ಆಯುಷ್‌ಪ್ರದ ಆಮಲಕೀ ಏಕಾದಶಿ ಮಹತ್ವ !
Team Udayavani, Mar 25, 2021, 6:30 AM IST
ಸಾಮಾನ್ಯವಾಗಿ ಏಕಾದಶಿ ದಿವಸವನ್ನು ವ್ರತ ಅಥವಾ ಉಪವಾಸ ಪೂರ್ವಕ ಆಚರಿಸುವವರು ಕೆಲವರಾದರೆ, ಅದರ ಹೆಸರನ್ನಾದರೂ ಕೇಳದವರು ಕಡಿಮೆ. ಏಕಾದಶಿ ವ್ರತ ಹಲವು. ಆಮಲಕೀ, ಜಯ, ನಿರ್ಜಲ, ರಮ, ಷಟಿ¤ಲ, ಅಪರ, ಮೋಕ್ಷದಾ, ಪರಮ ಮತ್ತು ಸಫಲ ಏಕಾದಶಿ. ಪಾಲ್ಗುಣ ಶುಕ್ಲ, ಏಕಾದಶಿ, ಆಮಲಕೀ ಅಥವಾ ಆಮಲಕ. ಫಲ್ಗುಣ ಶುಕ್ಷ ಏಕಾದಶಿ ಎಂದೂ ಕರೆಯಬಹುದು. ಭಕ್ತರು ಅಂದು ಉಪವಾಸದ ಹೊರತಾಗಿ ಆಮಲಕ, ನೆಲ್ಲಿ ಮರವನ್ನು ಪೂಜಿಸುತ್ತಾರೆ. ಅಂದು ಮಹಾವಿಷ್ಣುವಿನ ವಿಶೇಷ ಸನ್ನಿಧಾನ ಆ ಮರದಲ್ಲಿರುತ್ತದೆ ಎಂಬ ನಂಬಿಕೆ.
ಬ್ರಹ್ಮಾಂಡ ಪುರಾಣದಲ್ಲಿ ಅಮಲಕಿಯ ಉಲ್ಲೇಖ ವಿದೆ. ವಾಲ್ಮೀಕಿಯೂ ವರ್ಣಿಸುತ್ತಾನೆ. ಇದರ ಕುರಿ ತಾದ ಅನೇಕ ಕಥೆಗಳು ಪುರಾಣಗಳಲ್ಲಿವೆ. ಆಮಲಕೀ ಏಕಾದಶಿಯ ಮರುದಿನ ಗೋವಿಂದ ದ್ವಾದಶಿ! ಅಂದು ಆಮಲಕೀ ಮರದಲ್ಲಿ ಲಕ್ಷ್ಮೀ ಸನ್ನಿಧಾನವೂ ಇರುತ್ತದೆ. ಕೃಷ್ಣ-ರಾಧೆ ನೆಲೆಸುತ್ತಾರೆ ಎಂಬ ನಂಬಿಕೆಯೂ ಇದೆ. ಮುಖ್ಯವಾಗಿ ಆರೋಗ್ಯ ಮತ್ತು ಸಂಪತ್ತನ್ನು ಗಳಿಸಲು ಆಮಲಕೀ ವೃಕ್ಷವನ್ನು ಪೂಜಿಸುತ್ತಾರೆ.
ಅಮಲಕಿಯ ವ್ರತ ಕಥೆ: ರಾಜಾ ಚಿತ್ರಸೇನ ಆಮಲಕೀ ಏಕಾದಶೀ ವ್ರತವನ್ನು ಆಚರಿಸಿದ್ದರ ಫಲ ವಾಗಿ ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ ಅವನನ್ನು ಸೆರೆಹಿಡಿದಿದ್ದ ರಾಕ್ಷಸರು, ರಾಜನ ದೇಹದಿಂದ ಹೊರಟ ಒಂದು ದಿವ್ಯ ಪ್ರಭೆಯಿಂದಾಗಿ ಮೂರ್ಛೆಹೋದ ಪ್ರಸಂಗ. ಬ್ರಹ್ಮಾಂಡ ಪುರಾಣದ ವಸಿಷ್ಠ ಮಹರ್ಷಿಗಳು ಹೇಳುವ ಒಂದು ಕಥೆಯಂತೆ ವಿಧಿಶಾದ ರಾಜ ಚೈತ್ರರಥ ಆಮಲಕ ಏಕಾದಶಿ ವ್ರತವನ್ನಾಚರಿಸಿ, ಪರಶುರಾಮ ದೇವರನ್ನು ಪೂಜಿಸುತ್ತಿದ್ದಾಗ ಅಲ್ಲಿಗೆ ಆಗಮಿಸಿದ ಬೇಡನೊಬ್ಬನೂ ಶ್ರದ್ಧಾ ಭಕಿಯಿಂದ ವ್ರತವನ್ನಾಚರಿಸಿ, ತನ್ನ ಪುನಃರ್ಜನ್ಮದಲ್ಲಿ ರಾಜಾ ವಸುರಥನಾಗಿ ಜನಿಸಿದ. ಚಿತ್ರಸೇನನ ಕಥೆಯಂತೆ ವಸುರಥನೂ ಬೇಟೆಯ ಸಂದರ್ಭದಲ್ಲಿ ಶತ್ರುಗಳಿಂದ ಪಾರಾದ. ವಸುರಥ ತನ್ನ ಪೂರ್ವಜನ್ಮದಲ್ಲಿ ಅಮಲಕಿ ವ್ರತವನ್ನು ಆಚರಿಸಿದ್ದ.
