Narendra Modi: ಅಪ್ರತಿಮ ಶ್ರಮ ಜೀವಿ..ಹೊಸತನದ ಚಿಂತಕ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರ ವಿಶೇಷ ಲೇಖನ

Team Udayavani, Sep 16, 2023, 11:48 PM IST

modi birthday

ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರು ರವಿವಾರಕ್ಕೆ 72 ವಸಂತಗಳನ್ನು ಪೂರ್ತಿಗೊಳಿಸಿ, 73ಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂದಿನಿಂದ ಅ.2ರ ವರೆಗೆ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿರುವ ಪ್ರಧಾನಿಯವರ ಬಗ್ಗೆ ಅವರ ಜತೆಗೆ ನಿಕಟವಾಗಿ ಕೆಲಸ ಮಾಡುವ ನಮ್ಮವರೇ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರ ಅಭಿಮತ ಇಲ್ಲಿದೆ

ದೇಶದ ಹಿತ, ಅಭಿವೃದ್ದಿ ಎಂದು ಬಂದಾಗ ವಜ್ರದಷ್ಟೇ ಕಠಿನ ನಿಲುವು, ಯಾರಿಗಾದರೂ ನೋವು -ಸಂಕಷ್ಟವೆಂದು ತಿಳಿದಾಗ ಹೂವಿನಷ್ಟೇ ಮೃದು ಮನಸ್ಸು. ಅವರೊಬ್ಬ ದಣಿವರಿಯದ, ಅಪ್ರತಿಮ ಶ್ರಮ ಜೀವಿ. ತಾಳ್ಮೆಯ ಪ್ರತೀಕ, ಹೊಸತನದ ಚಿಂತಕ, ಅತ್ಯು ತ್ತಮ ಮಾರ್ಗದರ್ಶಿ, ಪ್ರಜಾಪ್ರಭುತ್ವದ ಪರಿಪಾಲಕ…ಅವರು ಮತ್ತಾರೂ ಅಲ್ಲ, ರಾಷ್ಟ್ರದ ಜನರ ಪ್ರಧಾನ ಸೇವಕ, ವಿಶ್ವವೇ ಅಚ್ಚರಿಪಡು ವಂತಹ ರೀತಿಯಲ್ಲಿ ಭಾರತದ ವರ್ಚಸ್ಸು ಹೆಚ್ಚಿಸಿದ ಮಹಾನ್‌ ನಾಯಕ ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ಮೋದಿಯವರನ್ನು ದಣಿವರಿಯದ ನಾಯಕ, ಅಪ್ರತಿಮ ಶ್ರಮಜೀವಿ ಎಂದಿರುವುದು ಅವರನ್ನು ಹೊಗಳುವುದಕ್ಕಾಗಿ ಅಲ್ಲ. ಅವರ ವ್ಯಕ್ತಿತ್ವ ಹಾಗೂ ಕಾರ್ಯವಿಧಾನಗಳೇ ಇದನ್ನು ಸಾಕ್ಷೀಕರಿಸುತ್ತವೆ. ಒಮ್ಮೆ ಅವರು ವಿದೇಶದಲ್ಲಿ ನಡೆದ ಜಿ-7 ವಿಶೇಷ ಸಭೆಯಲ್ಲಿ ಭಾಗವಹಿಸಿ ಅಲ್ಲಿಂದ ಬೆಳಗಿನ ಜಾವ ಐದು ಗಂಟೆಗೆ ದೆಹಲಿಗೆ ಆಗಮಿಸಿದ್ದರು. ಅಂದು ಕೇಂದ್ರ ಸಚಿವ ಸಂಪುಟ ಸಭೆ ಇತ್ತು. ಪ್ರಧಾನಿಯವರು ಬೆಳಗಿನ ಜಾವ ಬಂದಿದ್ದು, ವಿಶ್ರಾಂತಿ ಹಿನ್ನೆಲೆಯಲ್ಲಿ ಸಂಪುಟ ಸಭೆ ಬಹುತೇಕ ನಡೆಯದು ಎಂದೇ ನಾವೆಲ್ಲ ಭಾವಿಸಿದ್ದೆವು. ಆದರೆ ಬೆಳಗ್ಗೆ ಹತ್ತು ಗಂಟೆಗೆ ಅವರು ಸಭೆ ನಡೆಸುವ ಬಗ್ಗೆ ಮಾಹಿತಿ ರವಾನಿಸಿದ್ದರು. ಸಚಿವ ಸಂಪುಟ ಸಭೆ ಯಲ್ಲಿ ಸಕ್ರಿಯವಾಗಿ ಭಾಗಿ ಯಾಗಿದ್ದರಲ್ಲದೆ, ಅಂದು ದಿನವಿಡೀ ವಿವಿಧ ಕೆಲಸ-ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು.

ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಜಿ-20 ರಾಷ್ಟ್ರ ಗಳ ಶೃಂಗ ಸಭೆಯಲ್ಲಿ 29 ದೇಶಗಳ ರಾಷ್ಟ್ರಾಧ್ಯಕ್ಷರು, ಪ್ರಧಾನಿ ಗಳು, ವಿಶ್ವಬ್ಯಾಂಕ್‌, ಅಂತಾರಾಷ್ಟ್ರೀಯ ಹಣ ಕಾಸು ಒಕ್ಕೂಟ ಹೀಗೆ 12ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥ ರೊಂದಿಗೆ ನಿರಂತರ ಸಭೆ-ಸಂ ವಾದ- ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮೋದಿಯವರು, ದೇಶದ ವಿವಿಧ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಆಯಾ ರಾಜ್ಯಗಳ ಬಿಜೆಪಿ ಪ್ರಭಾರಿ ಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಅಲ್ಲಿನ ಬೆಳವಣಿಗೆ, ರಾಜಕೀಯ ಸ್ಥಿತಿ, ಪಕ್ಷದ ಸಂಘ ಟನಾತ್ಮಕ ಕಾರ್ಯ ಇತ್ಯಾದಿ ಮಾಹಿತಿಗಳನ್ನು ಸುದೀ ರ್ಘ‌ವಾಗಿ ಪಡೆದುಕೊಂಡಿದ್ದರು.

ಪ್ರಧಾನಿಯವರ ತಾಯಿ ಮೃತಪಟ್ಟಾಗ ಸಂಪುಟದ ಸಹೋದ್ಯೋಗಿಗಳಾಗಲಿ, ಇನ್ನಾರೂ ಅಲ್ಲಿಗೆ ಬರು ವುದು ಬೇಡ ಎಂದು ಸೂಚಿಸಿದ್ದರು. ತಾವು ತೆರಳಿ ತಾಯಿ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡು, ಅನಂತರ ಗುಜರಾತ್‌ನಿಂದ ದಿಲ್ಲಿಗೆ ಹಿಂದಿರುಗಿ ಮತ್ತೆ ತಮ್ಮ ಕಾರ್ಯಗಳಲ್ಲಿ ಮಗ್ನ ರಾಗಿ ದ್ದರು. ಇದೇ ಅಲ್ಲವೇ ಜನರ ಪ್ರಧಾನ ಸೇವಕನ ಕಾಯಕನಿಷ್ಠೆ.

ಒಂದು ಬಾರಿ ಅವರು ಇಂಧನ ವಿಷಯವಾಗಿ ಚರ್ಚಿಸಲು ಸಚಿವರು, ಅಧಿಕಾರಿಗಳ ಸಭೆ ಕರೆದಿದ್ದರು. ಸಂಜೆ ಐದರಿಂದ ರಾತ್ರಿ 9:15 ಗಂಟೆವರೆಗೂ ಸಭೆ ನಡೆ ಯಿತು. ಅಲ್ಲಿಯವರೆಗೂ ತಾಳ್ಮೆಯಿಂದ ಕುಳಿತು ಪ್ರತೀ ಇಲಾಖೆಯ ಮಾಹಿತಿ-ವಿವರಣೆಯನ್ನು ಆಲಿಸಿದ ಅವರು, ಕೊನೆಯ ದಾಗಿ ದೇಶದಲ್ಲಿ ಇಂಧನ ಉತ್ಪಾದನೆ ಹೆಚ್ಚಳ, ಸಮರ್ಪಕ ಬಳಕೆ ನಿಟ್ಟಿನಲ್ಲಿ ಹಲವು ಹೊಸ ಚಿಂತನೆ ಯ ಮಾರ್ಗ ದರ್ಶನ ಮಾಡಿದ್ದರು, ನೂತನ ವಿಚಾರ ಗಳನ್ನು ಪ್ರಸ್ತಾವಿಸಿ ದ್ದರು. ಒಂದು ದೇಶ-ಒಂದು ಗ್ರಿಡ್‌’ ಇದು ಮೋದಿಯವರ ಪರಿಕಲ್ಪನೆಯಾಗಿದೆ.

