ನಿವೇಶನ ಅಕ್ರಮ ಖಾತೆ ಆರೋಪ : ಸ್ಥಳ ಪರಿಶೀಲಿಸಿದ ಪೌರಾಡಳಿತ ಇಲಾಖೆ ಅಧಿಕಾರಿ ಮಾದೇವಯ್ಯ
Team Udayavani, Dec 9, 2021, 3:13 PM IST
ಶ್ರೀರಂಗಪಟ್ಟಣ : ಪುರಸಭಾ ವ್ಯಾಪ್ತಿಯ 8ನೇ ವಾರ್ಡ್‌ನಲ್ಲಿ ಆಶ್ರಯ ಯೋಜನೆಯ 4 ನಿವೇಶನಗಳನ್ನು ಅಕ್ರಮ ಖಾತೆ ಮಾಡಿರುವ ಆರೋಪದಲ್ಲಿ ತಾಲೂಕು ನಾಗರಿಕ ಹಿತರಕ್ಷಣಾ
ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳು ಹಾಗೂ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ದೂರು ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಪೌರಾಡಳಿತ ಇಲಾಖೆಯಿಂದ ತನಿಖೆ ಹಾಗೂ ಪರಿಶೀಲನೆಗೆ ಮಾದೇವಯ್ಯ ಎಂಬುವರನ್ನು ನೇಮಿಸಿದ್ದು, ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಖಾತೆ ಮಾಡಿಸಿಕೊಟ್ಟಿರುವುದು ಬೆಳಕಿಗೆ?:
ಪುರಸಭೆ ವ್ಯಾಪ್ತಿಯ 8ನೇ ವಾರ್ಡ್‌ನಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನರಹಿತ ಬಡವರಿಗೆ ಕಳೆದ 20 ವರ್ಷಗಳ ಹಿಂದೆ 18/35ರ ಅಳತೆಯಲ್ಲಿ ಏಳು ಮಂದಿಗೆ ನಿವೇಶನ ಹಂಚಿ ಅವುಗಳಿಗೆ ಹಕ್ಕುಪತ್ರ ನೀಡಲಾಗಿತ್ತು. ಆದರೆ ಖಾತೆ ವಗೈರಿ ಮಾಡದೆ ಹಾಗೇ ಉಳಿದಿದ್ದವುಗಳ ಪೈಕಿ 4 ನಿವೇಶನಗಳನ್ನು ಅಕ್ರಮವಾಗಿ ಬೇರೇಯವರಿಗೆ ಇತ್ತೀಚೆಗೆ ಖಾತೆ ಮಾಡಿಸಿಕೊಟ್ಟಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ.
ಪ್ರತಿಭಟನೆ ಮಾಡಿದ್ದರು: ಆಶ್ರಯ ಯೋಜನೆಯಡಿಯಲ್ಲಿ ಪಡೆದಿದ್ದ ಮಂದಿ ಖಾತೆಗೋಸ್ಕರ ಅಲೆದು ಅಲೆದು ಕಚೇರಿ ಸುತ್ತಾಡಿದರೂ ಖಾತೆ ಮಾಡಿಸಿಕೊಳ್ಳಲಾಗದೆ, ಹಕ್ಕುಪತ್ರ ಪಡೆದವರು ಕಳೆದ ಒಂದು ವರ್ಷದಿಂದ ಖಾತೆ ಮಾಡಿ ಕೊಡಿ ಎಂದು ಅರ್ಜಿ ನೀಡಿ ಪುರಸಭೆ ಕಚೇರಿ ಮುಂದೆ ಪ್ರತಿಭಟನೆಯನ್ನೂ ಸಹ ಮಾಡಿದರು. ಆದರೆ, ಇದೀಗ ಕೆಲ ಮಂದಿಯದ್ದು ಪೌತಿಯಾಗಿದ್ದು, ಅವರ ಮಕ್ಕಳಿಗಾದರೂ ಖಾತೆ ಮಾಡಲಾಗದ ಪುರಸಭೆ ಅಧಿಕಾರಿಗಳು ಗೊತ್ತಿಲ್ಲದಂತಿದ್ದು, ಬೇರೆಯವರಿಗೆ ಅಕ್ರಮ ಖಾತೆ ಮಾಡಿಕೊಡಲಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಚಂದನ್ ನೇತೃತ್ವದಲ್ಲಿ ಆರೋಪಿಸಿ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ : ರೈತರ ಬೇಡಿಕೆ ಈಡೇರಿಕೆಗೆ ಕೇಂದ್ರ ಅಸ್ತು; 13 ತಿಂಗಳ ರೈತರ ಹೋರಾಟ ಕೊನೆಗೂ ಅಂತ್ಯ
ದೂರು ಹಿನ್ನೆಲೆ ಜಿಲ್ಲಾಡಳಿತ ವತಿಯಿಂದ ತನಿಖೆಗೆ ಬಂದಿದ್ದ ಪೌರಾಡಳಿತ ಇಲಾಖೆಯ ಅಧಿಕಾರಿ ಮಾದೇವಯ್ಯ ಸ್ಥಳ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ವೇಳೆ ಚಂದನ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.