ಮತಯಾಚನೆ ಮಾಡದೆ ಮತದಾನ ಮಾಡುವ ಚರಿತ್ರೆ ನಿರ್ಮಾಣ ಮಾಡುತ್ತೇನೆ -ಮುನಿಯಾಲು
ಪಳ್ಳಿನಿಂಜೂರು :ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
Team Udayavani, Apr 24, 2023, 12:50 PM IST
ಕಾರ್ಕಳ : ಈ ಬಾರಿ ಮಾತ್ರ ಚುನಾವಣೆಗೆ ನೀವೆಲ್ಲರು ಮತಕೇಳಲು ಜನರ ಬಳಿ ಹೋಗಿ ನನಗೆ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ.ಸತ್ಯದ ಹಾದಿಯಲ್ಲಿ ಅಭಿವೃದ್ಧಿ ಏನು ಎಂಬುವನ್ನು ಮಾಡಿ ತೋರಿಸುತ್ತೇನೆ. ಮುಂದಿನ 5ವರ್ಷ ಬಿಟ್ಟು ಯಾರು ಮತಕೇಳಲು ಹೋಗುವುದು ಬೇಡ.ಜನ ಅಭಿವೃದ್ಧಿ ನೋಡಿ ಅವರ ಸ್ವಯಂ ಪ್ರೇರಿತವಾಗಿ ಮತದಾನ ಮಾಡುವಂತೆ ಕರ್ನಾಟಕದಲ್ಲಿ ಕಾರ್ಕಳದ ಚರಿತ್ರೆ ನಿರ್ಮಾಣ ಮಾಡುತ್ತೇನೆ ಎಂದು ಕಾರ್ಕಳ ವಿಧಾನ ಸಭಾ ಕೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು.
ಅವರು ಪಳ್ಳಿ -ನಿಂಜೂರಿನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನ್ ಶೆಟ್ಟಿ ಹಾಗೂ ಜಗದೀಶ್ ಪೂಜಾರಿ ಇವರ ಮುಂದಾಳತ್ವದಲ್ಲಿ 106 ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಬಾರಿ ಕಾರ್ಕಳ ಜನ ಬದಲಾವಣೆ ಬಯಸಿದ್ದಾರೆ ಎನ್ನುವುದು ಜನಬೆಂಬಲದಿಂದ ಗೊತ್ತಾಗುತ್ತಿದೆ.ಈಗಾಗಲೇ ಕಾರ್ಕಳ ಹಾಗೂ ಹೆಬ್ರಿ ಭಾಗದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂದರು.
ಕಾರ್ಕಳದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡಿ ಯುವಕರಿಗೆ ಉದ್ಯೋಗ ಕೊಡಿಸುವ ಯೋಜನೆಯ ಜತೆ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಗುಣಮಟ್ಟದ ಆರೋಗ್ಯ ಚಿಕತ್ಸೆ ಹಾಗೂ ಉನ್ನತ ಶಿಕ್ಷಣ ಜನಸಾಮಾನ್ಯನಿಗೂ ಸಿಗಬೇಕು ಎನ್ನುವ ವಿನೂತನ ಯೋಜನೆಯನ್ನು ರೂಪಿಸಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಮುಕ್ತವಾಗಿ ಸ್ಪಂದಿಸುವುದೇ ನಿಜವಾದ ಅಭಿವೃದ್ಧಿ ಎನ್ನುವ ಆಸೆಯೊಂದಿಗೆ ಜನರಲ್ಲಿ ಮತಯಾಚನೆ ಮಾಡುತ್ತಿದ್ದೇನೆ.ನಮಗೆ ಅದರ್ಮದ ಅಥವಾ ಸುಳ್ಳು ಹೇಳಿ ಮತ ಬೇಡ .ಗೋಪಾಲ ಭಂಡಾರಿಯವರ ಕನಸು ನನಸಾಗಲು ಕಾರ್ಕಳದಲ್ಲಿ ಮತ್ತೋಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ನಾವೆಲ್ಲರು ಶ್ರಮಿಸಬೇಕಾಗಿದೆ ಎಂದರು.
ದುಡಿದ ಕೈ ವಿನಹ: ಬೇಡಿದ ಕೈ ಅಲ್ಲ : ಉದಯ ಶೆಟ್ಟಿ ಯಾರು ಎಂಬುವುದು ಎಲ್ಲರಿಗೂ ಗೊತ್ತಿದೆ.ಕಾರ್ಕಳದಲ್ಲೆ ಹುಟ್ಟಿ ಬೆಳೆದು ವಿದ್ಯಾಭ್ಯಾಸಮಾಡಿ ಕಳೆದ 23 ವರ್ಷಗಳಿದು ಉದ್ಯಮ ಮಾಡಿಕೊಂಡು ಬಂದು ನನ್ನ ಹಿರಿಯರು ಹೇಳಿಕೊಟ್ಟ ಹಾಗೆ ದುಡಿದದರಲ್ಲಿ ಸ್ವಲ್ಪ ಪಾಲು ಸಮಾಜಕ್ಕೆ ನೀಡುತ್ತಾ ಬಂದಿದ್ದೇನೆ.ದುಡಿದ ಕೈಯೇ ವಿನಹ ಯಾರಿಂದಲೂ ಕೈ ಚಾಚಿದವನನ್ನಲ್ಲ.ಸದಾ ನಿಮ್ಮೊಂದಿಗೆ ಇದ್ದೇನೆ.ಮೇ.13ರಂದು ಕಾರ್ಕಳ ಕಾಂಗ್ರೆಸ್‌ನ ವಿಜಯೋತ್ಸವವಾಗಬೇಕು ಎಂದರು.
ಮೇ.1ರಂದು ಬೃಹತ್ ಕಾಂಗ್ರೆಸ್ Rally: ಕಾರ್ಕಳದಲ್ಲಿ ಮೇ.1ರಂದು ಕಾಂಗ್ರೆಸ್‌ನ ಬೃಹತ್ ರ್ಯಾಲಿ ನಡೆಯಲಿದ್ದು ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಕಾಂಗ್ರೆಸ್‌ನ ಸತ್ಯದ ವಿಚಾರವನ್ನು ಜನರಿಗೆ ತಿಳಿಸಿ ಬೃಹತ್ ರ್ಯಾಲಿಯಲ್ಲಿ ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸುವಂತೆ ಮಾಡಿ. ಸುಳ್ಳು ಹೇಳಿ ಅಧರ್ಮದ ಹಾದಿಯಲ್ಲಿ ಜನಸೇರಿಸುವುದು ಬೇಡ ನಮಗೆ ಸತ್ಯದ ಜನಸಾಗರ ಬೇಕು ಎಂದರು. ಈ ಸಂದರ್ಭದದಲ್ಲಿ ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ,ಸುರೇಂದ್ರ ಶೆಟ್ಟಿ,ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಪಳ್ಳಿ- ನಿಂಜೂರಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ,ಪ್ರಮುಖರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.