ಆಮಲಕೀ ಔಷಧೀಯ ಮಹತ್ವ: ವಿಶೇಷ ವಾಗಿ ಆಮಲಕೀಯನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ವಿಟಮಿನ್ ಸಿ ಒಳಗೊಂಡಿರುವ ಅದರಲ್ಲಿ ಉತ್ತಮ ಔಷಧೀಯ ಗುಣವಿದೆ. ಸೃಷ್ಟಿಯಲ್ಲಿ ಮೊತ್ತಮೊದಲ ಮರ ಎಂದರೆ ಆಮಲಕೀ ಮರ ಎಂದು ಹೇಳಲಾಗುತ್ತದೆ. ಇದರ ವಿಶಿಷ್ಟ ಔಷಧೀಯ ಮಹತ್ವದಿಂದಾಗಿ, ಇದರ ಉಲ್ಲೇಖಗಳನ್ನು ವೇದಗಳು, ಶಿವಪುರಾಣ, ಸ್ಕಂದಪುರಾಣ, ಪದ್ಮಪುರಾಣ, ರಾಮಾಯಣ, ಕಾದಂಬರಿ, ಚರಕ ಸಂಹಿತಾ, ಶುಶ್ರುತ ಸಂಹಿತಾಗಳಲ್ಲಿ ಕಾಣಬಹುದು. ಇದರಲ್ಲಿನ ಹಣ್ಣು ಅಮೃತ ಫಲ ಎಂದು ಪ್ರಸಿದ್ಧಿ. ಆ್ಯಂಟಿ ಏಜಿಯಿಂಗ್ ಔಷಧ ತಯಾರಿಯಲ್ಲಿ ಆಮಲಕೀ ಪ್ರಮುಖವಾಗಿದೆ.
ಅದು ಜೀವಕೋಶವನ್ನು ಯೌವನವಾಗಿರಿಸುವ ಅತ್ಯುತ್ತಮ ಗಿಡಮೂಲಿಕೆ. ಆ್ಯಂಟಿ ಓಕ್ಸಿಡೆಂಟ್, ವಿಟಮಿನ್ ಸಿ, ಟ್ಯಾನಿನ್, ಮತ್ತು ಗ್ಯಾಲಿಕ್ ಆಮ್ಲದಿಂದೊಡಗೂಡಿದ ಪುಷ್ಟಿಯುಕ್ತ ಔಷಧ. ಅದರಲ್ಲಿ ರಸಾಯನ (ಎಡಾಪ್ರೋಜನಿಕ್) ಅಜರ (ಆ್ಯಂಟಿ ಏಜಿಯಿಂಗ್), ಆಯುಷ್‌ಪ್ರದ (ದೀರ್ಘ ಜೀವಕೋಶ ಆಯುಷ್ಯ) ಸಂಧಣಿಯ (ಜೀವಕೋಶ ಸ್ಥಳಾಂತರ ಇತ್ಯಾದಿ ವೃದ್ಧಿಸುತ್ತದೆ). ಆಮಲಕೀ ಯೌವನಾವಸ್ಥೆಯನ್ನು ಉಳಿಸುತ್ತದೆ. “ಆಮಲಕೀ ವಯಸ್ಥಾಪ್ನನಮಂ ಶ್ರೇಷ್ಠಂ’ ಎನ್ನುತ್ತದೆ ಚರಕ ಸಂಹಿತೆ. ಆಮಲಕೀಯಲ್ಲಿ ಕಡಿಮೆ ತೂಕದ ಹೈಡ್ರೋಲಿಸೆಬಲ್ ಟ್ಯಾನಿನ್ ಪರಮಾಣು ಗುಂಪುಗಳಿವೆ (ಎಂಬ್ಲಿಕ್ಯಾನಿನ್ ಎ ಮತ್ತು ಬಿ). ಆದ್ದರಿಂದ ಅದು ಒಂದು ಶಕ್ತಿಶಾಲೀ ಆ್ಯಂಟಿಆಕ್ಸಿಡೆಂಟ್ ಗಿಡಮೂಲಿಕೆ ಎಂದು ಆಯುರ್ವೇದದಲ್ಲಿ ಪರಿಗಣಿಸ ಲ್ಪಟ್ಟಿದೆ. ಆಮಲಕೀ ಹಣ್ಣು, ಬೀಜ, ಎಲೆ, ಹೂವು ಎಲ್ಲವೂ ಔಷಧೀಯ ಗುಣವನ್ನು ಹೊಂದಿವೆ.
