ನಾನು ಆಮ್‌ ಆದ್ಮಿ ಪಾರ್ಟಿ


Team Udayavani, May 27, 2020, 5:19 AM IST

navella pg

ನಾವು ಐದಾರು ಹುಡುಗೀರು ಬೆಂಗಳೂರಿನ  ಪಿಜಿಯಲ್ಲಿ “ಲಾಕ್‌’ ಆಗಿಬಿಟ್ಟಿದ್ದೆವು. ಪಿಜಿ ಓನರ್‌, ತುಂಬಾ ಸ್ಟ್ರಿಕ್ಟು. “ಊಟ- ತಿಂಡಿ ಕೊಡ್ತೀವಿ. ಹೊರಗೆಲ್ಲೂ ಹೋಗೋ ಹಾಗಿಲ್ಲ’ ಅಂತ ಕಟ್ಟುನಿಟ್ಟಾಗಿ ಹೇಳಿ, ಗೇಟ್‌ ಬಂದ್‌ ಮಾಡಿ ಬಿಟ್ಟರು.  ಬೇರೆಯವರಂತೆ, ಹಾಲು- ತರಕಾರಿ ನೆಪ ಹೇಳಿ ಹೊರಗೆ ಹೋಗುವ ಅವಕಾಶವೂ ನಮಗಿರಲಿಲ್ಲ. ಐವತ್ತು ದಿನ ಒಳಗೇ ಇದ್ದು, ಒಂಥರಾ ಹುಚ್ಚು ಹಿಡಿದಂತೆ  ಆಗಿತ್ತು.

ದಿನಾ ಸಂಜೆ, ಪಿಜಿಯಲ್ಲಿ ಕೊಡುವ ಕಲಗಚ್ಚಿನಂಥ ಕಾಫಿ  ಕುಡಿಯುತ್ತಾ, “ಲಾಕ್‌ ಡೌನ್‌ ಪೆ ಚರ್ಚೆ’ ನಡೆಸುತ್ತಿದ್ದೆವು. ಲಾಕ್‌ಡೌನ್‌ ಮುಗಿದ ಮೇಲೆ, ಮೊತ್ತ ಮೊದಲು ಮಾಡುವ ಕೆಲಸ ಏನು ಎಂಬುದು ಚರ್ಚೆಯ ವಿಷಯ. ಪ್ರತಿದಿನ ಬಾಯ್‌ಫ್ರೆಂಡ್‌ನ‌ ಮೀಟ್‌ ಮಾಡುತ್ತಿದ್ದ ಗೆಳತಿಯೊಬ್ಬಳು, ನಾನಂತೂ ಅವನನ್ನು ಭೇಟಿಮಾಡ್ತಿನಿ, ಅಂದಳು  ನಾಚಿಕೆಯಿಂದ. “ವಿರಹಾ, ನೂರು ನೂರು ತರಹ…’ ಅಂತ ರೇಗಿಸಿದಾಗ, ಅವಳನ್ನು ನೋಡಬೇಕಿತ್ತು ನೀವು!

ಇನ್ನೊಬ್ಬಳು- “ಮೊದಲು ಹೋಗಿ ಐ ಬ್ರೋ, ಅಪ್ಪರ್‌ ಲಿಸ್ಟ್  ಮಾಡಿಸ್ಕೊತೀನಿ. ಒಳ್ಳೇ ಗಂಡಸರ ಹಾಗೆ ಮೀಸೆ ಬಂದಿದೆ’ ಅಂತ ಗೊಣಗಿದಳು. “ನಾನಂತೂ ಮನೆಗೆ ಹೋಗ್ತಿನಿ. ಅಪ್ಪ- ಅಮ್ಮ ತುಂಬಾ ಹೆದರಿಕೊಂಡಿದ್ದಾರೆ’ ಅಂದಳು ನನ್ನ ರೂ‌ಮ್‌ಮೇಟ…. “ಅಂಗಡಿಗೆ ಹೋಗಿ ಒಂದು ಡಝನ್‌  ಮಾಸ್ಕ್‌, ಸ್ಯಾನಿಟೈಝೆರ್‌ ತಗೋತೀನಿ. ಆಫೀಸ್‌ಗೆ ಬನ್ನಿ ಅಂದುಬಿಟ್ಟರೆ, ಹಾಕ್ಕೊಳ್ಳೋಕೆ ಮಾಸ್ಕ್‌  ಇಲ್ಲ’ ಅಂದಳು ಇನ್ನೊಬ್ಬಳು.

ನನ್ನ ಉತ್ತರವಂತೂ ಸಿದವಾಗಿತ್ತು; ಲಾಕ್‌ಡೌನ್‌ ಮುಗಿದ ದಿನವೇ, ಒಂದು ಕೆ.ಜಿ. ಮಾವಿನ ಹಣ್ಣು ತಂದು  ತಿನ್ನುವುದು ಅಂತ! ಇದೆಂಥಾ ಬಯಕೆಯೇ ನಿಂದು ಅಂತ ಎಲ್ಲರೂ ನಕ್ಕಾಗ, ನನ್ನ ರೂಮ್‌ ಮೇಟ್‌ ಹೇಳಿದಳು- “ಇವಳ ಬಗ್ಗೆ ಗೊತ್ತಿಲ್ಲ ನಿಮಗಿನ್ನೂ, ಹೋದ್ವರ್ಷ ಮ್ಯಾಂಗೋ ಸೀಸನ್‌ ಅಲ್ಲಿ ಒಟ್ಟು 16 ಕೆಜಿ ಹಣ್ಣು ಒಬ್ಬಳೇ ತಿಂದಿದ್ದಾಳೆ.  ನಾನೇ ಲೆಕ್ಕ ಇಟ್ಟಿದ್ದೀನಿ. ದಿನಾ ಆಫೀಸ್‌ ಇಂದ ಎರಡು ಕೆಜಿ ಹಿಡ್ಕೊಂಡ್‌ ಬರ್ತಿದು…’ ಅಲ್ವಾ ಮತ್ತೆ?

ಮಾವಿನ ಸೀಸನ್‌ ಬರುವುದೇ ವರ್ಷಕ್ಕೊಮ್ಮೆ. ಆಗಲೇ ಮನಸ್‌ ಪೂರ್ತಿ ಸವಿದು ಬಿಡಬೇಕು. ನಾನಂತೂ ಹೇಳಿದ ಹಾಗೇ, ಲಾಕ್‌ಡೌನ್‌ ಸಡಿಲಗೊಂಡ ದಿನವೇ ಹೊರಗೆ ಹೋಗಿ ಮೂರು  ಕೆಜಿ ರಸಪುರಿ ಮಾವಿನ ಹಣ್ಣುತಂದಿದ್ದೇನೆ! ಅಮೆಜಾನ್‌ ಫ್ರೆಶ್‌ ಅಲ್ಲಿ  ಆರ್ಡರ್‌ ಮಾಡಿದ ಬಂಗನಪಲ್ಲಿ, ಮಲ್ಗೊವ ಮಾವು ಇನ್ನೇನು ಕೈ ಸೇರಲಿದೆ.  ಎಷ್ಟಾದರೂ ನಾನು ಆಮ್‌ ಆದ್ಮಿ ತಾನೇ? ಸದ್ಯ, ತಡವಾಗಿಯಾದರೂ ಮಾವು ಸಿಕ್ಕಿತಲ್ಲ..

* ನಿಖಿತಾ ಕೆ.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.