ಉಕ್ರೇನ್ ಗಡಿಯಲ್ಲಿರುವ ಪುಟ್ಟ ರಾಷ್ಟ್ರದಲ್ಲಿ ಹೆಚ್ಚಿದ ಆತಂಕ
ಮಾಲ್ಡೋವಾದಲ್ಲಿಯೂ ಭಾರತೀಯ ವಿದ್ಯಾರ್ಥಿಗಳ ತ್ರಿಶಂಕು ಸ್ಥಿತಿ
Team Udayavani, Mar 12, 2022, 7:23 AM IST
ಮಂಗಳೂರು: ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳು ಸ್ವದೇಶ ತಲುಪುತ್ತಿದ್ದಾರೆ. ಆದರೆ ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಪುಟ್ಟ ದೇಶ ಮಾಲ್ಡೋವಾದಲ್ಲಿರುವ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.
ಮಾಲ್ಡೋವಾ ತೊರೆಯಲು ಅವಕಾಶವಿಲ್ಲದೆ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಭಾರತೀಯ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಉಕ್ರೇನ್‌ನೊಂದಿಗೆ ಶೇ. 70ರಷ್ಟು ಗಡಿ ಹಂಚಿಕೊಂಡಿರುವ ಮಾಲ್ಡೋವಾದಲ್ಲಿ ಈಗ ಉಕ್ರೇನ್‌ನಿಂದ ವಲಸೆ ಬಂದಿರುವವರು ತುಂಬಿ ಹೋಗಿದ್ದಾರೆ. ಮಾಲ್ಡೋವಾದ ಹಾಸ್ಟೆಲ್‌ಗಳು ಕೂಡ ಉಕ್ರೇನ್ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿವೆ. ರಷ್ಯಾದ ಆಕ್ರಮಣ ಇನ್ನಷ್ಟು ದಿನ ಮುಂದುವರಿದರೆ ಮಾಲ್ಡೋವಾದ ಮೇಲೆ ಭಾರೀ ಒತ್ತಡ ಬೀಳಲಿದೆ.
ರಷ್ಯಾ ಒಂದು ವೇಳೆ ಪ್ರಬಲ ಬಾಂಬ್ ದಾಳಿ ನಡೆಸಿದರೆ ಮಾಲ್ಡೋವಾದ ಮೇಲೂ ಭಾರೀ ಪರಿಣಾಮಉಂಟಾಗುವ ಸಾಧ್ಯತೆ ಇದೆ. ಅಣ್ವಸ್ತ್ರ ಪ್ರಯೋಗಿಸಿದರಂತೂ ಅದರ ಅತೀ ಹೆಚ್ಚು ಪರಿಣಾಮ ಉಂಟಾಗಿ ದೇಶವೇ ನಿರ್ನಾಮವಾಗಬಹುದು ಎಂಬುದು ಅಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳ ಆತಂಕ.
ಭಾರತೀಯರು ಮಾತ್ರ ಬಾಕಿಮಾಲ್ಡೋವಾದಿಂದ ಭಾರತಕ್ಕೆ ಬರುವ ವಿಚಾರದಲ್ಲಿ ವಿದ್ಯಾರ್ಥಿಗಳು ತೀವ್ರ ಗೊಂದಲಕ್ಕೀಡಾಗಿದ್ದಾರೆ. “ನಮ್ಮ ವೀಸಾ ಅವಧಿ ಮುಂದಿನ ತಿಂಗಳಿನವರೆಗೆ ಮಾತ್ರ ಇದೆ.ಭಾರತಕ್ಕೆ ಬರಲು ವಿ.ವಿ.ಯವರೇ ಗ್ರೀನ್ ಕಾರ್ಡ್/ವೀಸಾ ವಿಸ್ತರಣೆ ಮಾಡಬೇಕು. ನಾವು ಮಾಲ್ಡೋವಾ ತೊರೆಯಲು ಅವರೇ ಒಪ್ಪಿಗೆ ನೀಡಬೇಕು. ಇಲ್ಲವಾದರೆ ಮತ್ತೆ ಮಾಲ್ಡೋವಾಕ್ಕೆ ಬರಲು ಭಾರೀ ಸಮಸ್ಯೆ ಯಾಗುತ್ತದೆ. ಇಲ್ಲಿದ ದಕ್ಷಿಣ ಆಫ್ರಿಕಾ, ಇರಾನ್, ಟರ್ಕಿ ಮೊದಲಾದ ದೇಶಗಳ ವಿದ್ಯಾರ್ಥಿಗಳು ಸ್ವದೇಶಕ್ಕೆ ತೆರಳಿದ್ದಾರೆ. ಅವರಿಗೆ ಸುಲಭದಲ್ಲಿ ವೀಸಾ ದೊರೆಯುತ್ತದೆ. ಭಾರತದ ಯಾರು ಕೂಡ ಮಾಲ್ಡೋವಾದಿಂದ ಹೋಗಿಲ್ಲ’ ಎಂದು ಕರ್ನಾಟಕದ ವಿದ್ಯಾರ್ಥಿಗಳು “ಉದಯವಾಣಿ’ ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
800ಕ್ಕೂ ಅಧಿಕ ವಿದ್ಯಾರ್ಥಿಗಳು
ಮಾಲ್ಡೋವಾದಲ್ಲಿ ಭಾರತದ 800ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಕರ್ನಾಟಕದವರೂ ಹಲವರಿದ್ದಾರೆ. ಸದ್ಯ ಮಾಲ್ಡೋವಾದ ವಿಶ್ವವಿದ್ಯಾನಿಲಯಗಳಲ್ಲಿ ತರಗತಿಗಳು ನಡೆಯುತ್ತಿವೆ. ವಿದ್ಯಾಭ್ಯಾಸಕ್ಕೆ ತೊಡಕಾಗಿಲ್ಲ. ಮಾಲ್ಡೋವಾದ ಮೇಲೂ ಆಕ್ರಮಣವಾಗಬಹುದು ಎಂಬ ಆತಂಕದಿಂದ ಸುರಕ್ಷೆಯ ಭೀತಿ ದಿನೇ ದಿನೆ ಹೆಚ್ಚುತ್ತಿದೆ. ಒಂದು ವೇಳೆ ಭಾರತಕ್ಕೆ ಬಂದರೆ ಮಾಲ್ಡೋವಾಕ್ಕೆ ವಾಪಸಾಗುವುದು ಕಷ್ಟ. ಯುನಿವರ್ಸಿಟಿಯವರು ಕೂಡ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಈ ದೇಶದಲ್ಲಿ ಭಾರತೀಯ ರಾಯಭಾರ ಕಚೇರಿಯೂ ಇಲ್ಲ ಎಂದು ಮಾಲ್ಡೋವಾದಲ್ಲಿರುವ ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.