ಅಂದು ಸಭೆಯಲ್ಲಿ ಪಾಲ್ಗೊಂಡಿದ್ದ ಇಂಧನ ವಿಷಯದಲ್ಲಿ ಡಾಕ್ಟರೆಟ್‌ ಪಡೆದಿದ್ದ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು, ಪ್ರಧಾನಿಯವರು ನೀಡಿದ ಹೊಸ ವಿಚಾರ-ಚಿಂತನೆಗಳನ್ನು ಕೇಳಿ, ಇಂಧನ ವಿಚಾರದಲ್ಲಿ ಸಂಶೋಧನೆ ಮಾಡಿದ ನನಗೂ ಇಂತಹ ವಿಷಯಗಳು ಹೊಳೆದಿರಲಿಲ್ಲ. ಅವರ ಚಿಂತನೆಗಳು ಅತ್ಯದ್ಬುತ ಎಂದಿ ದ್ದರು. ಮೋದಿಯವರು ಯಾವುದೇ ವಿಷಯಗಳಿರಲಿ, ಅಧ್ಯಯನದೊಂದಿಗೆ ಆಗಮಿಸುತ್ತಾರೆ. ಹೇಳುವುದನ್ನು ತಾಳ್ಮೆಯಿಂದ ಕೇಳುತ್ತಾರೆ. ಅನಂತರ ವಿಷಯ ಮಂಡಿಸಿ ದವರೇ ಅಚ್ಚರಿ ಪಡುವ ರೀತಿಯಲ್ಲಿ ಹೊಸ ವಿಚಾ ರಗಳನ್ನು ನೀಡುತ್ತಾರೆ.

ನೋವು-ಸಂಕಷ್ಟಕ್ಕೆ ಸ್ಪಂದಿಸುವ, ತಮ್ಮ ಸಹೋ ದ್ಯೋಗಿಗಳಿಗೆ ಸಮಸ್ಯೆ ಎದುರಾದರೆ ತತ್‌ಕ್ಷಣಕ್ಕೆ ಸ್ಪಂದಿಸುವ ಹೂವಿನಂತಹ ಮನಸ್ಸು ಅವರದ್ದು. ನಾನು ಉತ್ತರಾಖಂಡ ವಿಧಾನಸಭೆ ಚುನಾವಣೆ ಸಂದರ್ಭ ಹೆಲಿಕಾಪ್ಟರ್‌ನಲ್ಲಿ ಸಂಚರಿಸುವಾಗ ನನ್ನ ಆರೋಗ್ಯದಲ್ಲಿ ಸಮಸ್ಯೆ ಎದುರಾಗಿತ್ತು. ವೈದ್ಯರು ಸಿಟಿ ಸ್ಕ್ಯಾನ್‌ಗೆ ಸಲಹೆ ನೀಡಿದ್ದರು. ವಿಷಯ ತಿಳಿದು ಫೋನ್‌ ಮಾಡಿದ ಪ್ರಧಾನಿಯವರು ಹೇಗಿದ್ದೀರಿ ಎಂದು ಆರೋಗ್ಯ ವಿಚಾರಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಸಿಟಿಸ್ಕ್ಯಾನ್‌ ಮಾಡಿಸಿದ್ದೇನೆ. ಸಮಸ್ಯೆ ಇಲ್ಲ ಎಂದಿದ್ದಾರೆ ಎಂದಿದ್ದರೂ ಹರಿದ್ವಾರದಿಂದ ಏಮ್ಸ್‌ನ ತಜ್ಞ ವೈದ್ಯರನ್ನು ನಾನಿರುವ ಕಡೆ ಕಳುಹಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು. ಇದು ಅವರ ಹೂವಿನಂತಹ ಮನಸ್ಸಿಗೆ ಸಾಕ್ಷಿಯಾಗಿದೆ.

