2017ರಲ್ಲೇ ಕಪಾಲ ಬೆಟ್ಟ ಉಳಿವಿಗೆ ನಡೆದಿತ್ತು ಯತ್ನ
Team Udayavani, Dec 28, 2019, 3:10 AM IST
ರಾಮನಗರ: ಜಿಲ್ಲೆಯ ಕನಕಪುರ ತಾಲೂಕು ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ಏಸು ಕ್ರಿಸ್ತನ ಬೃಹತ್ ಏಕಶಿಲಾ ವಿಗ್ರಹ ಸ್ಥಾಪನೆಯ ವಿಚಾರ ಇಡೀ ಜಿಲ್ಲೆಯಲ್ಲಿ ಪರ-ವಿರೋಧ ಚರ್ಚೆಗಳಿಗೆ ಗ್ರಾಸವಾಗಿದ್ದು, 2017ರಿಂದಲೇ ಈ ಬೆಟ್ಟದ ಉಳಿವಿಗಾಗಿ ಹೋರಾಟ ನಡೆಯುತ್ತಿತ್ತು.
ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿ, ನಲ್ಲಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 283ರಲ್ಲಿ 10 ಎಕರೆ ಸರ್ಕಾರಿ ಗೋಮಾಳದ ಜಮೀನಿನಲ್ಲಿ ಈ ಏಕಶಿಲಾ ಮೂರ್ತಿ ತಲೆ ಎತ್ತಲಿದೆ. ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ಈ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ. ಡಿ.25ರಂದು 114 ಅಡಿ ಎತ್ತರದ ಏಸುಕ್ರಿಸ್ತನ ಮೂರ್ತಿ ಸ್ಥಾಪನೆಗೆ ಮಾಜಿ ಸಚಿವ ಡಿ.ಕೆ.ಶಿವಕುಮರ್ ಚಾಲನೆ ನೀಡಿದ್ದಾರೆ. ತಮ್ಮ ಸ್ವಂತ ಹಣದಿಂದಲೇ ಭೂಮಿಗೆ ಸರ್ಕಾರ ನಿರ್ಧರಿಸಿದ ಮೊತ್ತವನ್ನು ಪಾವತಿಸಿದ್ದಾರೆ.
ಎಲ್ಲಿದೆ ಈ ಬೆಟ್ಟ?: ರಾಮನಗರ ಜಿಲ್ಲೆಯ ಕನಕಪುರ ನಗರದಿಂದ ಸುಮಾರು 17 ಕಿ.ಮೀ. ದೂರದಲ್ಲಿ ಉಯ್ಯಂಬಳ್ಳಿ ಹೋಬಳಿ ಹಾರೋಬೆಲೆ ಗ್ರಾಮದ ಬಳಿ ಈ ಬೆಟ್ಟವಿದೆ. ಗ್ರಾಮದಿಂದ ಕೇವಲ 2 ಕಿ.ಮೀ. ಕ್ರಮಿಸಿದರೆ ಹಾರೋಬೆಲೆ ಜಲಾಶಯ ಸಿಗುತ್ತದೆ. ಹಾರೋಬಲೆ ಜಲಾಶಯ ಮತ್ತು ಹಾರೋಬಲೆ ಗ್ರಾಮದ ನಡುವೆ ಪ್ರಸ್ತಾಪಿತ ಬೆಟ್ಟವಿದೆ. ಹಾರೋಬೆಲೆ ಗ್ರಾಮ, ತಮಿಳುನಾಡಿನ ಗಡಿಗೆ ಹೊಂದಿಕೊಂಡ ಪ್ರದೇಶ. ಸದರಿ ಬೆಟ್ಟಕ್ಕೆ ಮುನೀಶ್ವರನ ಬೆಟ್ಟ ಎಂಬ ಹೆಸರೂ ಇದೇ ಎನ್ನುತ್ತಾರೆ ಕೆಲವರು.
