ನಾನು ಟಗರೂ ಅಲ್ಲ, ರಾಜಾ ಹುಲಿಯೂ ಅಲ್ಲ: ಎಚ್‌ಡಿಡಿ
Team Udayavani, Nov 25, 2019, 3:07 AM IST
ಬೆಂಗಳೂರು: ನಾನು ಟಗರೂ ಅಲ್ಲ, ರಾಜಾಹುಲಿಯೂ ಅಲ್ಲ. ಬಂಡೆಯೂ ಅಲ್ಲ. ಸಾಮಾನ್ಯ ರೈತನ ಮಗ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರ, ವೃಷಭಾವತಿ ನಗರ ಪ್ರದೇಶಗಳಲ್ಲಿ ಪಕ್ಷದ ಅಭ್ಯರ್ಥಿ ಗಿರೀಶ್ ನಾಶಿ ಪರ ಪ್ರಚಾರ ನಡೆಸಿದ ಅವರು, ಈಗ ನನಗೆ ಕೊಡುವ ಶಕ್ತಿ ಇಲ್ಲ. ಆದರೆ, ಕೇಳುವ ಶಕ್ತಿ ಇದೆ. ನಾನು ನಿಮಗೆ ಏನು ಮಾಡಿದ್ದೇನೆಂದು ಹೇಳುವ ಶಕ್ತಿ ನನಗಿದೆ.
ಕುಮಾರಣ್ಣನಿಗೆ ಅನ್ಯಾಯ ಮಾಡಿದ್ದಾರೆ. ಅವರು ಮತ್ತೆ ಮುಖ್ಯಮಂತ್ರಿ ಯಾಗುವವರೆಗೂ ನಾನು ನಿಮ್ಮೊಂದಿಗಿದ್ದೇವೆ ಎಂದು ಯುವಕರು ಎದ್ದೇಳಬೇಕು ಎಂದು ಹೇಳಿದರು. ನನಗೆ ವಯಸ್ಸಾಯಿತು ಎಂದು ತುಮಕೂರಿನಲ್ಲಿ ಸೋಲಿಸಿದರು. ನಾನು ಯಾರಿಗೆ ದ್ರೋಹ, ಅನ್ಯಾಯ ಮಾಡಿದ್ದೇನೆ? ಈ ಹಿಂದೆ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಜನರು ನೆ.ಲ. ನರೇಂದ್ರ ಬಾಬು ಅವರನ್ನು ಗೆಲ್ಲಿಸಿದ್ದರು. ಅವರು ಒಕ್ಕಲಿಗರಲ್ಲ. ಆದರೂ ಅವರನ್ನು ಗೆಲ್ಲಿಸಿದ್ದರು.
ಈಗ ಈ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಟಿಕೆಟ್ ನೀಡಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರದ ಮಾಜಿ ಶಾಸಕರ ಹೆಂಡತಿ ಡೆಪ್ಯೂಟಿ ಮೇಯರ್ ಆಗಲು ಯಾರು ಶಕ್ತಿ ಕೊಟ್ಟಿದ್ದು. ಅವರಿಗೆ ಬಜೆಟ್ ಮಾಡಲು ಅವಕಾಶ ಕೊಟ್ಟಿದ್ದೆವು. ಆದರೆ, ಅನರ್ಹ ಶಾಸಕರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟಿಲ್ಲ ಎಂದು ಹೇಳುತ್ತಾರೆ. ಈಗ ಬಿಜೆಪಿಯವರ ಜತೆ ಹೋದರೆ ಅಭಿವೃದ್ಧಿ ಆಗುತ್ತದೆ ಎಂದು ಹೇಳುತ್ತಿದ್ದಾರೆ.
ಬಿಜೆಪಿಯವರು 15 ಜನರನ್ನೂ ಮಂತ್ರಿ ಮಾಡುವುದಾಗಿ ಹೇಳುತ್ತಿದ್ದಾರೆ. ಅವರ ಮಾತು ಕೇಳಿ ತಲೆ ಚಚ್ಚಿಕೊಂಡೆ. ನಾನು ಯಾವತ್ತೂ ಜಾತಿ ಮೇಲೆ ಮಾತನಾಡುವುದಿಲ್ಲ. ಆದರೆ, ಈ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ನಾನು ಸುಮ್ಮನೆ ಕೂಡುವುದಿಲ್ಲ. ದೇವೇಗೌಡರಿಗೆ ಹೋರಾಟ ಮಾಡುವ ಶಕ್ತಿ ಇದೆ ಎನ್ನುವುದನ್ನು ಜನರು ಈ ಚುನಾವಣೆ ಫಲಿತಾಂಶದ ಮೂಲಕ ತೋರಿಸಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಮೈಕ್ರೋಫೈನಾನ್ಸ್ ಸಾಲ ಮೋಸ ಪ್ರಕರಣ ತನಿಖೆಗೆ ಮೂರು ತಂಡ ರಚನೆ: ಸತೀಶ ಜಾರಕಿಹೊಳಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ: ಜನಾರ್ದನ ರೆಡ್ಡಿ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Hubballi: ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ… ಆರೋಪಿ ಕಾಲಿಗೆ ಗುಂಡೇಟು
Hubballi: ಸಿಲಿಂಡರ್ ಸ್ಫೋಟ ಪ್ರಕರಣ… ಮತ್ತೋರ್ವ ಕೊನೆಯುಸಿರು, ಮೃತರ ಸಂಖ್ಯೆ 8ಕ್ಕೆ ಏರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.