ಅಜ್ಜ ಸಿಗರೇಟ್ ಸೇದಿದರೆ ಮೊಮ್ಮಗಳಿಗೆ ಕೊಬ್ಬು!
Team Udayavani, Jan 26, 2022, 6:50 AM IST
ಸಾಂದರ್ಭಿಕ ಚಿತ್ರ.
ಲಂಡನ್: ಪುರುಷರು ತಮ್ಮ ಪ್ರೌಢಾವಸ್ಥೆಗೂ ಮೊದಲೇ ಸಿಗರೇಟ್ ಸೇವನೆ ಅಭ್ಯಾಸ ಬೆಳೆಸಿಕೊಂಡರೆ, ಅದರಿಂದ ಅವರ ಮೊಮ್ಮಕ್ಕಳು ದಪ್ಪವಾಗುತ್ತಾರೆ!
ಯುನೈಟೆಡ್ ಕಿಂಗ್‌ಡಮ್‌ನ ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು ಇಂಥದ್ದೊಂದು ಅಂಶವೊಂದನ್ನು ಸಮೀಕ್ಷೆಯಿಂದ ಕಂಡು ಕೊಂಡಿದ್ದಾರೆ.
ವೈಜ್ಞಾನಿಕ ವರದಿಗಳ ಜರ್ನಲ್‌ನಲ್ಲಿ ಪ್ರಕಟ ವಾಗಿರುವ ವರದಿ ಪ್ರಕಾರ, ಈ ಸಮೀಕ್ಷೆಯಲ್ಲಿ ಒಟ್ಟು 14,000 ಮಂದಿಯನ್ನು ಒಳಪಡಿಸಲಾಗಿದೆ. ಅದರಲ್ಲಿ ಪ್ರೌಢಾವಸ್ಥೆಗೂ ಮೊದಲೇ ಸಿಗರೇಟ್ ಅಭ್ಯಾಸ ಆರಂಭಿಸಿದ ಪುರುಷರ ಹೆಣ್ಣು ಮೊಮ್ಮಕ್ಕಳು ಹೆಚ್ಚು ದಪ್ಪವಾಗಿದ್ದು ಕಂಡುಬಂದಿದೆ.
ಇದನ್ನೂ ಓದಿ:ಹೆಣ್ಣು ಸಮಾಜದ ಕಣ್ಣು :ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಡಾ.ಸವಿತಾ ಕಾಮತ್ ಹೇಳಿಕೆ
ಪ್ರೌಢಾವಸ್ಥೆ ದಾಟಿದ ನಂತರ ಸಿಗರೇಟ್ ಅಭ್ಯಾಸ ಮಾಡಿದವರಲ್ಲಿ ಈ ಸಮಸ್ಯೆ ಕಂಡುಬಂದಿಲ್ಲ. ಹಾಗೆಯೇ ಗಂಡು ಮೊಮ್ಮಕ್ಕಳಿಗೆ ಈ ಸಮಸ್ಯೆ ಕಾಡಿಲ್ಲ. ಪುರುಷರು ಪ್ರೌಢಾವಸ್ಥೆಯಲ್ಲೇ ಸಿಗರೇಟ್ ಸೇದುವುದರಿಂದ ಅವರ ವಂಶವಾಹಿ ಮೇಲೆ ಪರಿಣಾಮ ಬೀರಿ, ಅದು ಅವರ ಪೀಳಿಗೆಗೂ ಕಾಡುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ಈ ಹಿಂದೆ 2014ರಲ್ಲಿ ಸಮೀಕ್ಷೆ ನಡೆಸಿದ್ದ ಸಂಶೋಧಕರ ತಂಡ, “ತಂದೆಯಂದಿರು ತಮ್ಮ ಪ್ರೌಢಾವಸ್ಥೆಗೂ ಮೊದಲೇ ಸಿಗರೇಟ್ ಅಭ್ಯಾಸ ಮಾಡಿದರೆ ಅದು ಅವರು ಗಂಡು ಮಕ್ಕಳ ಕೊಬ್ಬಿಗೆ ಕಾರಣವಾಗುತ್ತದೆ’ ಎಂದು ಹೇಳಿತ್ತು. ಅದರ ಮುಂದುವರಿದ ಭಾಗವಾಗಿ ಈ ವರದಿ ಪ್ರಕಟಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.