Dairy farmers: ಪ್ರೋತ್ಸಾಹಧನ ವಿಳಂಬ- ಹೈನುಗಾರರು ಸಂಕಷ್ಟದಲ್ಲಿ
ಐದು ತಿಂಗಳುಗಳಿಂದ ಬಿಡುಗಡೆಯಾಗಿಲ್ಲ ಪ್ರೋತ್ಸಾಹಧನ
Team Udayavani, Aug 10, 2023, 6:31 AM IST
ಮಂಗಳೂರು: ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ನೀಡಲಾಗುವ 5 ರೂ. ಪ್ರೋತ್ಸಾಹಧನವು ಐದು ತಿಂಗಳಿಂದ ಸರಕಾರ ಬಿಡುಗಡೆ ಮಾಡಿಲ್ಲ.
ರಾಜ್ಯದ ಎಲ್ಲ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಮಾರ್ಚ್ ನಿಂದ ಜುಲೈವರೆಗಿನ ಪ್ರೋತ್ಸಾಹ ಧನ ಇನ್ನೂ ಬಿಡುಗಡೆಯಾಗಿಲ್ಲ. ಪ್ರತಿ ತಿಂಗಳು ಪ್ರೋತ್ಸಾಹಧನ ಬಿಡುಗಡೆಯಾದರೆ ಹೈನುಗಾರರಿಗೆ ಪ್ರಯೋಜನ. 2-3 ತಿಂಗಳಿಗೊಮ್ಮೆ ಬಿಡುಗಡೆಯಾಗುತ್ತಿದ್ದ ಪ್ರೋತ್ಸಾಹ ಧನ ಈ ಬಾರಿ ಅದೂ ಇಲ್ಲ. ಹಣ ಬಿಡುಗಡೆಗೆ ವಿಳಂಬ ಮಾಡಬೇಡಿ ಎಂದು ವಿವಿಧ ಒಕ್ಕೂಟ ಗಳು ಕೆಎಂಎಫ್ ಹಾಗೂ ರಾಜ್ಯ ಸರಕಾರದ ಗಮನ ಸೆಳೆದಿವೆ. ಆದರೂ ಸರಕಾರ ಇನ್ನೂ ಸ್ಪಂದಿಸಿಲ್ಲ.
ಪಶು ಆಹಾರ ದುಬಾರಿ
ಹೈನುಗಾರರೊಬ್ಬರು “ಉದಯವಾಣಿ” ಜತೆಗೆ ಮಾತ ನಾಡಿ, “ಪ್ರತಿ ತಿಂಗಳ ಬದಲು ಹಿಂದೆ 2-3 ತಿಂಗಳಿ ಗೊಮ್ಮೆ ಹಣ ಬಿಡುಗಡೆ ಆಗುತ್ತಿತ್ತು. ಆದರೆ ಈ ಬಾರಿ 5 ತಿಂಗಳಾದರೂ ಸಿಕ್ಕಿಲ್ಲ. ಹಾಲು ಉತ್ಪಾದನೆಯೇ ಕಡಿಮೆ ಆಗಿರುವಾಗ ಪ್ರೋತ್ಸಾಹಧನ ಸಕಾಲದಲ್ಲಿ ಸಿಗದಿದ್ದರೆ ನ್ನಷ್ಟು ಕಷ್ಟ ಎದುರಾಗಲಿದೆ. ಆದ್ದರಿಂದ ತಿಂಗಳಿಗೊಮ್ಮೆ ಪ್ರೋತ್ಸಾಹಧನದ ಮೊತ್ತ ಲಭಿಸಬೇಕು ಎಂದಿದ್ದಾರೆ.
“ಮೊದಲು 2 ರೂ. ಪ್ರೋತ್ಸಾಹಧನ ಸಿಗುತ್ತಿತ್ತು. ಈಗ 5 ರೂ. ಗೇರಿದೆ. ಇದನ್ನು ನಿಯಮಿತ ವಾಗಿ ಬಿಡುಗಡೆ ಮಾಡಿದರೆ ಅನುಕೂಲವಾದೀತು ಎನ್ನುತ್ತಾರೆ ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ.
ಹೆಚ್ಚುವರಿ ಮೊತ್ತ ಖಾತೆಗೆ
ಇತ್ತೀಚೆಗೆ ಹೆಚ್ಚುವರಿಯಾಗಿ ಗ್ರಾಹಕರಿಂದ ಪಡೆದ 3 ರೂ.ಗಳನ್ನು ಒಕ್ಕೂಟದಿಂದ ಆಯಾಯ ಸೊಸೈಟಿಗೆ ನೀಡಲಾಗುತ್ತದೆ. ಸೊಸೈಟಿಯು 10 ದಿನಕ್ಕೊಮ್ಮೆ ಅದನ್ನು ಹೈನುಗಾರರ ಖಾತೆಗೆ ವರ್ಗಾ ಯಿಸುತ್ತದೆ. ಈ ಪ್ರಕ್ರಿಯೆ ಸದ್ಯ ನಡೆಯುತ್ತಿದೆ ಎನ್ನುತ್ತಾರೆ ಒಕ್ಕೂಟದ ಪ್ರಮುಖರು.
ಕರಾವಳಿಗೆ 30 ಕೋ.ರೂ. ಬಾಕಿ!
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 60 ಸಾವಿರ ಹೈನುಗಾರರಿಂದ ಸರಾಸರಿ 4 ಲಕ್ಷ ಲೀ. ಹಾಲು ಲಭ್ಯವಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 396 ಹಾಗೂ ಉಡುಪಿಯಲ್ಲಿ 339 ಸಹಿತ ಒಟ್ಟು 735 ಹಾ. ಉ.ಸ.ಸಂಘಗಳಿವೆ. ದಕ್ಷಿಣ ಕನ್ನಡ ಜಿಲ್ಲಾ ಸ. ಹಾ.ಉತ್ಪಾದಕರ ಒಕ್ಕೂಟ ವ್ಯಾಪ್ತಿಗೆ ಮಾರ್ಚ್ಲ 6.13 ಕೋ.ರೂ., ಎಪ್ರಿಲ್ನ 5.78 ಕೋ.ರೂ., ಮೇ ತಿಂಗಳ 6.12 ಕೋ.ರೂ ಸಹಿತ ಜೂನ್-ಜುಲೈ ತಿಂಗಳ ಪ್ರೋತ್ಸಾಹಧನ ಸೇರಿ ಸುಮಾರು 30 ಕೋ.ರೂ.ಗಳಷ್ಟು ಸರಕಾರದಿಂದ ಬರಬೇಕಿದೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.