ಜಾಹೀರಾತು ದರ ಹೆಚ್ಚಿಸಿ: ಕೇಂದ್ರಕ್ಕೆ ಮನವಿ
ಮುದ್ರಣ ಮಾಧ್ಯಮಗಳ ಸ್ಥಿತಿ ಬಗ್ಗೆ ಸರ್ಕಾರಕ್ಕೆ ಐಎನ್‌ಎಸ್‌ಪತ್ರ
Team Udayavani, Apr 26, 2020, 6:14 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್-19 ವೈರಸ್ ವ್ಯಾಪಿಸುವಿಕೆಯು ಕಳೆದ ಎರಡು ತಿಂಗಳಿಂದ ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವ ಕಾರಣ, ಈ ಅವಧಿಯಲ್ಲಿ ಮುದ್ರಣ ಮಾಧ್ಯಮವು ಸುಮಾರು 4,500 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ. ಹೀಗಾಗಿ, ಕೇಂದ್ರ ಸರ್ಕಾರವು ಕೂಡಲೇ ಎಲ್ಲ ಪತ್ರಿಕಾ ಸಂಸ್ಥೆಗಳಿಗೆ 2 ವರ್ಷಗಳ ತೆರಿಗೆ ರಜೆ ಘೋಷಿಸಬೇಕು ಹಾಗೂ ಸರ್ಕಾರದ ಜಾಹೀರಾತಿನ ದರವನ್ನು ಹೆಚ್ಚಳ ಮಾಡಬೇಕು ಎಂದು ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ (ಐಎನ್‌ಎಸ್)ಮನವಿ ಮಾಡಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ರವಿ ಮಿತ್ತಲ್ ಅವರಿಗೆ ಈ ಕುರಿತು ಪತ್ರ ಬರೆದಿರುವ ಐಎನ್‌ಎಸ್ ಅಧ್ಯಕ್ಷ ಶೈಲೇಶ್ ಗುಪ್ತಾ, ಪತ್ರಿಕೆಗಳಿಗೆ ನೀಡಲಾದ ಜಾಹೀರಾತುಗಳ ಬಾಕಿ ಮೊತ್ತವನ್ನು ಕೂಡಲೇ ಪಾವತಿಸುವಂತೆ ಬ್ಯೂರೋ ಆಫ್ ಔಟ್ ರೀಚ್ ಆ್ಯಂಡ್ ಕಮ್ಯೂನಿಕೇಷನ್(ಬಿಒಸಿ)ಗೆ ಸೂಚನೆ ನೀಡಬೇಕು ಹಾಗೂ ವಿವಿಧ ರಾಜ್ಯ ಸರ್ಕಾರಗಳಿಗೂ ಈ ಕುರಿತು ಸಲಹೆ ನೀಡಬೇಕು ಎಂದೂ ಕೋರಿಕೊಂಡಿದ್ದಾರೆ.
ಕೋರಿಕೆಗಳೇನು?: ದೇಶದ ಮುದ್ರಣ ಮಾಧ್ಯಮಗಳಿಗೆ ಜಾಹೀರಾತಿನಿಂದಾಗಲೀ, ಪ್ರಸರಣದಿಂದಾಗಲೇ ಸದ್ಯಕ್ಕೆ ಯಾವುದೇ ಆದಾಯ ಬರುತ್ತಿಲ್ಲ. ಹೀಗಾಗಿ, ಎಲ್ಲ ಪತ್ರಿಕಾ ಸಂಸ್ಥೆಗಳಿಗೆ ಸರ್ಕಾರವು 2 ವರ್ಷಗಳ ತೆರಿಗೆ ರಜೆ ಘೋಷಿಸಬೇಕು, ಬಿಒಸಿ ಜಾಹೀರಾತು ದರವನ್ನು ಶೇ.50ರಷ್ಟು ಹೆಚ್ಚಳ ಮಾಡಬೇಕು, ಜಾಹೀರಾತಿನ ಬಾಕಿಯನ್ನು ತಕ್ಷಣ ಪಾವತಿಸಬೇಕು ಮತ್ತು ಮುದ್ರಣ ಮಾಧ್ಯಮಗಳಿಗೆ ಮೀಸಲಾದ ಬಜೆಟ್ ನ ವೆಚ್ಚವನ್ನು ಶೇ.100ರಷ್ಟು ಏರಿಸಬೇಕು ಎಂದು ಪತ್ರದಲ್ಲಿ ಗುಪ್ತಾ ಕೋರಿದ್ದಾರೆ.
ಪತ್ರಿಕೆಗಳ ಸದ್ಯದ ಸ್ಥಿತಿ ಬಗ್ಗೆ ಪತ್ರದಲ್ಲಿ ಬೆಳಕು ಚೆಲ್ಲಿರುವ ಅವರು, ಆರ್ಥಿಕ ಚಟುವಟಿಕೆಯು ಪತನಗೊಂಡಿರುವ ಕಾರಣ, ಖಾಸಗಿ ಕಂಪನಿಗಳಿಂದಲೂ ಜಾಹೀರಾತುಗಳು ಬರುವ ನಿರೀಕ್ಷೆಯಿಲ್ಲ. ಮುಂದಿನ 6-7 ತಿಂಗಳವರೆಗೆ ಮುದ್ರಣ ಮಾಧ್ಯಮಗಳು ಇದೇ ರೀತಿ ನಷ್ಟದಲ್ಲಿ ಮುಂದುವರಿಯಬೇಕಾಗುತ್ತದೆ. ಸರ್ಕಾರವು ಕೂಡಲೇ ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ, ಪತ್ರಿಕೆಗಳು ಮುಂದಿನ 7 ತಿಂಗಳಲ್ಲೇ
ಸುಮಾರು 12 ರಿಂದ 15 ಸಾವಿರ ಕೋಟಿ ರೂ. ನಷ್ಟ ಅನುಭವಿಸಬೇಕಾಗುತ್ತದೆ. ಇದು ಸುಮಾರು 30 ಲಕ್ಷ ನೌಕರರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದೂ ಉಲ್ಲೇಖೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.