IMEC: ಇದು ಹೇಗೆ ಚೀನಕ್ಕೆ ಚೆಕ್‌ಮೇಟ್‌


Team Udayavani, Sep 13, 2023, 12:17 AM IST

imec

ಹೊಸದಿಲ್ಲಿಯಲ್ಲಿ ಸಂಪನ್ನಗೊಂಡ ಜಿ20 ದೇಶಗಳ ಶೃಂಗಸಭೆಯ ಮಹತ್ತರ ನಿರ್ಣಯಗಳಲ್ಲಿ ಒಂದು ಭಾರತ-ಮಧ್ಯಪ್ರಾಚ್ಯ- ಯುರೋಪ್‌ ಆರ್ಥಿಕ ಕಾರಿಡಾರ್‌ (ಐಎಂಇಸಿ). ಭಾರತವನ್ನು ಮಧ್ಯ ಪ್ರಾಚ್ಯ ದೇಶಗಳು, ಯುರೋಪ್‌ ಹಾಗೂ ಅಮೆರಿಕದ ಜತೆಗೆ ಸಂಪರ್ಕಿಸುವ ರೈಲು ಮತ್ತು ಬಂದರುಗಳ ಜಾಲದ ಬೃಹತ್‌ ಯೋಜನೆ. ಚೀನದ ಇಂಥದ್ದೇ ಯೋಜನೆ ಬೆಲ್ಟ್ ಆ್ಯಂಡ್‌ ರೋಡ್‌ ಇನಿಶಿಯೇಟಿವ್‌ (ಬಿಆರ್‌ಐ)ಗೆ ಇದು ಚೆಕ್‌ವೆುàಟ್‌.

ಏನಿದು ಐ2ಯು2?
– ಇದು ನಾಲ್ಕು ದೇಶಗಳ ಕೂಟ. ಭಾರತ, ಇಸ್ರೇಲ್‌, ಅಮೆರಿಕ, ಯುಎಇ ಇದರ ಸದಸ್ಯರು.
-ಪ್ರಧಾನ ಗುರಿ: ತಂತ್ರಜ್ಞಾನ ಮತ್ತು ಖಾಸಗಿ ರಂಗದಲ್ಲಿ ಪರಸ್ಪರ ಭಾಗೀದಾರಿಕೆ ಹೆಚ್ಚಿಸಿ ಸವಾಲುಗಳನ್ನು ಜತೆಗೂಡಿ ಎದುರಿಸುವುದು.
– 2022ರ ಜುಲೈಯಲ್ಲಿ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಪರಸ್ಪರ ಸಹಕಾರ, ಭಾಗೀದಾರಿಕೆಯ 6 ಪ್ರಮುಖ ಕ್ಷೇತ್ರಗಳ ಘೋಷಣೆ: ನೀರು, ಶಕ್ತಿ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ, ಆಹಾರ ಭದ್ರತೆ.

ಐಎಂಇಸಿಗೆ ಬೀಜಾಂಕುರ
ಐ2ಯು2 ವೇದಿಕೆಯ ಚರ್ಚೆ, ಸಮಾಲೋಚನೆಯ ಸಂದರ್ಭದಲ್ಲಿಯೇ ಐಎಂಇಸಿಗೆ ಬೀಜಾಂಕುರವಾಯಿತು. ಇದಕ್ಕಾಗಿ ಸೌದಿ ಅರೇಬಿಯಾವನ್ನು ವೇದಿಕೆಯ
ಸದಸ್ಯನನ್ನಾಗಿ ಮಾಡಲಾಯಿತು.