ಇನ್ನು ಕೋವಿಡ್‌ ಸಂದರ್ಭ; ಸುಮಾರು ಒಂದೆರಡು ತಿಂಗಳ ಮಗುವಿಗೆ ಸಮಸ್ಯೆಯಾಗಿತ್ತು. ಒಂಟೆಯ ಹಾಲು ಕುಡಿಸಿದರೆ ಸಮಸ್ಯೆ ನಿವಾರಣೆ ಆಗಲಿದೆ ಎಂಬ ಸಲಹೆ ಹಿನ್ನೆಲೆಯಲ್ಲಿ ಮಗುವಿನ ಪಾಲಕರು ಒಂಟೆ ಹಾಲಿಗೆ ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ಪ್ರಧಾನ ಮಂತ್ರಿಯವರಿಗೆ ವಿಷಯ ತಿಳಿಸುವ ಕೆಲಸ ಮಾಡಿದ್ದರು. ಇದಕ್ಕೆ ಸ್ಪಂದಿಸಿ, ಮಗುವಿನ ಪಾಲಕರಿಗೆ ಒಂಟೆ ಹಾಲು ತಲುಪಿಸುವ ಕಾರ್ಯವನ್ನು ಪ್ರಧಾನ ಮಂತ್ರಿ ಕಚೇರಿ ಮಾಡಿತ್ತು. ಇದು ಮೋದಿ ಅವರಲ್ಲಿನ ಮಾತ‌ೃ ಹೃದಯದ ಪ್ರತೀಕವಾಗಿದೆ. ಮಕ್ಕಳು ಬರೆದ ಪತ್ರ- ಸಂದೇಶಗಳಿಗೂ ಸ್ಪಂದಿಸುವ ಮನೋಭಾವ ಅವರದ್ದಾಗಿದೆ.

ಗುಜರಾತ್‌ನ ಅಹ್ಮದಾಬಾದ್‌ನಲ್ಲಿದ್ದ ಟೈಲರ್‌ರೊಬ್ಬರು ಮೋದಿಯವರಿಗೆ ಅಂಗಿ ತಯಾರಿಸಿ ನೀಡಿದ್ದರು. ಅನಂತರ ಅವರು ಹುಬ್ಬಳ್ಳಿಗೆ ಬಂದು ವಾಸವಾಗಿದ್ದರು. ಈ ವಿಷಯ ತಿಳಿದ ಮೋದಿಯವರು, ಆ ಟೈಲರ್‌ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಿದ್ದರು. ಅಂತೆಯೇ ಮಾಹಿತಿ ಪಡೆದು ಅವರನ್ನು ಪ್ರಧಾನಿಯವರಿಗೆ ಭೇಟಿ ಮಾಡಿಸಿದ್ದೆ.

ಪ್ರಜಾಪ್ರಭುತ್ವ ಪರಿಪಾಲಕ: ಪ್ರಧಾನಿ ಮೋದಿ ಅವರೊಬ್ಬ ಪ್ರಜಾಪ್ರಭುತ್ವ ವಿರುದ್ಧ ನಿಲುವಿನ ವ್ಯಕ್ತಿತ್ವದವರು, ಸರ್ವಾಧಿಕಾರಿ ಧೋರಣೆ ಹೊಂದಿದವರು ಎಂಬ ಆರೋಪ ರಾಜಕೀಯ ವಿರೋಧಿಗಳು, ವಿಪಕ್ಷಗಳದ್ದಾಗಿದೆ. ಆದರೆ ಅವರೊಬ್ಬ ಪ್ರಜಾಪ್ರಭುತ್ವ ಪಾಲಕರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಗಾಧ ನಂಬಿಕೆ ಇರಿಸಿಕೊಂಡವರು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ಮನವರಿಕೆಯಾಗಿದ್ದಂತೂ ಸತ್ಯ.

