ಡೀಸೆಲ್ ಕಳ್ಳತನವಾದ್ರೆ ಎಸ್‌ಎಂಎಸ್ ಬರುತ್ತೆ!
Team Udayavani, Feb 26, 2020, 3:06 AM IST
ಬೆಂಗಳೂರು: ನಿಮ್ಮ ವಾಹನದಲ್ಲಿ ಡೀಸೆಲ್ ಕಳ್ಳತನ ಮಾಡಿದರೆ, ಮೊಬೈಲ್‌ಗೇ ಎಸ್‌ಎಂಎಸ್ ಬರುತ್ತದೆ. ಅಷ್ಟೇ ಯಾಕೆ, ವಾಹನದ ಕ್ಷಣ-ಕ್ಷಣ ಮಾಹಿತಿ ಹಾಗೂ ಚಾಲಕನ ಚಾಲನಾ ವೈಖರಿ ಕೂಡ ಬೆರಳ ತುದಿಯಲ್ಲೇ ತಿಳಿಯಬಹುದು.
– ಪ್ರತಿಷ್ಠಿತ ರಾಯಲ್ ಟಚ್ ಶೆಲ್ ಸಂಸ್ಥೆಯು “ಶೆಲ್ ಫ್ಲೀಟ್ ಸಲ್ಯೂಷನ್ಸ್’ ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರಿಂದ ವಾಹನಗಳ ಮಾಲೀಕರು, ಕುಳಿತಲ್ಲಿಯೇ ವಾಹನಗಳ ಮೇಲೆ ನಿಗಾ ಇಡಬಹುದು. ಪೆಟ್ರೋಲ್ ಅಥವಾ ಡೀಸೆಲ್ ಕಳ್ಳತನಕ್ಕೂ ಕಡಿವಾಣ ಹಾಕಬಹುದು. ಈ ಮೂಲಕ ವಾಹನಗಳ ನಿರ್ವಹಣಾ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು.
ಟೆಲಿಮ್ಯಾಟಿಕ್ಸ್ ವ್ಯವಸ್ಥೆ ಇದಾಗಿದ್ದು, ಜಿಪಿಎಸ್ ಆಧಾರಿತ ಈ ಡಿವೈಸನ್ನು ವಾಹನದ ಟ್ಯಾಂಕ್ ಕೆಳಗೆ ಅಳವಡಿಸಲಾಗುತ್ತದೆ. ಅದನ್ನು ವಾಹನ ಮಾಲೀಕರ ಮೊಬೈಲ್ ನಂಬರ್‌ಗೆ ಜೋಡಣೆ ಮಾಡಲಾಗುತ್ತದೆ. ಇದರಿಂದ ಆಯಾ ಸರಕು ಸಾಗಣೆ ವಾಹನದ ಮೇಲೆ ದಿನದ 24 ಗಂಟೆಯೂ ನಿಗಾ ಇಡಬಹುದು. ಈ ಸಂಬಂಧ ಮೊಬೈಲ್ ಅಪ್ಲಿಕೇಷನ್ ಅನ್ನೂ ಪರಿಚಯಿಸಲಾಗಿದೆ. ಈ ಟೆಲಿಮ್ಯಾಟಿಕ್ಸ್ ವ್ಯವಸ್ಥೆಯು ಶೆಲ್ ಪೆಟ್ರೋಲ್ ಬಂಕ್‌ಗಳಲ್ಲಿ ಲಭ್ಯ.
ಆಟೋಮೆಟಿಕ್ ಮೈಲೇಜ್ ರಿಪೋರ್ಟಿಂಗ್, ಇಂಧನ ಮಟ್ಟದ ನಿಖರ ಮಾಹಿತಿ, ಮಾರ್ಗ ಬದಲಾವಣೆ ಮಾಡಿದರೆ ಅಲಾರಾಮ್, ಅನಧಿಕೃತ ನಿಲುಗಡೆ, ರಸ್ತೆ ತೆರಿಗೆ ಪಾವತಿ, ವಾಹನ ವಿಮೆ, ಪರ್ವಿಟ್ ಅವಧಿ ಮುಗಿಯುವುದಿದ್ದರೆ ಮಾಹಿತಿ ನೀಡುವುದು ಸೇರಿ ಹಲವಾರು ಉಪಯುಕ್ತ ಅಂಶಗಳನ್ನು ಈ ವ್ಯವಸ್ಥೆ ಒಳಗೊಂಡಿದೆ. ಆಯಾ ಸಾಮರ್ಥ್ಯಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ. ಮಂಗಳವಾರ ನಗರದ ಹೋಟೆಲ್ ಜೆ.ಡಬು. ಮೇರಿಯಟ್‌ನಲ್ಲಿ ಈ ವಿನೂತನ ವ್ಯವಸ್ಥೆಗೆ ಚಾಲನೆ ನೀಡಲಾಯಿತು.
ಇದೇ ವೇಳೆ ಶೆಲ್ ಫ್ಲೀಟ್ ಪ್ರಿಪೇಯ್ಡ ಕಾರ್ಡ್ ಕೂಡ ಬಿಡುಗಡೆ ಮಾಡಲಾಯಿತು. ನಂತರ ಮಾತನಾಡಿದ ಶೆಲ್‌ನ ಫ್ಲೀಟ್ ಸಲ್ಯೂಷನ್ಸ್ ಲಿ., ಪ್ರಧಾನ ವ್ಯವಸ್ಥಾಪಕ ಝೇನ್ ಹಾಕ್, ಫ್ಲೀಟ್ ಮ್ಯಾನೇಜ್‌ಮೆಂಟ್‌ನಲ್ಲಿ ವಿಸ್ತಾರವಾದ ಅನುಭವವನ್ನು ಶೆಲ್ ಹೊಂದಿದ್ದು, 30ಕ್ಕೂ ಹೆಚ್ಚು ದೇಶಗಳಲ್ಲಿ ಇದು ತನ್ನದೇ ಆದ ಛಾಪು ಮೂಡಿಸಿದೆ. ಜಾಗತಿಕ ಮಟ್ಟದಲ್ಲಿ ಸರಕು ಸಾಗಣೆಯಲ್ಲಿನ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ವ್ಯವಸ್ಥೆ ಪರಿಚಯಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.