ಕೋವಿಡ್‌ನಿಂದಾಗಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ
Team Udayavani, Jun 27, 2020, 10:39 AM IST
ಮಣಿಪಾಲ: ಈ ವರ್ಷದ ಆರಂಭದಲ್ಲಿ ಬಹುತೇಕ ಎಲ್ಲ ದೇಶಗಳು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ, ಕಡಿಮೆ ಮಾಡುವ ನಿರ್ಧಾರವನ್ನು ಮಾಡಿದ್ದವು. ಪ್ಲಾಸ್ಟಿಕ್‌ನಿಂದ ಭೂಮಿ ಈಗಾಗಲೇ ಸಂಪೂರ್ಣವಾಗಿ ನಾಶವಾಗುತ್ತಿದ್ದು ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂದು ಸಹಮತಕ್ಕೂ ಬಂದಿದ್ದವು. ಅದಕ್ಕಾಗಿ ಮರು ಬಳಕೆಯ ಚೀಲಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿತ್ತು. ಪ್ಲಾಸ್ಟಿಕ್ ಬದಲಿ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೀಗ ಎಲ್ಲವನ್ನೂ ಕೋವಿಡ್ 19 ಮಹಾಮಾರಿ ಬುಡಮೇಲುಗೊಳಿಸಿದೆ.
ಡಿಸೆಂಬರ್ ಆರಂಭದಲ್ಲಿ ಕಾಣಿಸಿಕೊಂಡ ಈ ವೈರಸ್ ಮತ್ತೆರಡು ತಿಂಗಳಲ್ಲಿ ಇಡೀ ಜಗತ್ತಿಗೆ ವ್ಯಾಪಿಸಿ ದೇಶಗಳನ್ನು ಸ್ತಬ್ಧಗೊಳಿಸಿತು. ಲಾಕ್‌ಡೌನ್‌ನಿಂದಾಗಿ ಸಮಾಜ ಮತ್ತೆ ಹಿಂದಿನಂತೆ ಬದಲಾಯಿತು, ಪ್ರಕೃತಿಯಲ್ಲಿ ಮಾಲಿನ್ಯಗಳು ಕಡಿಮೆಯಾದವು ಎಂಬ ವಿಷಯಗಳನ್ನು ಚರ್ಚಿಸುವ ನಡುವೆಯೇ ನಾವು ಸೋಂಕಿನಿಂದ ಪ್ಲಾಸ್ಟಿಕ್ ಮತ್ತೆ ನಮ್ಮ ನಡುವೆ ಜಾಗ ಪಡೆದುದನ್ನು ಮರೆತೇ ಬಿಟ್ಟಿದ್ದೇವೆ. ಕಡಿಮೆಯಾದ ಮಾಲಿನ್ಯದ ದುಪ್ಪಟ್ಟು ಪ್ಲಾಸ್ಟಿಕ್ ತ್ಯಾಜ್ಯ ತ್ಯಾಜ್ಯ ಕೋವಿಡ್‌ನಿಂದ ಸೃಷ್ಟಿಯಾಗುತ್ತಿದೆ ಎಂಬುದು ಮಾತ್ರ ಆತಂಕಕಾರಿ ವಿಷಯ.