ಕೇಂದ್ರ ಸಚಿವ ಸಂಪುಟಕ್ಕೆ ಬರುವ ವಿಷಯಗಳ ವಿಚಾರ ದಲ್ಲಿ ಅಂತಿಮ ಒಪ್ಪಿಗೆ ಪ್ರಧಾನಿಯವರದ್ದಾಗಿರುತ್ತದೆ. ವಿಷಯಗಳನ್ನು ಪರಿಶೀಲಿಸಿ ಪ್ರಧಾನಿಯವರು ಒಪ್ಪಿಗೆ ನೀಡಿದರೆಂದರೆ ಅದು ಬದಲಾವಣೆ ಇಲ್ಲದೆ ಮಂಡನೆಯಾಗುತ್ತದೆ. ಆದರೆ ಐದಾರು ವಿಷಯಗಳಲ್ಲಿ ಪ್ರಧಾನಿಯವರ ಅಂತಿಮ ಒಪ್ಪಿಗೆಯೊಂದಿಗೆ ಸಂಪುಟ ಸಭೆಯಲ್ಲಿ ವಿಷಯ ಮಂಡನೆಯಾದ ಅನಂತರ ಕೆಲವು ಸಚಿವರು ಅವು ಗಳಿಗೆ ಹೊಸ ಅಂಶಗಳ ಸೇರ್ಪಡೆ ಬಗ್ಗೆ ಪ್ರಸ್ತಾವಿಸಿದ್ದರು. ಇದಕ್ಕೆ ತತ್‌ಕ್ಷಣಕ್ಕೆ ಸ್ಪಂದಿಸಿದ್ದ ಪ್ರಧಾನಿ, ಹೊಸ ಅಂಶ- ವಿಚಾರಗಳು ಉತ್ತಮ ಎನ್ನಿಸುತ್ತಿವೆ ಎಂದಿದ್ದರು. ಸಂಪುಟ ಕಾರ್ಯದರ್ಶಿಯವರು ತಮ್ಮ ಒಪ್ಪಿಗೆ ದೊರೆತ ಅನಂತರ ವಿಷಯ ಅಂತಿಮವಾಗಿರುತ್ತದೆ ಎಂದಾಗಲೂ ಹೊಸ ವಿಚಾರ ಬಂದಾಗ ಪರಿಶೀಲಿಸಿ, ಅಧ್ಯಯನ ನಡೆಸಿ ಸೇರ್ಪಡೆ ಮಾಡಿದರೆ ತಪ್ಪೇನು ಎಂದು ಹೇಳುವ ಮೂಲಕ ವಿಷಯಗಳನ್ನೇ ಮುಂ ದೂಡಿ, ಹೊಸತನಕ್ಕೆ ಒತ್ತು ನೀಡಿದ್ದರು. ನಾನು ಹೇಳಿದ್ದೇ ಸತ್ಯ ಎಂಬ ನಿಲುವು ತಾಳಲೇ ಇಲ್ಲ.

ಪ್ರಧಾನಿ ಮೋದಿಯವರ ಗಟ್ಟಿ ನಾಯಕತ್ವ, ದೃಢ ನಿಲುವಿನ ಚಿಂತನೆ, ದೇಶ ಮೊದಲು ಎಂಬ ಭಾವನೆ ಯಿಂದಲೇ ಭಾರತ ಇಂದು ಜಗತ್ತಿನಲ್ಲಿ ಪ್ರಕಾಶಿಸು ವಂತಾಗಿದೆ. ಭಾರತವೆಂದರೆ ಲಘುವಾಗಿ ಪರಿಗಣಿಸುತ್ತಿದ್ದ ದೇಶಗಳೇ ಇಂದು ಭಾರತದೊಂದಿಗೆ ಸ್ನೇಹಕ್ಕಾಗಿ ಹಾತೊರೆಯುವಂತಾಗಿದೆ.

ಪ್ರಹ್ಲಾದ ಜೋಶಿ , ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ.

ಟಾಪ್ ನ್ಯೂಸ್

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ABV-Modi

A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

Basa-Horatti

ಮೇಲ್ಮನೆಗೆ ನಾನೇ ಫೈನಲ್‌, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

Boxing Day Test: ನೀಗಲಿ ಭಾರತದ ಬ್ಯಾಟಿಂಗ್‌ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್‌

High-Court

Covid: ಎನ್‌-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.