ನಲ್ಲಹಳ್ಳಿ ಗ್ರಾಮದ ಸರ್ವೇ ಸಂಖ್ಯೆ 283ರಲ್ಲಿ ಪಹಣಿ ಪ್ರಕಾರ 231.35 ಎಕರೆ ಜಮೀನು ಗೋಮಾಳ ವರ್ಗೀಕರಣದಲ್ಲಿದೆ. ವಿವಿಧ ಉದ್ದೇಶಗಳಿಗೆ ಭೂಮಿ ವಿಲೇವಾರಿ ಆಗಿದ್ದು, 209.22 ಎಕರೆ ಭೂಮಿ ಮಾತ್ರ ಲಭ್ಯವಿದೆ. ಈ ಭಾಗದಲ್ಲಿ 1,828 ಜಾನುವಾರುಗಳಿದ್ದು, ನಿಯಮಾನುಸಾರ 548 ಎಕರೆ ಗೋಮಾಳ ಜಮೀನನ್ನು ಕಾಯ್ದಿರಿಸಬೇಕಾಗಿತ್ತು. ಆದರೆ, ಸರ್ಕಾರ ಅಕ್ಕಪಕ್ಕದ ಸರ್ವೇ ಸಂಖ್ಯೆಗಳಲ್ಲಿನ ಗೋಮಾಳವನ್ನು ಪರಿಗಣಿಸಿ ಒಟ್ಟು 1,219 ಎಕರೆ ಗೋಮಾಳ ಲಭ್ಯವಿದೆ. ಹೀಗಾಗಿ, ನಿಯಮಾನುಸಾರ ಜಾನುವಾರುಗಳ ಮೇವಿಗೆ ತೊಂದರೆ ಆಗುವುದಿಲ್ಲ ಎಂದು ಕನಕಪುರ ತಹಸೀಲ್ದಾರರು ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಅಲ್ಲದೆ, ತಹಸೀಲ್ದಾರರು ತಮ್ಮ ವರದಿಯಲ್ಲಿ ನಲ್ಲಹಳ್ಳಿ -ಹಾರೋಬಲೆ ಗ್ರಾಮಗಳಿಗೆ ಹೊಂದಿ ಕೊಂಡಿರುವ ಬೆಟ್ಟದ ಮೇಲ್ಭಾಗದಲ್ಲಿ ಪುರಾತನ ಏಸು ಕ್ರಿಸ್ತನ ವಿಗ್ರಹ ಇದೆ ಎಂಬುದಾಗಿಯೂ ತಿಳಿಸಿದ್ದಾರೆ. ತಹಸೀಲ್ದಾರರ ವರದಿಯನ್ನು ಆಧರಿಸಿ ಸರ್ಕಾರ ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ಲಭ್ಯವಿರುವ ಭೂಮಿಯ ಪೈಕಿ 10 ಎಕರೆಯನ್ನು ಮಂಜೂರು ಮಾಡಿದೆ. ಟ್ರಸ್ಟ್‌ನ ಮನವಿ ಮತ್ತು ಜಿಲ್ಲಾಡಳಿತದ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಸರ್ಕಾರ 26.2.2018ರಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 97(4)ರಡಿ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಸದರಿ ಜಮೀನಿನ ಮಾರ್ಗಸೂಚಿ ಬೆಲೆಯ ಶೇ.10ರಷ್ಟನ್ನು ವಿಧಿಸಿ ಭೂಮಿಯನ್ನು ಮಂಜೂರು ಮಾಡಿದೆ. ಸದರಿ ಆದೇಶಕ್ಕೆ ರಾಜ್ಯಪಾಲರು ಸಹ 23.7.2019ರಲ್ಲಿ ಅಂಕಿತ ಹಾಕಿದ್ದಾರೆ.
ಪ್ರಸ್ತಾವನೆಯ ಪರಿಶೀಲನೆಯ ವೇಳೆ ಗೋಮಾಳ ಜಮೀನಿಗೆ ಪ್ರಚಲಿತ ಮಾರ್ಗಸೂಚಿ ಬೆಲೆಯ ಶೇ.10ರಷ್ಟು ಹಾಗೂ ನಿಯಮಾನುಸಾರ ಭೂ ಪರಿವರ್ತನಾ ಶುಲ್ಕ ಮತ್ತು ಪೋಡಿ ಶುಲ್ಕ ಒಟ್ಟಾರೆ 22,96,865 ರೂ.ಮೊತ್ತಕ್ಕೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ಕೊಡಲು ಸರ್ಕಾರ ನಿರ್ಧರಿಸಿತ್ತು. ನಂತರ, ಟ್ರಸ್ಟ್‌ನವರು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಸರ್ಕಾರ, 10,80,065 ರೂ.ಮೊತ್ತವನ್ನು 2019ರ ನವೆಂಬರ್ 13ರಂದು ಡಿಡಿ ಮೂಲಕ ಪಾವತಿಸಿಕೊಂಡು ಷರತ್ತುಗಳನ್ನು ವಿಧಿಸಿ ಟ್ರಸ್ಟ್‌ಗೆ ವಹಿಸಿಕೊಟ್ಟಿದೆ. ಸದರಿ ಮೊತ್ತವನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಸ್ವಂತ ಹಣದಲ್ಲಿ ಪಾವತಿಸಿದ್ದಾರೆ ಎಂದು ಸ್ವತ: ಡಿ.ಕೆ.ಶಿವಕುಮಾರ್ ಅವರೇ ತಿಳಿಸಿದ್ದಾರೆ.