ಇದು ಅವಸರದ ಅಡುಗೆಯಲ್ಲ!
2021ರ ಅಕ್ಟೋಬರ್‌ನಲ್ಲಿಯೇ ಇದಕ್ಕಾಗಿ ಐ2ಯು2 ಎಂಬ ವೇದಿಕೆ ಸ್ಥಾಪಿಸಲಾಗಿತ್ತು.
ಭಾರತ, ಇಸ್ರೇಲ್‌, ಯುಎಇ, ಅಮೆರಿಕದ ಜತೆಗೆ ಸೌದಿ ಅರೇಬಿಯ ಇತ್ತೀಚಿನ ಸೇರ್ಪಡೆ.
ಈ ಮಹಾ ಯೋಜನೆ ಬೀಜಾಂಕುರವಾಗಲು ಕಾರಣ ರಾಷ್ಟ್ರೀಯ ಭದ್ರತಾ ಸಲಹೆಗಾರ
(ಎನ್‌ಎಸ್‌ಎ) ಅಜಿತ್‌ ದೋವಲ್‌.
ಇತರ ದೇಶಗಳ ಎನ್‌ಎಸ್‌ಎಗಳ ಜತೆಗೆ ಹಲವು ತಿಂಗಳುಗಳಿಂದ ದೋವಲ್‌ ಹಲವಾರು ಸುತ್ತುಗಳ ಸಭೆ ನಡೆಸಿದ್ದರು.
ವಿಶೇಷವಾಗಿ ಅಮೆರಿಕದ ಎನ್‌ಎಸ್‌ಎ ಜೇಕ್‌ ಸುಲಿವನ್‌ ಜತೆಗೆ ಪಟ್ಟು ಬಿಡದೆ ಕುಳಿತು ಯೋಜನೆಯನ್ನು ಅಂತಿಮಗೊಳಿಸಿದ್ದರು.

ಮಧ್ಯಪ್ರಾಚ್ಯದಲ್ಲಿ ಚೀನದ ಪ್ರಭಾವ
– ಚೀನವು ಮಧ್ಯಪ್ರಾಚ್ಯದಲ್ಲಿ ಅದರಲ್ಲೂ ವಿಶೇಷವಾಗಿ ಇರಾಕ್‌ ಜತೆಗಿನ ಬಾಂಧವ್ಯ ಗಾಢವಾಗುತ್ತಿದೆ. ಬಿಆರ್‌ಐ ಯೋಜನೆಗಾಗಿ ಈ ಸಹಕಾರ ವಿಸ್ತರಣೆಯಾಗಿದೆ.
-ಪರ್ಶಿಯನ್‌ ಕೊಲ್ಲಿಯ ಮೂಲಕ ವ್ಯಾಪಾರವನ್ನು ವಿಸ್ತರಿಸಲು ಚೀನಕ್ಕೆ ಇರಾಕ್‌ನ ಸಹಕಾರ ಬೇಕು.
-ತನ್ನ ಇಂಧನ-ಶಕ್ತಿಯ ಬೇಡಿಕೆಯನ್ನು ಪೂರೈಸಿಕೊಳ್ಳಲು ಚೀನವು ಪಶ್ಚಿಮ ಏಷ್ಯಾದ ದೇಶಗಳನ್ನು ವ್ಯಾಪಿಸಿಕೊಳ್ಳಲು ಯತ್ನಿಸುತ್ತಿದೆ.
-ಸೌದಿ ಅರೇಬಿಯಾ-ಇರಾನ್‌ ಒಪ್ಪಂದವನ್ನೇ ಅಡಿಪಾಯವಾಗಿಸಿ ಪಶ್ಚಿಮ ಏಷ್ಯಾ- ಉತ್ತರ ಆಫ್ರಿಕದವರೆಗೂ ವ್ಯಾಪಿಸಿಕೊಳ್ಳಲು ಚೀನ ಚಿಂತನೆ.
– ಇರಾನ್‌-ಸೌದಿ ಅರೇಬಿಯಾ ಒಪ್ಪಂದದ ಬಳಿಕ ಈ ಭಾಗದ ದೇಶಗಳಿಗೆ ಚೀನದ ನಾಯಕರು, ಅಧಿಕಾರಿಗಳಿಂದ ನಿರಂತರ ಭೇಟಿ.
– ಚೀನ ಹಾರ್ಬರ್‌ ಎಂಜಿನಿಯರಿಂಗ್‌ ಕಂಪೆನಿ
(ಸಿಎಚ್‌ಇಸಿ) ಇತ್ತೀಚೆಗೆ 2,100 ಕೋಟಿ ಡಾಲರ್‌ ಮೊತ್ತದ ಮೂಲಸೌಕರ್ಯ ನಿರ್ಮಾಣ ಯೋಜ ನೆಯೊಂದನ್ನು ನೀಡಲಾಗಿದೆ ಎಂಬ ವರದಿಗಳಿವೆ.

