IFFI: ಎಂಡ್‌ಲೆಸ್ ಬಾರ್ಡರ್‌ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ
Team Udayavani, Nov 29, 2023, 12:36 AM IST
ಪಣಜಿ: ಇಲ್ಲಿ ಒಂಬತ್ತು ದಿನ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ)ದಲ್ಲಿ ಪರ್ಸಿಯಾ ಭಾಷೆಯ ಚಲನಚಿತ್ರ “ಎಂಡ್‌ಲೆಸ್ ಬಾರ್ಡರ್’ ಅತ್ಯುತ್ತಮ ಚಿತ್ರಕ್ಕಾಗಿನ ಗೋಲ್ಡನ್ ಪಿಕಾಕ್ ಪ್ರಶಸ್ತಿಗೆ ಪಾತ್ರವಾಯಿತು.
ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ನಿರ್ಮಿಸಿರುವ ಕನ್ನಡದ ಕಾಂತಾರ ಚಲನಚಿತ್ರದ ರಿಷಬ್ ಶೆಟ್ಟಿ ಅವರು ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅತ್ಯುತ್ತಮ ನಟ ಪ್ರಶಸ್ತಿಗೆ ಎಂಡ್‌ಲೆಸ್ ಬಾರ್ಡರ್‌ನ ಪೌರಿಯಾ ರಹಿಮಿ ಸಾಮ್, ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾರ್ಟಿ ಆಫ್ ಫೂಲ್ಸ್‌ನ ಮೆಲನೈ ಥೈರಿ ಪಾತ್ರರಾದರು. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬ್ಲಾಗಸ್ ಲೆಸನ್ಸ್ ಚಿತ್ರದ ಸ್ಟೀಫನ್ ಕೊಮನ್‌ಡರೆವ್ ಅವರ ಪಾಲಾಯಿತು.
ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಅಂತಾರಾಷ್ಟ್ರೀಯ ಸಿನೆಮಾ ವಿಭಾಗದಲ್ಲಿ ಕನ್ನಡದ ಕಾಂತಾರ ಸೇರಿದಂತೆ 15 ಸಿನೆಮಾಗಳು ಸೆಣಸಿದ್ದವು. ಇವುಗಳಲ್ಲಿ ಹಿಂದಿಯ ಒಂದು ಮತ್ತು ಕರ್ಬಿಯ 1 ಚಲನಚಿತ್ರಗಳೂ ಇದ್ದವು.
ಇದೇ ಸಂದರ್ಭದಲ್ಲಿ ಸಿನೆಮಾ ಸಾಧಕರಿಗೆ ನೀಡಲಾಗುವ ಅಂತಾರಾಷ್ಟ್ರೀಯ ಪ್ರಶಸ್ತಿಯಾದ ಸತ್ಯಜಿತ್ ರೇ ಪುರಸ್ಕಾರವನ್ನು ಜೀವಿತಾವಧಿ ಸಾಧನೆಗಾಗಿ ಹಾಲಿವುಡ್ ನಟ ಮೈಕೆಲ್ ಡಗ್ಲಾಸ್‌ಗೆ ನೀಡಿ ಗೌರವಿಸಲಾಯಿತು.
ಚೊಚ್ಚಲ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ರೋಜರ್ ಅಜಾದ್ ಕಯಾ ಅವರು ಪಡೆದರು. ಐಸಿಎಫ್ಟಿ ಯುನೆಸ್ಕೊ ಗಾಂಧಿ ಪ್ರಶಸ್ತಿಯು ಡ್ರಿಫ್ಟ್ ಚಿತ್ರದ ಪಾಲಾಯಿತು.
ನ. 20ರಿಂದ 28ರ ವರೆಗೆ ನಡೆದ ಉತ್ಸವದಲ್ಲಿ ವಿವಿಧ ದೇಶಗಳ 720ಕ್ಕೂ ಹೆಚ್ಚು ಚಲನಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಂಡವು. 13 ವಿಶ್ವ ಪ್ರೀಮಿಯರ್, 18 ಅಂತಾರಾಷ್ಟ್ರೀಯ ಪ್ರೀಮಿಯರ್, 62 ಏಷ್ಯಾ ಪ್ರೀಮಿಯರ್‌ಹಾಗೂ 89 ಭಾರತ ಪ್ರೀಮಿಯರ್‌ಗಳು ಇದ್ದವು. ಒಟ್ಟು 105 ದೇಶಗಳ 2926 ಪ್ರವೇಶಗಳು ಚಿತ್ರೋತ್ಸವದ ಆಯ್ಕೆ ಸಮಿತಿಗೆ ಬಂದಿದ್ದವು.
ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದ ರಿಷಭ್ ಶೆಟ್ಟಿಯವರ ಕಾಂತಾರ ಹಾಗೂ ಸಂದೀಪ ಕುಮಾರರ “ಆರಿರಾರಿರೋ’ ಚಿತ್ರವೂ ಸೇರಿದಂತೆ 25 ಕಥಾ ಹಾಗೂ 20 ಕಥೇತರ ಚಿತ್ರಗಳು ಪ್ರದರ್ಶನಗೊಂಡವು. ಕಥಾ ವಿಭಾಗವನ್ನು ಮಲಯಾಳಿಯ ಆಟ್ಟಂ ಆರಂಭಿಸಿದರೆ, ಕಥೇತರ ವಿಭಾಗಕ್ಕೆ ಮಣಿಪುರ ಭಾಷೆಯ ಅಂಡ್ರೋ ಡ್ರೀಮ್ಸ… ಚಿತ್ರ ಚಾಲನೆ ನೀಡಿತ್ತು.
ಸಿನೆಮಾ ಜನರಿಗೆ ತಲುಪಲು ಚಿತ್ರೋತ್ಸವ ಪ್ರೇರಕ
ಮಾನವ ಕೇಂದ್ರಿತ ಕಥೆಗಳನ್ನು ಹೇಳುವ ಸಿನೆಮಾಗಳು ಹೆಚ್ಚಾಗಬೇಕು. ಜನರು ಇಂತಹ ಸಿನೆಮಾಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಅವುಗಳು ಜನರಿಗೆ ತಲುಪುವುದಕ್ಕೆ ಇಂತಹ ಚಿತ್ರೋತ್ಸವಗಳು ಪ್ರೇರಕವಾಗುತ್ತವೆ ಎಂದು ಅಂತಾರಾಷ್ಟ್ರೀಯ ಸಿನೆಮಾ ವಿಭಾಗ ಸ್ಪರ್ಧೆಯ ತೀರ್ಪುಗಾರ ಸಮಿತಿಯ ಅಧ್ಯಕ್ಷ ಶೇಖರ್ ಕಪೂರ್ ಅವರು ತೀರ್ಪು ಪ್ರಕಟಿಸಿದ ಬಳಿಕ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.