ವಾಹನ ಮಾರಾಟದಲ್ಲಿ ಹೆಚ್ಚಳ : ಹ್ಯುಂಡೈಗೆ ಎಸ್‌ಯುವಿ ಬಲ
Team Udayavani, Jun 21, 2021, 9:30 AM IST
ಹೊಸದಿಲ್ಲಿ: ಪ್ರಯಾಣಿಕ ವಾಹನಗಳ ತಯಾರಿಕೆಯಲ್ಲಿ ಮಾರುತಿ ಸುಜುಕಿ ಅಗ್ರೇಸರ ಸಂಸ್ಥೆ. ಆ ಸ್ಥಾನ ಪಡೆಯಲು ಹ್ಯುಂಡೈ ಮತ್ತು ಕಿಯಾ ಮೋಟರ್ಸ್ ಪೈಪೋಟಿಗೆ ಇಳಿದಿವೆ. ಮೇಯಲ್ಲಿ ಭಾರತೀಯ ವಾಹನ ಉತ್ಪಾದಕರ ಸಂಘಟನೆ (ಎಸ್‌ಐಎಎಂ) ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಮಾರುತಿ ಸುಜುಕಿ 32,903, ಹ್ಯುಂಡೈ 25,001, ಕಿಯಾ 11,050 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಕಿಯಾ ಮತ್ತು ಹ್ಯುಂಡೈ ಒಟ್ಟು ಸೇರಿಸಿದರೆ 36,051 ವಾಹನಗಳು ಎನ್ನುವುದು ಗಮನಾರ್ಹ.
ಯುಟಿಲಿಟಿ ವೆಹಿಕಲ್ಸ್ ವಿಭಾಗವನ್ನು ಮಾತ್ರ ಗಮನಿಸಿದರೆ ಮಾರುತಿ ಸುಜುಕಿ ಮಾರಾಟ ಮಾಡಿದ್ದು ಕೇವಲ 6,355 ವಾಹನಗಳು. ಹ್ಯುಂಡೈ 13,808, ಕಿಯಾ 11,050 ವಾಹನಗಳನ್ನು ಮಾರಾಟ ಮಾಡಿದೆ. ಈ ಅಂಶವನ್ನು ಗಮನಿಸಿದಾಗ ಯುಟಿಲಿಟಿ ವಾಹನಗಳ ಮಾರಾಟ ಕ್ಷೇತ್ರದಲ್ಲಿ ಅವೆರಡು ಕಂಪೆನಿಗಳು ಮಾರುಕಟ್ಟೆಯಲ್ಲಿ ದಾಪುಗಾಲು ಇಡುತ್ತಿರುವುದು ಕಂಡುಬರುತ್ತಿದೆ ಎಂದು “ದ ಫೈನಾನ್ಶಿಯಲ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಎಸ್‌ಯುವಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ವರ್ಷದ ಮೊದಲಿನ 5 ತಿಂಗಳಲ್ಲಿ 4,67,771 ವಾಹನಗಳು ಮಾರಾಟವಾಗಿವೆ. ಈ ಪೈಕಿ ಹ್ಯುಂಡೈ ಕಂಪೆನಿಯದ್ದೇ 1,09,172 ವಾಹನಗಳು ಮಾರಾ ಟವಾಗಿವೆ. ಈ ಪೈಕಿ 57,342 ಕ್ರೇಟಾ ಮತ್ತು 50 ಸಾವಿರ ವೆನ್ಯು ಪಾಲು ಇದೆ. 2015ರಲ್ಲಿ ಕ್ರೆಟಾ ಮಾರುಕಟ್ಟೆಗೆ ಬಿಡುಗಡೆಯಾದ ಬಳಿಕ ಅದರ ಪ್ರಭಾವ ಹೆಚ್ಚಾಗುತ್ತಿದೆ ಎಂದು ಹ್ಯುಂಡೈ ಮೋಟರ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ತರುಣ್ ಗರ್ಗ್ ಹೇಳಿದ್ದಾರೆ. 2015ರಲ್ಲಿ ಶೇ.11.3 ಇದ್ದದ್ದು, 2019ರಲ್ಲಿ ಶೇ.22.7, 2020ರಲ್ಲಿ ಶೇ.25.5ಕ್ಕೆ ಏರಿಕೆಯಾಗಿದೆ.
ಪ್ರಯಾಣಿಕರ ವಾಹನ (ಪಿವಿ)ಗಳ ಜತೆಗೆ ಎಸ್‌ಯುವಿ ಕೂಡ ಇತ್ತೀಚಿನ ವರ್ಷಗಳಲ್ಲಿ ಏರಿಕೆಯಾಗುತ್ತದೆ. 2015ರಲ್ಲಿ ಪ್ರಯಾಣಿಕರ ವಾಹನ ಮಾರಾಟ ಶೇ.13.5 ಇದ್ದದ್ದು 2019ರಲ್ಲಿ ಶೇ.25.6, 2020ರಲ್ಲಿ ಶೇ.29ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ ತರುಣ್ ಗರ್ಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.