National Highway ವಾಹನಗಳ ವೇಗ ನಿಯಂತ್ರಣಕ್ಕೆ ಲೇಸರ್ ಟ್ರ್ಯಾಕ್ ಅಳವಡಿಕೆ
Team Udayavani, Jul 7, 2024, 6:44 PM IST
ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಸಮೀಪ ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ವಾಹನಗಳ ವೇಗ ನಿಯಂತ್ರಿತ ಲೇಸರ್ ಟ್ರ್ಯಾಕ್ ಅಳವಡಿಸಲಾಗಿದ್ದು ಈ ಮೂಲಕ ವೇಗವಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ನಿಯಂತ್ರಿಸುವ ಕಾರ್ಯವನ್ನು ಪೊಲೀಸರು ಪ್ರಾರಂಭಿಸಿದ್ದಾರೆ.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ವೇಗ ನಿಯಂತ್ರಕ ಫಲಕ ಹಾಕಲಾಗಿದ್ದು, 50 ಕಿಲೋಮೀಟರ್ ಮಿತಿ ನಿಗದಿಪಡಿಸಲಾಗಿದೆ ಇದರ ಅನ್ವಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗವನ್ನು ತೆಕ್ಕಲಕೋಟೆ ಪೊಲೀಸ್‌ಠಾಣೆ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದು, ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಹೆದ್ದಾರಿಯಲ್ಲಿ ಸಂಚರಿಸಿದ 27 ವಾಹನಗಳ ಮಾಲೀಕರಿಗೆ ದಂಡವನ್ನು ತೆಕ್ಕಲಕೋಟೆ ಪೊಲೀಸರು ವಿಧಿಸಿದ್ದಾರೆ.
ಸ್ಪೀಡ್ ಲೇಸರ್ ಟ್ರ‍್ಯಾಕ್ ಮೂಲಕ ವಾಹನಗಳ ವೇಗ ನಿಯಂತ್ರಣದ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಅಜಾಗೃತಿ ಮತ್ತು ಅತಿ ವೇಗದಿಂದ ವಾಹನ ಚಲಾಯಿಸುವವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಿ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಲಾಗಿದೆ ಎಂದು ಪಿ.ಎಸ್.ಐ. ಶಾಂತಮೂರ್ತಿ ತಿಳಿಸಿದ್ದಾರೆ.
ಎ.ಎಸ್.ಐ. ಎಸ್ ಮಲ್ಲಯ್ಯ, ಪೇದೆಗಳಾದ ಮಂಜುನಾಥ, ಮಣಿಕಂಠ, ಲಿಂಗಾರೆಡ್ಡಿ, ರಸೂಲ್ ಸಾಬ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Karkala: ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ಶಂಕೆ… ಎಎನ್ಎಫ್‌ನಿಂದ ಕೂಂಬಿಂಗ್ ಆಪರೇಷನ್
Kamal Haasan: ʼಥಗ್ ಲೈಫ್ʼ ರಿಲೀಸ್ ಡೇಟ್ ಅನೌನ್ಸ್; ಬರ್ತ್ ಡೇಗೆ ಟೀಸರ್ ಗಿಫ್ಟ್
Trump: ಗುಜರಾತ್ ಮೂಲದ ಪಟೇಲ್ CIA ನೂತನ ಮುಖ್ಯಸ್ಥ: ಡೊನಾಲ್ಡ್ ಟ್ರಂಪ್ ಒಲವು
Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ
Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.