ಸೋಂಕು ತೀವ್ರವಾಗಿ ಹರಡುತ್ತಿರುವಾಗ ವೈದ್ಯಕೀಯ ವಿಭಾಗಗಳಿಗೆ ಹೇರಳವಾಗಿ ಪಿಪಿಇ ಕಿಟ್ ಮತ್ತು ಮರುಬಳಕೆ ಸಾಧ್ಯವಿಲ್ಲದ ವೈದ್ಯಕೀಯ ಉಪಕರಣಗಳ ಬಳಕೆ ಅಗತ್ಯ ಬಂತು. ಇವುಗಳಲ್ಲಿ ಹೆಚ್ಚಿನವು ಪ್ಲಾಸ್ಟಿಕ್‌ನಿಂತ ತಯಾರಿಸಲ್ಪಡುತ್ತಿದ್ದು, ಈ ತ್ಯಾಜ್ಯಗಳು ಆಸ್ಪತ್ರೆಯ ಪರಿಸರದಲ್ಲಿ ರಾಶಿ ಬೀಳುತ್ತಿವೆ. ಆರೋಗ್ಯ ಕಾರ್ಯಕರ್ತರು, ಸ್ವಯಂ ಸೇವಕರು, ಶುಚಿಗೊಳಿಸುವವರು, ಸಾಮಾನ್ಯ ಜನರು ಎಲ್ಲರೂ ಸೋಂಕಿನಿಂದ ರಕ್ಷಣೆಗಾಗಿ ಇಂತಹ ಕಿಟ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದು ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದರ ಜತೆಗೆ ಮಾಸ್ಕ್, ಗ್ಲೌಸ್‌ಗಳ ತ್ಯಾಜ್ಯವೂ ವಿಪರೀತವಾಗಿದೆ.ಹೊಟೇಲ್, ರೆಸ್ಟೋರೆಂಟ್‌ಗಳು ಆರಂಭವಾಗಿದ್ದರೂ ಹೆಚ್ಚಿನ ಕಡೆಗಳಲ್ಲಿ ಕುಳಿತು ತಿನ್ನುವುದಕ್ಕೆ ಅವಕಾಶವಿಲ್ಲ. ಎಲ್ಲವೂ ಪಾರ್ಸೆಲ್. ಅದು ಲಭಿಸುವುದು ಪ್ಲಾಸ್ಟಿಕ್ ಡಬ್ಬಗಳಲ್ಲಿ. ಇದೂ ಕೂಡ ಈ ಸಂದರ್ಭದಲ್ಲಿ ಅಧಿಕವಾಗಿಯೇ ಇದೆ. ಆರೋಗ್ಯ ವಿಭಾಗದಲ್ಲಿ ಸುರಕ್ಷತೆ ದೃಷ್ಟಿಯಿಂದ ಪ್ಲಾಸ್ಟಿಕ್ ಅಗತ್ಯ ಬಹಳವಾಗಿಯೇ ಇದೆ. ಅದನ್ನು ಕಡಿಮೆ ಮಾಡಬೇಕಾದರೆ ಸೋಂಕಿತರ ಪ್ರಮಾಣ ಕಡಿಮೆಯಾಗಬೇಜಕಾದ ಅವಶ್ಯಕತೆಯಿದೆ.
ವಿಶ್ವ ಪ್ಲಾಸ್ಟಿಕ್ ಮುಕ್ತವಾಗಬೇಕೆಂಬ ಹೊತ್ತಿನಲ್ಲಿಯೇ ವಕ್ಕರಿಸಿದ ಸೋಂಕು ಇದೀಗ ಮತ್ತೆ ಅಪಾಯವನ್ನು ತಂದೊಡ್ಡುತ್ತಿದೆ. ತ್ಯಾಜ್ಯದ ಪ್ರಮಾಣವೂ ದಿನಕಳೆದಂತೆ ಹೆಚ್ಚುತ್ತಿದೆ. ವಿಶ್ವದೆಲ್ಲೆಡೆ ಸೋಂಕಿತರ ಸಂಖ್ಯೆ 90 ಲಕ್ಷದ ಗಡಿಯನ್ನು ದಾಟಿದ್ದು, ತ್ಯಾಜ್ಯದ ಪ್ರಮಾಣವೂ ಇಷ್ಟೇ ಇರಬಹುದು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಇದನ್ನು ಕಡಿಮೆ ಮಾಡಬೇಕಾದ ಅಗತ್ಯ ಮತ್ತು ಅನಿವಾರ್ಯವಿದೆ. ಉತ್ಪಾದನಾ ಕಂಪೆನಿಗಳು ಮರುಬಳಕೆಯ ವಸ್ತುಗಳನ್ನು ಹೆಚ್ಚು ಉತ್ಪಾದಿಸಿದರೆ ಮಾತ್ರ ತ್ಯಾಜ್ಯಗಳು ಕಡಿಮೆಯಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.