ಅವಸರಕ್ಕೆ ಬಿದ್ದರೆ ನಷ್ಟ ಆಗೋದು ಪಕ್ಕಾ
Team Udayavani, May 25, 2020, 4:48 AM IST
ರಮೇಶ ಮತ್ತು ಸುರೇಶ, ಒಂದೇ ಓರಗೆಯವರು. ಅವರಿಬ್ಬರ ಸ್ನೇಹ, ದೊಡ್ಡವರಾದ ಮೇಲೂ ಮುಂದುವರಿದಿತ್ತು. ಅವರಿಬ್ಬರಿಗೂ ಒಂದೇ ಕಂಪನಿಯಲ್ಲಿ ಕೆಲಸವೂ ಸಿಕ್ಕಿತು. ಉಳಿತಾಯ ಮಾಡುವುದರಲ್ಲಿ, ಹಣ ಹೂಡುವುದರಲ್ಲಿ ಇಬ್ಬರಿಗೂ ಒಲವಿತ್ತು. ಸ್ಟಾಕ್ ಮಾರ್ಕೆಟ್ ನಲ್ಲಿಯೂ ಅವರು ಹಣ ಹೂಡಿದ್ದರು. ಒಂದು ದಿನ, ಷೇರು ಮಾರುಕಟ್ಟೆಯಲ್ಲಿ ಕೋಲಾಹಲವುಂಟಾಯಿತು.
ಅನೇಕ ಷೇರುಗಳ ಬೆಲೆ ಕುಸಿಯತೊಡಗಿತು. ರಮೇಶ, ಭಯದಿಂದ ಚಿಂತಾಕ್ರಾಂತನಾದ. ಅವನು ಹಣ ಹೂಡಿದ್ದ ಕಂಪನಿಯ ಷೇರು, ಬೆಲೆ ಕಳೆದುಕೊಂಡಿತ್ತು. ರಮೇಶ ತಲೆ ಮೇಲೆ ಕೈಹೊತ್ತು ಕುಳಿತ. ಷೇರಿನ ಬೆಲೆ ಇನ್ನಷ್ಟು ಕುಸಿಯುವ ಮೊದಲು, ಬಂದಷ್ಟು ಬರಲಿ ಎಂದು ಯೋಚಿಸಿ, ತನ್ನಲ್ಲಿದ್ದ ಆ ಕಂಪನಿಯ ಷೇರನ್ನು ಕಡಿಮೆ ಮೊತ್ತಕ್ಕೆ ಮಾರಿದ. ಅಷ್ಟೇ ಅಲ್ಲ, ಕೂಡಲೇ ಷೇರನ್ನು ಮಾರಿಬಿಡುವಂತೆ ಸುರೇಶನಿಗೂ ಹೇಳಿದ.
ಆದರೆ, ಸುರೇಶ ಆತಂಕಕ್ಕೆ ಒಳಗಾಗದೆ ಸುಮ್ಮನಿದ್ದ. ಕೆಲ ತಿಂಗಳುಗಳು ಕಳೆದವು. ಮಾರುಕಟ್ಟೆಯ ಸ್ಥಿತಿ ಈಗ ಸುಧಾರಿಸಿತ್ತು. ಸುರೇಶನ ಬಳಿಯಿದ್ದ ಕಂಪನಿಯ ಷೇರಿನ ಬೆಲೆ ಎರಡು ಪಟ್ಟು ಹೆಚ್ಚಾಗಿತ್ತು. ರಮೇಶನಿಗೆ, ತಾನು ಅವಸರ ಮಾಡಿದೆ ಎಂದು, ಈಗ ಅನ್ನಿಸತೊಡಗಿತ್ತು. ಸುರೇಶ, ರಮೇಶನ ಬಳಿ ಬಂದು ಹೇಳಿದ: “ನೀನು ಅವಸರಕ್ಕೆ ಬಿದ್ದು ಷೇರನ್ನು ಮಾರಿದ್ದಕ್ಕೆ ನಷ್ಟ ಅನುಭವಿಸಿದ್ದೀಯ. ಹಾಗೆಯೇ ಸುಮ್ಮನೆ ಇಟ್ಟುಕೊಂಡಿದ್ದರೆ ಏನೂ ಆಗುತ್ತಿರಲಿಲ್ಲ’. ರಮೇಶನಿಗೆ, ತಾನು ಎಡವಿದ್ದು ಎಲ್ಲಿ ಎನ್ನುವುದು ತಿಳಿದುಹೋಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.