ನನ್ನಲ್ಲಿನ್ನೂ ಕ್ರಿಕೆಟ್ ಬಾಕಿ ಇದೆ: ಸುರೇಶ್ ರೈನಾ
Team Udayavani, May 15, 2020, 6:12 AM IST
ಹೊಸದಿಲ್ಲಿ: ಎರಡು ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಆಲ್‌ರೌಂಡರ್ ಸುರೇಶ್ ರೈನಾ ಅವರು ಭಾರತ ತಂಡದ ಪರ ಮರಳಿ ಆಡುವ ತುಡಿತವನ್ನು ಹೊರಹಾಕಿದ್ದು ನನ್ನಲ್ಲಿನ್ನೂ ಸಾಕಷ್ಟು ಕ್ರಿಕೆಟ್ ಬಾಕಿಯಿದೆ ಎಂದು ಹೇಳಿದ್ದಾರೆ.
ರೋಹಿತ್ ಶರ್ಮ ಜತೆಗೆ ಇನ್‌ಸ್ಟಾಗ್ರಾಮ್ ಸಂದರ್ಶನದಲ್ಲಿ ಮಾತನಾಡಿದ ರೈನಾ ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ ಪಡೆದ ಬಳಿಕ ನನ್ನ ಫಿಟ್‌ನೆಸ್ ಮರಳಿ ಕಂಡುಕೊಂಡಿದ್ದೇನೆ. ಯೋ-ಯೋ ಟೆಸ್ಟ್ ಕೂಡ ಪಾಸ್ ಮಾಡಿದ್ದೇನೆ. ತಂಡಕ್ಕೆ ಮರಳಲು ಕಠಿನ ಪರಿಶ್ರಮ ವಹಿಸುತ್ತಿದ್ದೇನೆ. ನನ್ನ ವೃತ್ತಿ ಬದುಕಿನ ಕೆಟ್ಟ ದಿನಗಳಲ್ಲಿ ದೊಡ್ಡ ಆಟಗಾರರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿಯಿದೆ. ಹಾಗಾಗಿ ಭಾರತ ತಂಡಕ್ಕಾಗಿ ಮತ್ತೆ ಆಡಲು ಇಷ್ಟ ಪಡುತ್ತೇನೆ ಮಾತ್ರವಲ್ಲದೇ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ರೋಹಿತ್ ಭಾರತ ತಂಡದಲ್ಲಿ ರೈನಾ ಇರಬೇಕು ಎಂದು ನಾವೆಲ್ಲರೂ ಬಯಸುತ್ತೇವೆ. ನಿನ್ನನ್ನು ಮರಳಿ ತಂಡಕ್ಕೆ ಕರೆತರುವ ಬಗ್ಗೆ ನಾವು ಮಾತನಾಡುತ್ತಿರುತ್ತೇವೆ. ಆದರೆ ತಂಡದ ಆಯ್ಕೆ ಪ್ರಕ್ರಿಯೆ ನಮ್ಮ ಕೈಯಲಿಲ್ಲ. ಹೀಗಾಗಿ ಕಠಿನ ಪರಿಶ್ರಮ ವಹಿಸುವುದನ್ನು ಮುಂದುವರಿಸುತ್ತಿರಬೇಕು ಎಂದು ರೋಹಿತ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.