Ayodhya: ಅಯೋಧ್ಯೆ ಬಾಲರಾಮ ಮೂರ್ತಿ ರಚನೆಗೆ ಇಡಗುಂಜಿ ಗಣೇಶ ಭಟ್ಟ
Team Udayavani, Dec 2, 2023, 12:00 AM IST
ಹೊನ್ನಾವರ: ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗುವ ಬಾಲ ಶ್ರೀರಾಮಚಂದ್ರನ ಮೂರ್ತಿ ರಚನೆಗೆ ಆಮಂತ್ರಿತ ಮೂವರು ಶಿಲ್ಪಿಗಳಲ್ಲಿ ಇಲ್ಲಿನ ಇಡಗುಂಜಿ ಮಹಾಗಣಪತಿ ದೇವಸ್ಥಾನದ ಅರ್ಚಕರ ಪುತ್ರ ಗಣೇಶ ಭಟ್ಟರು ಒಬ್ಬರು. ಇನ್ನೊಬ್ಬರು ಕರ್ನಾಟಕದವರೇ ಆದ ಮೈಸೂರು ಮೂಲದ ಅರುಣರಾಜ್.
ರಾಮ ಮಂದಿರ ಉದ್ಘಾಟನೆ ಮತ್ತು ಪ್ರತಿಷ್ಠೆಯ ದಿನಾಂಕ ನಿಗದಿ ಆಗಿರುವುದರಿಂದ ಶಿಲೆಯಲ್ಲಿ ಸೂಕ್ಷ್ಮ ಕೆತ್ತನೆಯೊಂದಿಗೆ ಮೂರ್ತಿ ನಿರ್ಮಾಣ ಆಗುವುದರಿಂದ ಕೊನೆಯ ಕ್ಷಣದಲ್ಲಿ ಯಾವುದೇ ನೈಸರ್ಗಿಕ ಅವಘಡ ಆಗಬಾರದೆಂದು ಮೂರು ಶಿಲ್ಪಿಗಳನ್ನು ಅಯೋಧ್ಯೆಯಲ್ಲಿ ಕರೆಸಿ ಅಲ್ಲಿಯೇ ಮೂರ್ತಿ ನಿರ್ಮಾಣ ಕಾರ್ಯ ಸಾಗಿದ್ದು, ಗಣೇಶ ಭಟ್ಟ ಅಲ್ಲಿಯೇ ಮೂರ್ತಿ ನಿರ್ಮಾಣದಲ್ಲಿ ತೊಡಗಿದ್ದಾರೆ. ಯಾವ ಮೂರ್ತಿ ಆಯ್ಕೆಯಾದರೂ ಉಳಿದೆರಡು ಮೂರ್ತಿಗಳು ಅದೇ ಕಟ್ಟಡದಲ್ಲಿ ಸ್ಥಾಪನೆಯಾಗಲಿದೆ.
ಇಡಗುಂಜಿ ಮಹಾಗಣಪತಿ ದೇವಸ್ಥಾನದ ಮುಖ್ಯ ಅರ್ಚಕ ಲಕ್ಷ್ಮೀನಾರಾಯಣ ಭಟ್ಟ ಮತ್ತು ಮಹಾಂಕಾಳಿ ದಂಪತಿಯ ದ್ವಿತೀಯ ಪುತ್ರ ಗಣೇಶ ಸಂಪ್ರದಾಯದಂತೆ ಬಾಲ್ಯದಲ್ಲೇ ಶಾಸ್ತ್ರಾಧ್ಯಯನ ಮಾಡುತ್ತ ಶಾಲೆ ಓದಿದವರು. ಎಸೆಸೆಲ್ಸಿ ಮುಗಿದ ಮೇಲೆ ಶಿಲ್ಪಶಾಸ್ತ್ರದಲ್ಲಿ ವಿಶೇಷ ಅಧ್ಯಯನ ಮಾಡಿ ಶ್ರೀಗಂಧದ ಮೂರ್ತಿಗಳನ್ನು ನಿರ್ಮಿಸುತ್ತ ಶಿಲಾ ಮೂರ್ತಿಗಳತ್ತ ವಾಲಿದವರು. ಇವರು ರಚಿಸಿದ ಶಿಲ್ಪಗಳು ಜೀವಕಳೆ ತುಂಬಿಕೊಳ್ಳುತ್ತಿದ್ದ ಕಾರಣ ಬೇಗ ಪ್ರಸಿದ್ಧಿ ಪಡೆದರು. ಇವರು ಇಂಗ್ಲೆಂಡ್‌ನಲ್ಲಿ ಶಿಲ್ಪಶಾಸ್ತ್ರ ಕಾರ್ಯಾಗಾರ ನಡೆಸುತ್ತಿದ್ದಾಗ ಅಲ್ಲಿಯ ಗೋವುಗಳಿಗೆ ಗುಣಪಡಿಸಲಾರದ ರೋಗಗಳು ಕಾಡುತ್ತಿದ್ದವು. ಗಣೇಶ ಭಟ್ಟರು ಅಮೃತ ಶಿಲೆಯ ಕಾಮಧೇನು ಮೂರ್ತಿ ರಚಿಸಿ ಸ್ವತಃ ಪೂಜೆ ಮಾಡಿದರು. ಕ್ರಮೇಣ ರೋಗ ಕಡಿಮೆಯಾದ ಕಾರಣ ಅಲ್ಲಿಯ ಗೋಪಾಲಕರು ಕಾಮಧೇನು ದೇವಸ್ಥಾನ ನಿರ್ಮಿಸಿದ ಕಾರಣ ಇವರ ಖ್ಯಾತಿ ಹೆಚ್ಚಿತು. ಹೊಯ್ಸಳ ಶೈಲಿಯಲ್ಲಿ ವಿಶೇಷ ಪರಿಣತಿ ಪಡೆದ ಇವರು ರಚಿಸಿದ ಹೊಯ್ಸಳ, ಸರಸ್ವತಿ, ಗಣಪತಿ, ಶಿಲಾ ಬಾಲಿಕೆ, ನಾಟ್ಯ ಗಣಪತಿ, ಬುದ್ಧ ಮೊದಲಾದ ಕಲಾಕೃತಿಗಳು ಅಪಾರ ಮೆಚ್ಚುಗೆ ಪಡೆದಿವೆ.
ಇವರಿಗೆ ಶಿಲ್ಪಶ್ರೀ ಪ್ರಶಸ್ತಿ, ದಸರಾ ಪ್ರಶಸ್ತಿ, ಆರ್ಯಭಟ್ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, ಹವ್ಯಕರ ಸಾಧಕರತ್ನ ಪ್ರಶಸ್ತಿ ಸಹಿತ 42ಕ್ಕೂ ಹೆಚ್ಚು ಪ್ರಶಸ್ತಿ ಸಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಮೈಕ್ರೋಫೈನಾನ್ಸ್ ಸಾಲ ಮೋಸ ಪ್ರಕರಣ ತನಿಖೆಗೆ ಮೂರು ತಂಡ ರಚನೆ: ಸತೀಶ ಜಾರಕಿಹೊಳಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು
Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.