಾಡ್ ಗಳು ಅದರಲ್ಲಿ ಅತ್ಯಂತ ವೇಗವಾಗಿ ಚಲಿಸಬಲ್ಲವು. ಇದರಲ್ಲಿ ಮನುಷ್ಯರ ಪ್ರಯಾಣ ಪರೀಕ್ಷೆಯನ್ನು ಡಿಪಿ ವರ್ಲ್ಡ್ ಸಂಸ್ಥೆ ಕಳೆದ ನವೆಂಬರ್ ನಲ್ಲೇ ಮಾಡಿದೆ.
ದುಬೈ ಎಕ್ಸ್‌ಪೋಗೆ ಮೋದಿ?: ಅ.1ರಂದು ಆರಂಭವಾಗಿರುವ ದುಬೈ ಎಕ್ಸ್‌ಪೋ ಒಟ್ಟು ಆರು ತಿಂಗಳ ಕಾಲ ನಡೆಯಲಿದೆ. ಈ ಎಕ್ಸ್‌ಪೋನಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಯವರಿಗೂ ಆಮಂತ್ರಣ ಕಳುಹಿಸಲಾಗಿದೆ. ಮೋದಿಯವರು ಆಮಂತ್ರಣ ಸ್ವೀಕರಿಸಿ, ದುಬೈಗೆ ತೆರಳಿ, ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.