2017ರಲ್ಲಿ ವಿರೋಧ: ಹಾರೋಬೆಲೆ ಗ್ರಾಮದಲ್ಲಿ ರುವ ಬಹುತೇಕ ಕುಟುಂಬಗಳು ಮತಾಂತರವಾದ ಕ್ರೈಸ್ತ ಕುಟುಂಬಗಳು ಎಂದು ಹೇಳಲಾಗಿದ್ದು, ಹಲ ವಾರು ವರ್ಷಗಳಿಂದ ಕಪಾಲ ಬೆಟ್ಟದಲ್ಲಿ ಪ್ರಾರ್ಥನೆ ಇತ್ಯಾದಿ ಮಾಡಿಕೊಂಡು ಬರುತ್ತಿದ್ದಾಗಿ ತಿಳಿದು ಬಂದಿದೆ. ಇಲ್ಲಿ ಕ್ರಿಸ್ತನ ವಿಗ್ರಹ ಸ್ಥಾಪನೆಯ ವಿಚಾರ ತಾಲೂಕಿನ ಜನರಿಗೆ ಗೊತ್ತಾದ ನಂತರ 2017ರಲ್ಲೇ ಕೆಲವರು ತಹಸೀಲ್ದಾರರಿಗೆ ಮನವಿ ಮಾಡಿ, ಕಪಾಲ ಬೆಟ್ಟವನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮುನೀಶ್ವರ ಬೆಟ್ಟ: ಏಸು ಕ್ರಿಸ್ತನ ವಿಗ್ರಹ ಸ್ಥಾಪನೆ ಕಾಮಗಾರಿಗೆ ಚಾಲನೆ ಸಿಕ್ಕ ನಂತರ ಕಪಾಲ ಬೆಟ್ಟದ ವಿವಾದ ಭುಗಿಲೆದ್ದಿದೆ. ಈ ಬೆಟ್ಟಕ್ಕೆ ಮುನೀಶ್ವರನ ಬೆಟ್ಟ ಅಂತಲೂ ಕರೆಯುವ ವಾಡಿಕೆ ಇದೆ. ಕಪಾಲ ಎಂಬುದು ಶಿವನ ಇನ್ನೊಂದು ಹೆಸರು ಎಂದು ಸುತ್ತಮುತ್ತಲ ಗ್ರಾಮದ ನಿವಾಸಿಗಳು ಹೇಳುತ್ತಾರೆ. ಬೆಟ್ಟದ ಸುತ್ತಮುತ್ತ ಇನ್ನೂ ಹಲವು ಗ್ರಾಮಗಳಿದ್ದು, ಬೆಟ್ಟದ ತಪ್ಪಲಿನ ರೈತರು ವಾರ್ಷಿಕ ಬೆಳೆ ಬೆಳೆದ ನಂತರ ಕಟಾವು ಮಾಡಿದ ಬೆಳೆಯನ್ನು ಜಮೀನಿನಿಂದ ಕೊಂಡೊಯ್ಯವ ಮುನ್ನ ಮುನಿ ಮಾಡಿ (ಮುನಿ ಅಂದರೆ ಬೆಳೆಯ ಕೆಲವು ಭಾಗವನ್ನು ಈಶ್ವರನಿಗೆ ಅರ್ಪಿಸುವುದು) ತೆಗೆದುಕೊಂಡು ಹೋಗುತ್ತಾರೆ. ಈ ಕಾರಣ ಬೆಟ್ಟಕ್ಕೆ ಮುನೀಶ್ವರನ ಬೆಟ್ಟ ಅಂತಲೂ ಹೆಸರಿದೆ. ಆದರೆ, ಇಲ್ಲಿ ದೇವಾಲಯವೇನೂ ಇಲ್ಲ. ಬೆಟ್ಟವನ್ನೇ ಈಶ್ವರನೆಂದು ಪ್ರಾರ್ಥಿಸುವುದು ಈ ಭಾಗದ ರೈತರ ವಾಡಿಕೆ ಎನ್ನುತ್ತಾರೆ ಸ್ಥಳೀಯರು.
