ಪೂರ್ಣವಾಗದಿದ್ದರೆ ಅನುದಾನ ಬಡ್ಡಿ ಸಹಿತ ವಸೂಲಿ
ವಸತಿ ಯೋಜನೆಗಳಿಗೆ ವೇಗ ನೀಡಲು ಕ್ರಮ; ಹಳೆ ಬಾಕಿ ಮನೆಗಳು ರದ್ದು
Team Udayavani, Feb 1, 2022, 7:05 AM IST
ಮಂಗಳೂರು: ವಸತಿ ಯೋಜನೆಯಡಿ ಮಂಜೂರಾದ ಮನೆಗಳ ಕಾಮಗಾರಿ ಪೂರ್ಣಗೊಳಿ ಸಲು ಸರಕಾರ ಗಡುವು ವಿಧಿಸಿದ್ದು, ಒಂದು ವೇಳೆ ನಿಗ ದಿತ ಅವಧಿಯಲ್ಲಿ ಪೂರ್ಣಗೊಳಿಸದಿದ್ದರೆ ಫಲಾನು ಭವಿಗಳಿಂದ ಅನುದಾನದ ಮೊತ್ತ ವಾಪಸ್ ಪಡೆಯಲು ನಿರ್ಧರಿಸಿದೆ.
2010-11ರಿಂದ 2015 -16ರ ವರೆಗೆ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿ ಇನ್ನೂ ಮುಗಿಯದ ಮನೆಗಳನ್ನು ಶೀಘ್ರ ಪೂರ್ಣಗೊಳಿಸ ದಿದ್ದರೆ ಅನುದಾನವನ್ನು ಬಡ್ಡಿ ಸಹಿತ ವಸೂಲಿ ಮಾಡಲು ವಸತಿ ನಿಗಮವು ಪಿಡಿಒಗಳಿಗೆ ಸೂಚಿಸಿದೆ.
ಫಲಾನುಭವಿಗಳಿಗೆ ವೈಯಕ್ತಿಕ ಪತ್ರ, ನೋಟಿಸ್ ನೀಡಿದ ಬಳಿಕವೂ ನಿರ್ಲಕ್ಷ್ಯ ವಹಿಸಿದ್ದಾರೆ. ಇದೇ ರೀತಿ ವರ್ಷಾನುಗಟ್ಟಲೆ ಮನೆ ನಿರ್ಮಿಸದೆ ಬಾಕಿಯಾದರೆ ವಸತಿ ಯೋಜನೆಗಳ ಪ್ರಗತಿಯ ಸ್ಪಷ್ಟ ಚಿತ್ರಣ ಸರಕಾರಕ್ಕೆ ದೊರೆಯುವುದಿಲ್ಲ. ಅವಶ್ಯ ಇರುವ ಇತರ ಫಲಾನುಭವಿಗಳಿಗೂ ವಸತಿ ಒದಗಿಸಲು ತೊಡಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ಗಡುವು ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.
ವಾರ್ಷಿಕ ಶೇ. 11ರ ಬಡ್ಡಿ
ಫಲಾನುಭವಿಗಳಿಂದ ಅನುದಾನವನ್ನು ವಾರ್ಷಿಕ ಶೇ. 11ರ ಬಡ್ಡಿ ಸಮೇತ ವಸೂಲಿ ಮಾಡಲು, ಒಂದು ವೇಳೆ ಅನುದಾನ ವಾಪಸ್ ಮಾಡದಿದ್ದಲ್ಲಿ “ಭೂ ಕಂದಾಯ ಬಾಕಿ’ ಎಂಬುದಾಗಿ ಪರಿಗಣಿಸಿ ಗ್ರಾ.ಪಂ., ಸ್ಥಳೀಯ ನಗರಾಡಳಿತ ಸಂಸ್ಥೆಗಳ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಅಲ್ಲದೆ ರದ್ದುಗೊಳ್ಳುವ ಮನೆಗಳ ಫಲಾನುಭವಿಗಳನ್ನು ಯಾವುದೇ ವಸತಿ ಯೋಜನೆಗೆ ಪರಿಗಣಿಸ ಬಾರದೆಂದೂ ತಿಳಿಸಲಾಗಿದೆ.