ಆಮಲಕೀ, ಜೀವಕೋಶಕ್ಕೆ ವಯಸ್ಸಾಗುವುದನ್ನು ತಡೆಯುತ್ತದೆ, ಹೃದಯ ಸಂಬಂಧೀ ಕಾಯಿಲೆಯಿಂದ ರಕ್ಷಣೆ ಒದಗಿಸುತ್ತದೆ, ಹೆಪಟೋಟಾಕ್ಸಿಕ್ ನಿಂದ ರಕ್ಷಿಸುತ್ತದೆ, ಕ್ಯಾನ್ಸರ್‌ನಿಂದ ರಕ್ಷಣೆ ಒದಗಿಸುತ್ತದೆ. ಅದು ಇಮ್ಯುನೋಮೋಡ್ಯುಲೇಟರ್. ಸೈಟೋ ಪ್ರೊಟೆಕ್ಟಿವ್, ಕಣ್ಣಿನ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಗ್ಯಾಸ್ಟ್ರಿಕ್, ಪಚನ ಕ್ರಿಯೆ ಸಂಬಂಧೀ ರೋಗಗಳಿಗೆ ಉಪಶಮನಕಾರಿಯಾಗಿದೆ. ಅದು ಆ್ಯಂಟೀ ಇನ್‌ಫ್ಲೇಮೇಟರಿ ಮತ್ತು ಆ್ಯಂಟಿ ಪೈರೆಟಿಕ್. ಆಂಟಿಹೈಪರ್‌ಥೈರಾಯ್ಡ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸುತ್ತದೆ.
ಬ್ಯಾಕ್ಟೀರಿಯಾ ನಾಶಕಾರಿ. ನೆಫೋ› ಮತ್ತು ನ್ಯೂರೋ ಪ್ರೊಟೆಕ್ಟಿವ್. ವಿವಿಧ ಮನೆ ಔಷಧಗಳನ್ನೂ ಆಮಲಕೀಯನ್ನು ಬಳಸಿ ಸೇವಿಸ ಬಹುದು. ಮನುಕುಲದ ಶ್ರೇಯಸ್ಸಿಗೆ, ಒಳಿತಿಗೆ, ನಮ್ಮ ಪ್ರಾಚೀನರು ಆಮಲಕೀಯ ಔಷಧೀಯ ಮಹತ್ವವನ್ನು ಅರಿತೇ ಏಕಾದಶಿಯನ್ನು ಆಮಲಕೀಯ ಹೆಸರಿನಲ್ಲಿ ವ್ರತರೂಪದಲ್ಲಿ ಆಚರಿಸಬೇಕೆಂದು ವಿವಿಧ ಗ್ರಂಥಗಳಲ್ಲಿ ಸಾರಿದ್ದಾರೆ. ಇದರ ಔಷಧೀಯ ಗುಣಗಳನ್ನಾದರೂ ತಿಳಿಯುವ ಪ್ರಯತ್ನ ಮಾಡೋಣ.
– ಜಲಂಚಾರು ರಘುಪತಿ ತಂತ್ರಿ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!
International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?
New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ
ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್
Rewind 2024: ಸರಿದ 2024ರ ಪ್ರಮುಖ 24 ಹೆಜ್ಜೆ ಗುರುತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.