Mangaluru ಕುಳಾಯಿಯಲ್ಲಿ ಇಸ್ಕಾನ್ ಶ್ರೀ ರಾಧಾ ಗೋವಿಂದ ಮಂದಿರ ಲೋಕಾರ್ಪಣೆ
Team Udayavani, Aug 21, 2024, 12:27 AM IST
ಕುಳಾಯಿ: ಭಕ್ತಿ ವೇದಾಂತ ಶ್ರೀಲ ಪ್ರಭುಪಾದರಿಂದ ಸ್ಥಾಪಿಸಿರುವ ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ವತಿಯಿಂದ ಮಂಗಳೂರಿನ ಕುಳಾಯಿಯಲ್ಲಿ 25 ಕೋ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶ್ರೀ ರಾಧಾ ಗೋವಿಂದ ಮಂದಿರವು ಸೋಮವಾರ ಲೋಕಾರ್ಪಣೆಗೊಂಡಿದೆ.
ನೂತನ ದೇವಾಲಯದಲ್ಲಿ ಶ್ರೀ ರಾಧಾ ಗೋವಿಂದ ಮತ್ತು ಇಸ್ಕಾನ್ ಸಂಸ್ಥಾಪಕಾಚಾರ್ಯ ಶ್ರೀಲ ಪ್ರಭುಪಾದರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ ಮಂಗಳಾರತಿ ಅನಂತರ ಅಭಿಷೇಕ ಮತ್ತು ದೀûಾ ಹೋಮ ನೆರವೇರಿತು. ಇಸ್ಕಾನ್ ಸನ್ಯಾಸಿ, ಗುರು ಮತ್ತು ಜಿಬಿಸಿ ಜಯಪಾತಕ ಸ್ವಾಮಿ ಮಹಾರಾಜರು ವರ್ಚುವಲ್ ಮೂಲಕ ಭೇಟಿ ಮಾಡಿದರು. ಮಧ್ಯಾಹ್ನ ಅನ್ನಪ್ರಸಾದ ವಿತರಣೆ ಜರಗಿತು.
ಶಾಸಕ ಡಾ| ವೈ. ಭರತ್ ಶೆಟ್ಟಿ, ಇಸ್ಕಾನ್ ಸನ್ಯಾಸಿ ಭಕ್ತಿ ಪ್ರಚಾರ್ ಪರಿವ್ರಾಜಕ ಸ್ವಾಮಿ ಮಹಾರಾಜ್, ಇಸ್ಕಾನ್ ಪರೀûಾ ಮಂಡಳಿ ಅಧ್ಯಕ್ಷ ಅತುಲ್ ಕೃಷ್ಣ ದಾಸ್, ಶ್ರೀಲ ಪ್ರಭುಪಾದರ ಹಿರಿಯ ಶಿಷ್ಯರು ಮತ್ತು ಪ್ರಚಾರಕ ಜೀವನಾಥ್ ದಾಸ್, ಇಸ್ಕಾನ್ ಚೆನ್ನೈ ಅಧ್ಯಕ್ಷೆ ಸುಮಿತ್ರಾ ಕೃಷ್ಣ ದಾಸ್, ಗಣ್ಯರು, ಕೃಷ್ಣ ಭಕ್ತರು ಉಪಸ್ಥಿತರಿದ್ದರು.
ವಿಶೇಷತೆಗಳು
ಜಗತ್ತಿನಾದ್ಯಂತವಿರುವ ಭಕ್ತರಿಗೆ ವಸತಿ ತರಬೇತಿ ಶಿಕ್ಷಣ (ಆಫ್ಲೈನ್ ಭಗವದ್ಗೀತೆ ಕೋರ್ಸ್) ಸಾಂಸ್ಕೃತಿಕ-ಆಧ್ಯಾತ್ಮಿಕ ಕಾರ್ಯಕ್ರಮಗಳು, ಪ್ರತಿದಿನ ಆನ್‌ಲೈನ್ ತರಗತಿಗಳು (ಈ ತರಗತಿಗಳಲ್ಲಿ ಆರಂಭಿಕ, ಮಧ್ಯಾಂತರ ಮತ್ತು ಮುಂದುವರಿದ ಹಂತಗಳು), ವರ್ಣ ಚಿತ್ರ ಗ್ಯಾಲರಿ, ಭಕ್ತರಿಗೆ ಉಚಿತ ಪ್ರಸಾದ ವಿತರಣೆ ವ್ಯವಸ್ಥೆ ಇರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.