ಏಸು ಬೆಟ್ಟ ಅಂತಲೇ ಪರಿಚಯ – ಇನಾಸಪ್ಪ: “ಉದಯವಾಣಿ’ ಜೊತೆ ಮಾತನಾಡಿದ ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ದಿ ಟ್ರಸ್ಟ್‌ನ ಅಧ್ಯಕ್ಷ ಇನಾಸಪ್ಪ, ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ್ದು, ಜೆರುಸಲೇಮ್ ಬಳಿಯ ಗೋಲ್‌ಗೊತ ಎಂಬ ಸ್ಥಳದಲ್ಲಿ. ಗೋಲ್‌ಗೊತ ಎಂದರೆ (ಪ್ಲೇಸ್ ಆಫ್ ಸ್ಕಲ್) ತಲೆಬುರುಡೆ ಸ್ಥಳ ಅಂತ. ಹಾರೋಬೆಲೆ ಗ್ರಾಮದಲ್ಲಿ ಹಾಲಿ ಇರುವ ಕ್ರಿಸ್ತ ಸಮುದಾಯದ್ದು ಮೂರು ಅಥವಾ ನಾಲ್ಕನೇ ತಲೆಮಾರು.
ತಮ್ಮ ಹಿರಿಯರ ಕಾಲದಲ್ಲೇ ಗ್ರಾಮದ ಬಳಿಯ ಬೆಟ್ಟಕ್ಕೆ ಕಪಾಲ ಬೆಟ್ಟ ಅಂತ ನಾಮಕರಣ ಮಾಡಿ ಅಲ್ಲಿ ಶಿಲುಬೆಯೊಂದನ್ನು ಸ್ಥಾಪಿಸಿ, ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಸುತ್ತಮುತ್ತ ವಾಸಿಸುವ ಅನ್ಯಧರ್ಮೀಯರಿಗೆ ಈ ಬೆಟ್ಟ ಏಸು ಬೆಟ್ಟ ಅಂತಲೇ ಪರಿಚಯ. ಬೆಟ್ಟದಲ್ಲಿನ ಶಿಲುಬೆಗೆ ಕ್ರೈಸ್ತರೊಂದಿಗೆ ಹಿಂದೂಗಳು, ಮುಸಲ್ಮಾನರು ಸಹ ಭೇಟಿ ಕೊಟ್ಟು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಭುವನ್ನು ಪ್ರಾರ್ಥಿಸುವುದು ವಾಡಿಕೆ. ಬೆಟ್ಟದಲ್ಲಿ ಏಸುಕ್ರಿಸ್ತರ ಪ್ರತಿಮೆ ಸ್ಥಾಪನೆಗೆ 2 ವರ್ಷಗಳ ಹಿಂದೆಯೇ ಪ್ರಯತ್ನಗಳು ನಡೆದಿವೆ. ಏಕಾಏಕಿ ಸೃಷ್ಟಿಯಾಗಿಲ್ಲ ಎಂದರು.
ಶ್ರೀಗಳು ಬುದ್ಧಿವಾದ ಹೇಳಬೇಕು – ಯತ್ನಾಳ್: ಕಪಾಲಿ ಬೆಟ್ಟದಲ್ಲಿ ಜಗತ್ತಿನಲ್ಲೇ ಅತಿ ಎತ್ತರದ ಯೇಸುಕ್ರಿಸ್ತನ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಮುಂದಾಗುತ್ತಿರುವ ಡಿ.ಕೆ.ಶಿವಕುಮಾರ್‌ಗೆ ಆದಿಚುಂಚನಗಿರಿ ಶ್ರೀಗಳು ಬುದ್ಧಿವಾದ ಹೇಳಬೇಕು. ಅವರು ಅತಿ ಎತ್ತರದ ಕಾಲಭೈರವನಾಥನ ಪ್ರತಿಮೆ ನಿರ್ಮಿಸಿದರೆ ಗೌರವ ಬರುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಧಾನಸೌಧದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯ್ ಪಟೇಲರ ಪ್ರತಿಮೆ ನಿರ್ಮಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಶ್ರೀರಾಮನ ಪ್ರತಿಮೆ ನಿರ್ಮಿಸುತ್ತಿದ್ದಾರೆ. ನಮ್ಮ ಸಂಸ್ಕೃತಿ, ಸಮುದಾಯಕ್ಕೆ ಸಂಬಂಧಪಟ್ಟದ್ದನ್ನು ಮಾಡುವುದನ್ನು ಬಿಟ್ಟು ಕೇವಲ ಸೋನಿಯಾ ಗಾಂಧಿಯವರನ್ನು ಖುಷಿಪಡಿಸಲು ಕಾಂಗ್ರೆಸ್‌ನವರು ನಿರಂತರವಾಗಿ ಈ ರೀತಿ ನಡೆದುಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಕಾಂಗ್ರೆಸ್‌ನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದನ್ನು ಕಂಡಿದ್ದೇವೆ. ಈ ರೀತಿಯ ಕೆಟ್ಟ ಸಂಸ್ಕೃತಿಯನ್ನು ಕಾಂಗ್ರೆಸ್‌ನವರು ದೇಶದಲ್ಲಿ ತರುತ್ತಿದ್ದಾರೆ. ಹಾಗಾಗಿ, ಆದಿಚುಂಚನಗಿರಿ ಶ್ರೀಗಳು ಇವರನ್ನೆಲ್ಲಾ ಕರೆದು ಬುದ್ದಿ ಹೇಳಲಿ ಎಂದರು.
