MBBS ನಲ್ಲಿ 553 ಸೀಟು ಹೆಚ್ಚಳ
Team Udayavani, Aug 5, 2023, 10:24 PM IST
ಬೆಂಗಳೂರು: ಪ್ರಸಕ್ತ ವರ್ಷ ಎಂಬಿಬಿಎಸ್ ಶಿಕ್ಷಣ ಆಕಾಂಕ್ಷಿಗಳಿಗೆ ಸಂತಸದ ಸುದ್ದಿ. ಹೊಸತಾಗಿ 533 ಸೀಟುಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಹೀಗಾಗಿ ರಾಜ್ಯ ಕೋಟಾದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಸೀಟುಗಳ ಸಂಖ್ಯೆ 11,595ಕ್ಕೆ ಏರಿಕೆಯಾಗಲಿದೆ. ಚಿತ್ರದುರ್ಗ ವೈದ್ಯಕೀಯ ವಿಜ್ಞಾನಗಳ ಮತ್ತು ಸಂಶೋಧನ ಸಂಸ್ಥೆ ಮತ್ತು ಚನ್ನಪಟ್ಟಣದ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ ತಲಾ 150 ಸೀಟು, ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನ ಸಂಸ್ಥೆಯಲ್ಲಿ 50 ಸೀಟುಗಳಿಗೆ ರಾಷ್ಟ್ರೀಯ ವೈದ್ಯಕೀಯ ಪ್ರಾಧಿಕಾರ ಅನುಮೋದನೆ ನೀಡಿರುವುದು ಸೀಟು ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಉಳಿದಂತೆ ಹಾಲಿ ಇರುವ ಕೆಲವು ಸರಕಾರಿ ವೈದ್ಯಕೀಯ ಹಾಗೂ ಖಾಸಗಿ ಕಾಲೇಜುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಸೀಟುಗಳನ್ನು ಹೆಚ್ಚಿಸಿದ್ದೂ ಇದರಲ್ಲಿ ಸೇರಿದೆ.
2022-23ರಲ್ಲಿ 11,042 ಸೀಟುಗಳು ಲಭ್ಯವಾಗಿದ್ದರೆ ಈ ವರ್ಷ 553 ಸೀಟುಗಳು ಏರಿಕೆಯಾಗಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿರುವ ಪರಿಷ್ಕೃತ ಸೀಟು ಮ್ಯಾಟ್ರಿಕ್ಸ್ ಅನ್ವಯ ಸರಕಾರಿ ಮೆಡಿಕಲ್ ಕಾಲೇಜುಗಳ 572 ಸೀಟುಗಳು ಅಖೀಲ ಭಾರತ ಮಟ್ಟದ ಕೋಟಾಕ್ಕೆ ಸೇರಲಿವೆ. ಸರಕಾರಿ ಕೋಟಾದ 4,982 ಸೀಟು, 2,501 ಡೀಮ್ಡ್ ವಿ.ವಿ. ಕೋಟಾ, 2,512 ಖಾಸಗಿ ವಿ.ವಿ. ಕೋಟಾ, 767 ಎನ್‌ಆರ್‌ಐ ಕೋಟಾ ಮತ್ತು 261 ಇನ್ನಿತರ ಸೀಟುಗಳು ಲಭ್ಯವಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.