ತಿರುಗೇಟು ಮಾತ್ರ ಅಲ್ಲ
-ಐ2ಯು2 ಸದಸ್ಯ ದೇಶಗಳಲ್ಲದೇ ಮಧ್ಯ ಪ್ರಾಚ್ಯದ ಇತರ ದೇಶಗಳಲ್ಲೂ ವ್ಯವಹಾರ ವೃದ್ಧಿ. ಮೂಲಸೌಕರ್ಯ ನಿರ್ಮಾಣದಲ್ಲಿ ಪಾಲುದಾರಿಕೆ ಲಭ್ಯವಾಗುವ ಸಾಧ್ಯತೆ.
-ಈ ಯೋಜನೆಗಳಲ್ಲಿ ಭಾರತ ಪಾಲ್ಗೊಂಡರೆ ಜಾಗತಿಕ ಮೂಲಸೌಕರ್ಯ ನಿರ್ಮಾತೃ ಎಂಬ ಹೆಗ್ಗಳಿಕೆ ಲಭ್ಯ.

ಚೀನಕ್ಕೆ ಸಡ್ಡು
– ಯಾವುದೇ ನಾಯಕರು ಹೆಸರೆತ್ತದೇ ಇದ್ದರೂ ಐ2ಯು2 ರಚನೆಯಾದುದು ಮಧ್ಯಪ್ರಾಚ್ಯದಲ್ಲಿ ವಿಸ್ತರಿಸುತ್ತಿರುವ ಚೀನದ ಪ್ರಭಾವಕ್ಕೆ ತಿರುಗೇಟು ನೀಡಲೆಂದೇ.
– ಈ ಯೋಜನೆಯ ತಯಾರಿಯಲ್ಲಿ ನಿಕಟವಾಗಿ ಪಾಲ್ಗೊಂಡಿರುವ ಇಸ್ರೇಲ್‌ನ ಉನ್ನತ ಅಧಿಕಾರಿಯೊಬ್ಬರು ಅಮೆರಿಕದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿರುವಂತೆ – “ಯಾರೂ ತುಟಿ ಬಿಚ್ಚದೆ ಇದ್ದರೂ ಈ ವೇದಿಕೆ, ಯೋಜನೆಯ ಗುರಿ ಚೀನವೇ’.

– ಗಮನಾರ್ಹ ವಿಷಯ ಎಂದರೆ ಈ ಯೋಜನೆಯನ್ನು ಐ2ಯು2 ವೇದಿಕೆಯ ಸಭೆಗಳಲ್ಲಿ ಮೊದಲ ಬಾರಿಗೆ ಪ್ರಸ್ತಾವಿಸಿದ್ದು ಇಸ್ರೇಲ್‌.
– ಇಂತಹ ಬೃಹತ್‌ ಯೋಜನೆಗಳ, ವಿಶೇಷವಾಗಿ ರೈಲ್ವೇ ಯೋಜನೆಗಳ ಅನುಷ್ಠಾನದಲ್ಲಿ ಭಾರತಕ್ಕೆ ಇರುವ ಸಾಮರ್ಥ್ಯವನ್ನು ಬಳಸಲು ತೀರ್ಮಾನ.

ಚಾರು

ಟಾಪ್ ನ್ಯೂಸ್

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.