ಫೇಸ್ಬುಕ್ನಲ್ಲಿ ಇರೋದು ನಾನಲ್ಲ…
Team Udayavani, May 16, 2020, 5:11 AM IST
ಬಹುತೇಕ ಸಿನಿಮಾ ನಟ-ನಟಿಯರು ಸೋಶಿಯಲ್ ಮೀಡಿಯಾದಲ್ಲಿಅಕ್ಟೀವ್ ಆಗಿದ್ದಾರೆ. ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ … ಹೀಗೆ ಬೇರೆ ಬೇರೆ ವೇದಿಕೆ ಮೂಲಕ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರ ತ್ತಾರೆ. ಆದರೆ ಅದೆಷ್ಟೋ ಬಾರಿ ಅವರಿಗೇ ಗೊತ್ತಿಲ್ಲದಂತೆ ಅವರ ಹೆಸರಿನಲ್ಲಿ ಫೇಕ್ ಅಕೌಂಟ್ಗಳು ಕ್ರಿಯೇಟ್ ಆಗಿ ಅದರಲ್ಲಿ ಏನೇನೋ ಸಂದೇಶಗಳನ್ನು ಹಾಕುತ್ತಿರುತ್ತಾರೆ. ಈಗ ನಟಿ ಭಾವನಾ ಮೆನನ್ ಅವರಿಗೂ ಇದೇ ತರಹ ಆಗಿದೆ.
ಪುನೀತ್ ರಾಜ್ಕುಮಾರ್ ಅವರ ಜಾಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಭಾವನಾ ಕನ್ನಡದಲ್ಲಿ ಬಹು ಬೇಡಿಕೆಯ ನಟಿ ಎಂಬುದು ನಿಮಗೆ ಗೊತ್ತೇ ಇದೆ. ಇಂತಿಪ್ಪ ಭಾವನಾ ಕುರಿತಾಗಿ ಯಾರೋ ಕಿಡಿಗೇಡಿಗಳು ಫೇಸ್ಬುಕ್ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಈ ಮೂಲಕ ಒಂದಷ್ಟು ಮಂದಿಯನ್ನು ತಮ್ಮತ್ತ ಸೆಳೆಯುವ ಫಾಲೋ ಮಾಡುವ ತಂತ್ರ ಅನುಸರಿಸಿದ್ದಾರೆ. ಇದು ನಟಿ ಭಾವನಾ ಅವರ ಗಮನಕ್ಕೂ ಬಂದಿದೆ.
ಕೂಡಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾವನಾ, ನಾನು ಫೇಸ್ಬುಕ್ ಬಳಕೆ ಮಾಡುತ್ತಿಲ್ಲ. ಈ ಅಕೌಂಟ್ಗೂ ನನಗೂ ಯಾವುದೇ ಸಂಬಂಧ ವಿಲ್ಲ. ಯಾರೋ ಕಿಡಿಗೇಡಿ ಗಳು ಮಾಡಿರುವ ಅಕೌಂಟ್. ಹಾಗಾಗಿ, ನಾನು ಎಂದು ನೀವು ಈ ಅಕೌಂಟ್ ಅನ್ನು ಫಾಲೋ ಮಾಡಬೇಡಿ ಎಂದು ನೇರವಾಗಿ ಹೇಳಿದ್ದಾರೆ. ಭಾವನಾ ಸದ್ಯ ಇನ್ಸ್ಸ್ಟಾಗ್ರಾಮ್ನಲ್ಲಿ ಇದ್ದು, ಇಲ್ಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಮಲಯಾಳಿ ಬೆಡಗಿ ಭಾವನಾ ಕನ್ನಡ ಚಿತ್ರ ನಿರ್ಮಾಪಕ ನವೀನ್ ಅವರನ್ನು ವರಿಸಿದ್ದಾರೆ.
ಮದುವೆ ಬಳಿಕ ಭಾವನಾ ಒಪ್ಪಿಕೊಂಡ ಮೊದಲ ಸಿನಿಮಾ ಇನ್ಸ್ ಪೆಕ್ಟರ್ ವಿಕ್ರಂ. ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯಷ್ಟೇ ಬಾಕಿ. ಇದಲ್ಲದೇ, ಶಿವರಾಜ್ ಕುಮಾರ್ ನಾಯಕರಾಗಿರುವ ಭಜರಂಗಿ 2 ಚಿತ್ರದಲ್ಲೂ ಭಾವನಾ ನಾಯಕಿ. ಈ ಹಿಂದೆ ಟಗರು ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ಜೋಡಿಯಾಗಿ ನಟಿಸಿದ್ದ, ಭಾವನಾ ಈಗ ಭಜರಂಗಿ 2ನಲ್ಲಿ ಮತ್ತೂಮ್ಮೆ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.