ಗಾಂಧಿನಗರದಲ್ಲಿ ಅಕ್ರಮ ಡ್ಯಾನ್ಸ್ ಬಾರ್: 9 ಮಂದಿ ಸೆರೆ , 64 ಮಹಿಳೆಯರ ರಕ್ಷಣೆ
Team Udayavani, Mar 11, 2022, 11:42 AM IST
ಬೆಂಗಳೂರು: ಅಕ್ರಮವಾಗಿ ಡ್ಯಾನ್ಸ್ಬಾರ್ ನಡೆಸುತ್ತಿದಲ್ಲದೆ, ಮಹಿಳೆಯರಿಗೆ ಲೈಂಗಿಕ ಪ್ರಚೋದಿತ ಉಡುಪುಗಳನ್ನು ಹಾಕಿಸಿ ನೃತ್ಯ ಮಾಡಿಸುತ್ತಿದ್ದ ಗಾಂಧಿನಗರದ 5ನೇ ಮುಖ್ಯ ರಸ್ತೆಯ ಮೂಡ್ ಬಾರ್ ಮತ್ತು ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಮೂವರು ಕೆಲಸಗಾರರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಇದೇ ವೇಳೆ 64 ಮಂದಿ ಮಹಿಳೆಯರನ್ನು ರಕ್ಷಿಸಿ, 1.32 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರುವ ಮೂಡ್ ಬಾರ್ ಮತ್ತು ರೆಸ್ಟೋರೆಂಟ್ ಮಾಲಿಕರು, ವ್ಯವಸ್ಥಾಪಕರು ಅಕ್ರಮವಾಗಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದರು. ಅಲ್ಲದೆ, ಮಹಿಳಾ ಕೆಲಸಗಾರರಿಗೆ ಲೈಂಗಿಕವಾಗಿ ಪ್ರಚೋದಿಸುವಂತ ತುಂಡು ಉಡುಪು ಧರಿಸಿ ಡ್ಯಾನ್ಸ್ ಮಾಡಿಸುತ್ತಿದ್ದರು.
ಗ್ರಾಹ ಕರು ಡ್ಯಾನ್ಸ್ ಮಾಡುವ ಮಹಿಳೆಯರ ಮೇಲೆ ಹಣ ಎಸೆಯುವಂತೆ ಪ್ರಚೋದಿಸಿ ಹಣ ಗಳಿಸುತ್ತಿ ದ್ದರು. ಪರವಾನಗಿ ಪಡೆಯದೇ ಡ್ಯಾನ್ಸ್ ಬಾರ್ ನಡೆಸುತ್ತಿರು ವುದು ಹಾಗೂ ನಿಯಮ ಉಲ್ಲಂಘಿಸಿ ಡಿ.ಜೆ. ಮ್ಯೂಸಿಕ್ ಬಳಸಿ ಡ್ಯಾನ್ಸ್ಬಾರ್ ನಡೆಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಡ್ಯಾನ್ಸ್ಬಾರ್ನಲ್ಲಿದ್ದ 74 ಗ್ರಾಹಕರು ಹಾಗೂ ಮಹಾರಾಷ್ಟ್ರದ-8, ದೆಹಲಿ-6, ಪಂಜಾಬ್-8, ರಾಜಸ್ಥಾನ-13, ಮಧ್ಯಪ್ರದೇಶ-3, ಉತ್ತರಾ ಖಂಡ-2, ಉತ್ತರಪ್ರದೇಶ-5,ಪಶ್ಚಿಮ ಬಂಗಾಳ-2 ಹಾಗೂ ಕರ್ನಾಟಕದ 17 ಮಂದಿ ಸೇರಿ 64 ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್: ಯೂಟ್ಯೂಬ್!
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.