ಕರುನಾಡಿನಲ್ಲಿ ಹುಲಿಗಳ ಸಂತತಿ ವೃದ್ಧಿ- ಮಧ್ಯಪ್ರದೇಶವನ್ನು ಹಿಂದಿಕ್ಕಲಿದೆ ಕರ್ನಾಟಕ?
- ಒಟ್ಟು 435 ಹುಲಿಗಳು ಪತ್ತೆ- ಜು. 29: ಅಂತಾರಾಷ್ಟ್ರೀಯ ವಾಘ್ರ ದಿನಾಚರಣೆ
Team Udayavani, Jul 28, 2023, 7:44 AM IST
ಬೆಂಗಳೂರು: ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳ ಸಹಿತ 37 ವನ್ಯಜೀವಿ ಧಾಮಗಳಲ್ಲಿ ಅಳವಡಿಸಿದ್ದ 4,786 ಕೆಮರಾಗಳ ಕಣ್ಣಿಗೆ 435 ಹುಲಿಗಳು ಕಂಡುಬಂದಿದ್ದು, ರಾಜ್ಯದಲ್ಲಿ ಒಟ್ಟು 600ಕ್ಕೂ ಹೆಚ್ಚು ವ್ಯಾಘ್ರಗಳು ಇರಬಹುದು ಎಂದು ಅಂದಾಜಿಸಲಾಗಿದೆ.
ಕಳೆದ ಬಾರಿ ಅಂದರೆ 2018ರಲ್ಲಿ ನಡೆದ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 524 ಹುಲಿಗಳಿದ್ದವು. ಮಧ್ಯಪ್ರದೇಶದಲ್ಲಿ 526 ಹುಲಿಗಳು ಪತ್ತೆಯಾಗಿದ್ದವು. ಆ ಮೂಲಕ ದೇಶದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿದ ರಾಜ್ಯ ಎಂಬ ಪಟ್ಟ ಮಧ್ಯಪ್ರದೇಶದ ಪಾಲಾಗಿತ್ತು. ಈ ಬಾರಿ ಕರ್ನಾಟಕವು ಇದನ್ನು ಮೀರಿ ನಂ. 1 ಸ್ಥಾನಕ್ಕೆ ಏರುವ ಸಾಧ್ಯತೆಗಳಿವೆ. ಪ್ರಸ್ತುತ ಕೆಮರಾ ಕಣ್ಣಿಗೆ ಬಿದ್ದಿರುವ ಹುಲಿಗಳ ಪೈಕಿ ಯೌವನಾವಸ್ಥೆಯವುಗಳೇ ಹೆಚ್ಚು.
ಪ್ರತೀ ವರ್ಷ ಜು. 29ರಂದು ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹುಲಿ ಗಣತಿ ವಿವರ ಬಿಡುಗಡೆ ಮಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ (ಎನ್‌ಟಿಸಿಎ)ದ ಮಾರ್ಗಸೂಚಿ ಅನ್ವಯ ರಾಜ್ಯದ ಹುಲಿ ಗಣತಿಯನ್ನು ವೈಜ್ಞಾನಿಕವಾಗಿ ನಡೆಸಿದ್ದು, ಈ ಗಣತಿಗೆ ಕೆಮರಾ ಟ್ರ್ಯಾಪ್ ಮತ್ತು ಲೈನ್ ಟ್ರಾನ್‌ಸ್ಟಾ éಕ್ಟ್ ವಿಧಾನ ಅನುಸರಿಸಲಾಗಿದೆ ಎಂದರು.
ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಭದ್ರಾ, ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ, ಕಾಳಿ ಕಾನನ ಸೇರಿ 37 ವನ್ಯಜೀವಿ ಧಾಮಗಳಲ್ಲಿ 4,786 ಹಾಗೂ ಸಂರಕ್ಷಿತ ಅರಣ್ಯಗಳಲ್ಲಿ ಸೇರಿ ಒಟ್ಟು 5,399 ಕೆಮರಾಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ 66.86 ಲಕ್ಷಕ್ಕೂ ಹೆಚ್ಚು ವನ್ಯಜೀವಿಗಳ ಛಾಯಾಚಿತ್ರ ದಾಖಲಾಗಿದೆ. ಇವುಗಳ ಪೈಕಿ 71 ಮರಿಗಳ ಸಹಿತ 435 ಹುಲಿಗಳು ಇದ್ದು, ಅವುಗಳ ಚಲನವಲನ, ಪ್ರಾದೇಶಿಕ ಪರಿಮಿತಿ, ಮೈಮೇಲಿನ ಪಟ್ಟೆಗಳ ಆಧಾರದ ಮೇಲೆ ಸಂಖ್ಯೆ ಗುರುತಿಸಲಾಗಿದೆ. ಇದಲ್ಲದೆ ಹುಲಿಗಳ ಮಲ, ಮೂತ್ರ, ಹೆಜ್ಜೆಗುರುತು ಮತ್ತಿತರ ವಿಧಾನಗಳಿಂದ ನಡೆಸಿರುವ ಗಣತಿ ಹಾಗೂ ಕೇಂದ್ರ ಸರಕಾರ ಬಿಡುಗಡೆ ಮಾಡುವ ಗಣತಿಗಳ ಆಧಾರದಲ್ಲಿ ರಾಜ್ಯದಲ್ಲಿರುವ ಹುಲಿಗಳ ಸಂಖ್ಯೆ 600ನ್ನು ದಾಟಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಇನ್ನೂ ಅರಣ್ಯ ಸುರಕ್ಷಿತವಾಗಿ ಉಳಿದಿರುವುದಕ್ಕೆ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ಅವರು ಕಾರಣ ಎಂದರೆ ತಪ್ಪಾಗಲಾರದು. ಇಬ್ಬರೂ ನೈಜ ಪರಿಸರ ಪ್ರೇಮಿಗಳಾಗಿದ್ದರು. ಅವರು ಅರಣ್ಯ ಸಂರಕ್ಷಣ ಕಾಯಿದೆ, ವನ್ಯಜೀವಿ ಸಂರಕ್ಷಣ ಕಾಯಿದೆ, ಅರಣ್ಯ ಹಕ್ಕು ಕಾಯಿದೆಗಳನ್ನು ಜಾರಿಗೆ ತಂದರು. ಇಲ್ಲವಾಗಿದ್ದರೆ, ಈ ವೇಳೆಗೆ ಅರಣ್ಯವೂ ಇರುತ್ತಿರಲಿಲ್ಲ. ಅರಣ್ಯವಾಸಿಗಳಿಗೆ ಅವರ ಹಕ್ಕೂ ದೊರಕುತ್ತಿರಲಿಲ್ಲ. ವನ್ಯಮೃಗಗಳೂ ಉಳಿಯುತ್ತಿರಲಿಲ್ಲ ಎಂದರು.
ದೇಶ, ರಾಜ್ಯದ ಹುಲಿಗಳ ಸಂಖ್ಯೆ
ವರ್ಷ ದೇಶ ರಾಜ್ಯ
2006 1,411 290
2010 1,706 300
2014 2,226 406
2018 2,967 524
2022 4,344 600+
ವರ್ಷ ಇರಿಸಿದ್ದ ಕೆಮರಾ ಪತ್ತೆಯಾದ ಒಟ್ಟು ಪ್ರಾಣಿಗಳ ಚಿತ್ರಗಳು ಪತ್ತೆಯಾದ ಹುಲಿಗಳು
2018 4,124 49,79,803 404
2022 4,786 66,86,450 435
5 ಹುಲಿ ಸಂರಕ್ಷಿತ ಪ್ರದೇಶ
ವಿಭಾಗ ಕೆಮರಾ ಪಾಯಿಂಟ್ ಪತ್ತೆಯಾದ ಪಟ್ಟೆ ಹುಲಿಗಳು
ಬಂಡೀಪುರ 612 140
ಭದ್ರಾ 330 26
ಬಿಆರ್‌ಟಿ 288 39
ಕಾಳಿ 448 19
ನಾಗರಹೊಳೆ 502 149
ಒಟ್ಟು 2,180 373
ಇತರ ಅರಣ್ಯ ವಿಭಾಗ
ವಿಭಾಗ ಕೆಮರಾ ಪಾಯಿಂಟ್ ಪತ್ತೆಯಾದ ಪಟ್ಟೆ ಹುಲಿಗಳು
ಬನ್ನೇರುಘಟ್ಟ 80 02
ಬೆಳಗಾವಿ 119 07
ಭದ್ರಾವತಿ 121 05
ಕಾವೇರಿ ವನ್ಯಜೀವಿಧಾಮ 473 02
ಚಿಕ್ಕಮಗಳೂರು ವನ್ಯಜೀವಿಧಾಮ 41 06
ಹಳಿಯಾಳ 106 01
ಕಾರವಾರ 135 01
ಕೊಪ್ಪ ವನ್ಯಜೀವಿ ಧಾಮ 50 06
ಕುದುರೆಮುಖ ವನ್ಯಜೀವಿ ಧಾಮ 173 02
ಮಡಿಕೇರಿ ವಿಭಾಗ 171 03
ಮಡಿಕೇರಿ ವನ್ಯಜೀವಿ ಧಾಮ 175 11
ಮಲೆಮಹದೇಶ್ವರ ಬೆಟ್ಟ 432 05
ಮೈಸೂರು 36 04
ಶಿವಮೊಗ್ಗ 182 01
ಶಿರಸಿ 107 00
ವಿರಾಜಪೇಟೆ 111 04
ಯಲ್ಲಾಪುರ 94 02
ಒಟ್ಟು 2,606 57
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.