ಇದನ್ನೂ ಓದಿ:2023 ಕ್ಕೆ ರಾಜಕೀಯ ಪ್ರವೇಶದ ಸುಳಿವು ನೀಡಿದ ಗಾಲಿ ಜನಾರ್ಧನ ರೆಡ್ಡಿ
ಬಾಕಿ ನಡುವೆ ಹೊಸ ಮನೆ
ಹಳೆಯ ಬಾಕಿ ಇರುವ ನಡು ವೆಯೂ ಸರಕಾರ ಈಗ ಹೊಸ ದಾಗಿ ಮನೆಗಳನ್ನು ಮಂಜೂರು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 8,090 ಮನೆಗಳ ಗುರಿ ನಿಗದಿ ಪಡಿಸ ಲಾಗಿದೆ. ಗ್ರಾ.ಪಂ.ಗಳ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮೂರು ವಿಭಾಗದಲ್ಲಿ ಮನೆ ಹಂಚಿಕೆ ನಡೆಯಲಿದ್ದು, 25 ಸದಸ್ಯರಿದ್ದರೆ ಆ ಗ್ರಾ.ಪಂ.ಗೆ 50 ಮನೆಗಳು, 15ರಿಂದ 20 ಸದಸ್ಯರಿದ್ದರೆ 40 ಮನೆ, 15ಕ್ಕಿಂತ ಕಡಿಮೆ ಸದಸ್ಯರಿದ್ದರೆ 30 ಮನೆ ಮಂಜೂರಾಗಲಿದೆ. ಉಡುಪಿ ಜಿಲ್ಲೆಗೂ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಗುರಿ ನಿಗದಿಪಡಿಸಲಾಗಿದೆ.
ಐದು ತಿಂಗಳ ಹಿಂದೆ ಅಮೃತ ಗ್ರಾಮೀಣ ವಸತಿ ಯೋಜನೆಯಡಿ ದ.ಕ., ಉಡುಪಿ ಜಿಲ್ಲೆಗಳ ಒಟ್ಟು 46 ಗ್ರಾ.ಪಂ.ಗಳನ್ನು ಆಯ್ಕೆ ಮಾಡಲಾಗಿದ್ದು, ಈ ಯೋಜನೆ ಯಡಿಯೂ ಫಲಾನು ಭವಿಗಳ ಆಯ್ಕೆ ನಡೆಯುತ್ತಿದೆ. ಅಲ್ಲದೆ ಈಗ 3 ವರ್ಷಗಳ ಅನಂತರ ಅಂಬೇಡ್ಕರ್ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡವರಿಗೆ ಮನೆ ಮಂಜೂರು ಮಾಡುವ ಪ್ರಕ್ರಿಯೆ ಕೂಡ ಆರಂಭಿಸಲಾಗಿದೆ.
ಹತ್ತಾರು ವರ್ಷಗಳಿಂದ ಮನೆ ಪೂರ್ಣಗೊಳಿಸದ ಅನೇಕ ಮಂದಿ ಇದ್ದಾರೆ. ಅವರಿಗೆ ತಿಳಿವಳಿಕೆ, ನೋಟಿಸ್ ನೀಡಲಾಗಿದೆ. ಆದರೂ ಕೆಲವರು ಆಸಕ್ತಿ ತೋರಿಲ್ಲ. ತಳಪಾಯ ಹಂತದಲ್ಲಿಯೇ ಬಾಕಿ ಇಟ್ಟವರೂ ಇದ್ದಾರೆ. ಅವರಿಂದ ಅನುದಾನ ವಾಪಸ್ ಪಡೆಯಲು ನಿಗಮ ಸೂಚಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು.
-ಡಾ| ಕುಮಾರ್, ದ.ಕ. ಜಿ.ಪಂ. ಸಿಇಒ
2010-11ರಿಂದ ಅನುದಾನ ನೀಡಿದರೂ ಮನೆ ಕಟ್ಟಿಸಿಕೊಳ್ಳದವರಿಗೆ 3-4 ಬಾರಿ ನೋಟಿಸ್‌ನೀಡಿ ಆದಷ್ಟು ಶೀಘ್ರ ಪೂರ್ಣಗೊಳಿಸಲು ತಿಳಿಸಲಾಗಿದೆ. ದಂಡ ವಸೂಲಿ ಮಾಡುವ ಪ್ರಕ್ರಿಯೆ ಸದ್ಯ ಆರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ಆರಂಭಿಸುತ್ತೇವೆ.
-ಡಾ| ನವೀನ್ ಭಟ್, ಉಡುಪಿ ಜಿ.ಪಂ. ಸಿಇಒ
- ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್ ಹೊಂಡಗಳು!
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
MUST WATCH
ಹೊಸ ಸೇರ್ಪಡೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.