ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ : ಒತ್ತುವರಿದಾರರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು
Team Udayavani, Dec 11, 2020, 11:48 AM IST
ಗದಗ: ಇತ್ತೀಚೆಗೆ ರಾಜಕಾಲುವೆ ಹಾಗೂ ಹಳ್ಳಗಳನ್ನು ಒತ್ತುವರಿ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರಿಂದ ನಗರ ಪ್ರದೇಶದಲ್ಲಿ ಅಲ್ಪಸ್ವಲ್ಪ ಮಳೆಯಾದರೂ ಕೃತಕ ಪ್ರವಾಹ ಪರಿಸ್ಥಿತಿಗೆ ಕಾರಣವಾಗುತ್ತಿದೆ. ಆದರೆ, ಇಂತಹ ಪ್ರಕರಣಕ್ಕೆ ಸಂಬಂಧಿಸಿ ನಗರದಲ್ಲಿ ಹಳ್ಳ ಒತ್ತುವರಿ ಮಾಡಿದ್ದ ಎರಡು ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು
ಒತ್ತುವರಿದಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ನಗರದ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಶಿವಬಸವ ನಗರದ ಸರ್ವೇ ನಂ. 273/ಈ ವ್ಯಾಪ್ತಿಯ ಪ್ಲಾಟ್ ನಂ.8 ಮಾಲಿಕ ವಾಸಿಮ್ ಗೌಸ್ ಮೋದಿನ ಸಾಬ ಶಿರಹಟ್ಟಿ ಎಂಬಾತನಿಗೆ ಸೇರಿತ್ತು. ಅವರು 2012 ರಲ್ಲಿ ಸಿದ್ಧಲಿಂಗಪ್ಪ ಚಳಗೇರಿ ಎಂಬುವರರಿಗೆ ಮಾರಾಟ ಮಾಡಿದ್ದರು. ಸಿದ್ದಲಿಂಗಪ್ಪ ಚಳಗೇರಿ ಅವರು ತಮ್ಮ 1514 ಚದುರ ಅಡಿ ಪೈಕಿ 1163 ಚ.ಅಡಿಯನ್ನು ಮಂಜು ಬ್ಯಾಲಿಹಾಳ ಎಂಬುವವರಿಗೆ ಮಾರಾಟ ಮಾಡಿದ್ದರು.
ಇದರಿಂದಾಗಿ ಸಿದ್ಧಲಿಂಗಪ್ಪ ಚಳಗೇರಿ ಅವರಿಗೆ ಕೇವಲ 350 ಚದುರ ಅಡಿ ನಿವೇಶನ ಮಾತ್ರ ಉಳಿದಿತ್ತು. ಆದರೆ, ಸಿದ್ಧಲಿಂಗಪ್ಪ ಅವರು ತಮ್ಮ ನಿವೇಶನಕ್ಕೆ ಹೊಂದಿಕೊಂಡಿರುವ ಸರಕಾರಿ ಹಳ್ಳದ 467.85 ಚ.ಮೀ. ಜಾಗೆಯನ್ನು ಕಬಳಿಸಿದ್ದರು. ಅಲ್ಲದೇ ಅದಕ್ಕೆ ಸಂಬಂಧಿಸಿದಂತೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದರು. ಆನಂತರ 2017ರಲ್ಲಿ ಅನ ಧಿಕೃತವಾಗಿ 5034 ಚ.ಅಡಿ
ಜಾಗವನ್ನು 1550 ಚ.ಅಡಿಯ ಒಂದು, 1163 ಚ.ಅಡಿಯ ಎರಡು ನಿವೇಶನಗಳನ್ನಾಗಿಸಿ, ದಾನಪತ್ರ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಮದುವೆ ದಿನವೇ ಗ್ರಾಮಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮದುಮಗ
ಈ ಪೈಕಿ ಎರಡು ನಿವೇಶನಗಳಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿದ್ದು, ಅಂತಿಮ ಹಂತದಲ್ಲಿದ್ದವು. ಈ ಬಗ್ಗೆ
ಸಂಶಯಗೊಂಡ ಶಿವಬಸವ ನಗರದ ಸುಧಾರಣಾ ಸಮಿತಿ, ಮೂಲ ದಾಖಲೆಗಳನ್ನು ಪರಿಶೀಲಿಸಿ, 21-6-2018ರಲ್ಲಿ ನಗರಸಭೆಗೆ
ದೂರು ಸಲ್ಲಿಸಲಾಗಿತ್ತು. 27-6-2018ರಲ್ಲಿ ಅನಧಿಕೃತ ಕಟ್ಟಡಗಳನ್ನು 7 ದಿನಗಳಲ್ಲಿ ತೆರವುಗೊಳಿಸುವಂತೆ ಸೂಚಿಸಿ ಹಳ್ಳ ಒತ್ತುವರಿದಾರರಿಗೆ ನಗರಸಭೆಯಿಂದ ನೋಟಿಸ್ ನೀಡಿತ್ತು. ಆದರೂ, ಕಟ್ಟಡ ಮಾಲೀಕರು ಕ್ಯಾರೇ ಎನ್ನಲಿಲ್ಲ. ಹೀಗಾಗಿ, ಶಿವಬಸವನಗರದ ಸುಧಾರಣಾ ಸಮಿತಿ ಪ್ರಮುಖರು, ಹಂತ ಹಂತವಾಗಿ ಹೋರಾಟ ಮುಂದುವರಿಸಿದರು.
ಈ ಕುರಿತು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಅನಧಿಕೃತ ಕಟ್ಟಡಗಳನ್ನು ನಗರಸಭೆ ಮೂಲಕ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ.
ನಗರಸಭೆಯಿಂದ ಒತ್ತುವರಿ ತೆರವು: ಈ ಕುರಿತು ಜಿಲ್ಲಾಧಿಕಾರಿಗಳ ಸೂಚನೆ ಬರುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಗುರುವಾರ ಬೆಳಗ್ಗೆ ಜೆಸಿಬಿ ಅಂಗಳಕ್ಕಿದಿವೆ. ನೋಡನೋಡುತ್ತಿದ್ದಂತೆ ಅನಧಿಕೃತ ಎರಡು ಕಟ್ಟಡಗಳನ್ನು ನೆಲಕ್ಕುರುಳಿಸಿರುವುದ
ಅವಳಿ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಧಿಕಾರಿಗಳ ಮೇಲೆ ಕ್ರಮವಿಲ್ಲವೇ?: ಹಳ್ಳದ ಜಾಗೆಯಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿದ್ದ ಮನೆಗಳನ್ನು ತೆರವುಗೊಳಿಸಿರುವುದು ಸ್ವಾಗತಾರ್ಹ. ಆದರೆ, ಹಳ್ಳದ ಜಾಗೆಯನ್ನು ಅತಿಕ್ರಮಿಸಿದ್ದಲ್ಲದೇ, ಕುಟುಂಬಸ್ಥರ ಹೆಸರಲ್ಲಿ ದಾನ ಪತ್ರ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ, ಅನಧಿಕೃತ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಕೊಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.