ನಾವು ಯಾವುದೇ ಧರ್ಮದ ವಿರುದ್ಧವಾಗಿಲ್ಲ. ಡಿ.ಕೆ.ಶಿವಕುಮಾರ್ ಅವರು ಮಹತ್ವಾಕಾಂಕ್ಷಿ ರಾಜಕಾರಣಿ ಯಾಗಿದ್ದು, ಮುಖ್ಯಮಂತ್ರಿಯಾಗುವ ಪ್ರಯತ್ನದಲ್ಲಿದ್ದಂತಿದೆ. ಅವರು ಮತಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಅವರು ಯೇಸುಕ್ರಿಸ್ತರ ಮೇಲಿನ ಭಕ್ತಿಗಾಗಿ ಪ್ರತಿಮೆ ನಿರ್ಮಿಸುತ್ತಿಲ್ಲ. ಬದಲಿಗೆ ಸೋನಿಯಾ ಗಾಂಧಿಯವರ ಮೇಲಿನ ಭಕ್ತಿ, ಅವರ ಆಶೀರ್ವಾದಕ್ಕಾಗಿ ಈ ಪ್ರಯತ್ನ ನಡೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ವೈಯಕ್ತಿಕ ವಾಗಿ ಗೌರವವಿದೆ. ಅವರು ನಾಡಪ್ರಭು ಕೆಂಪೇಗೌಡರು, ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀಗಳ ಪ್ರತಿಮೆ ಮಾಡಲು ಮುಂದಾಗಿದ್ದರೆ ಒಪ್ಪಬಹುದಿತ್ತೇನೋ. ಆದರೆ, ಈ ರೀತಿಯ ನಾಟಕ ಸರಿಯಲ್ಲ.
-ಎಂ.ಪಿ. ರೇಣುಕಾಚಾರ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅನುಭವಿ ರಾಜಕಾರಣಿ. ಯಾವ ಭೂಮಿ ಖರೀದಿಸಬಹುದು, ಯಾವುದನ್ನು ಖರೀದಿಸಲಾಗದು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಮಾಧ್ಯಮಗಳಲ್ಲಿ ವರದಿಯಾದಂತೆ ಸ್ವಂತ ಖರ್ಚಿನಲ್ಲಿ ಇದನ್ನು ನಿರ್ಮಿಸುವುದಾಗಿ ಅವರು ಹೇಳಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಆದರೆ, ಯಾವ ಹಿನ್ನೆಲೆಯಲ್ಲಿ ಕಪಾಲಿ ಬೆಟ್ಟದಲ್ಲಿ ಈ ರೀತಿ ಮಾಡಲು ಹೊರಟಿದ್ದಾರೆ ಎಂಬುದು ಗೊತ್ತಿಲ್ಲ. ಸಂಬಂಧಪಟ್ಟವರಿಗೆ ತಾವು ಜಾತ್ಯಾತೀತವಾದಿ ಎಂಬ ಸಂದೇಶ ನೀಡುತ್ತಿದ್ದಾರೋ, ಏನೋ ಗೊತ್ತಿಲ್ಲ. ಕಪಾಲಿ ಬೆಟ್ಟದಲ್ಲಿ ಈ ರೀತಿಯ ಚಟುವಟಿಕೆ ಸರಿಯಲ್ಲ ಎಂದು ಸಾಕಷ್ಟು ವಿರೋಧ, ಆಕ್ಷೇಪ ವ್ಯಕ್ತವಾಗುತ್ತಿದೆ.
-ಎಸ್.ಸುರೇಶ್ ಕುಮಾರ್, ಸಚಿವ
* ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.